ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿಯಲ್ಲಿ ಅನರ್ಹ ಶಾಸಕರ ಜೊತೆ ಇರುವ ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಆಗಸ್ಟ್ 22: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಾಗೂ ಗೃಹ ಸಚಿವ ಅಮಿತ್ ಶಾ ಜೊತೆ ಶುಕ್ರವಾರ (ಆಗಸ್ಟ್ 23)ರಂದು ಮಾತುಕತೆ ನಡೆಸುವುದಾಗಿ ಜೆಡಿಎಸ್ ಎಂಎಲ್‌ಸಿ ಸಿ ಪುಟ್ಟಣ್ಣ ತಿಳಿಸಿದ್ದಾರೆ.

ಅನರ್ಹ ಶಾಸಕರಿಗೆ ಸಾಕಷ್ಟು ಗೊಂದಲಗಳಿವೆ ಅದನ್ನು ಬಗೆಹರಿಸಲೇಬೇಕು. ಯಾಕೆಂದರೆ ಚುನಾವಣೆಯಲ್ಲಿ ಗೆದ್ದಿರುವವರನ್ನು ಬಿಟ್ಟು ಸೋತಿರುವವರಿಗೆ ಸಚಿವ ಸ್ಥಾನವನ್ನು ನೀಡಿದ್ದಾರೆ. ಸರ್ಕಾರ ರಚನೆಗಿಂತ ಮೊದಲು ಹೇಳಿದ್ದೇ ಬೇರೆ ಈಗ ಆಗುತ್ತಿರುವುದೇ ಬೇರೆ ಎಂದು ಬೇಸರ ವ್ಯಕ್ತಪಡಿಸಿದರು.

ಅನರ್ಹ ಶಾಸಕರ ವಿಚಾರದಲ್ಲಿ ಯಡಿಯೂರಪ್ಪ ಕೈಬಿಟ್ಟ ಹೈಕಮಾಂಡ್? ಅನರ್ಹ ಶಾಸಕರ ವಿಚಾರದಲ್ಲಿ ಯಡಿಯೂರಪ್ಪ ಕೈಬಿಟ್ಟ ಹೈಕಮಾಂಡ್?

ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇದೆ, ಬಿಜೆಪಿ ಜೊತೆಗೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನೂ ಕೂಡ ಕರೆದುಕೊಂಡು ಕರೆದುಕೊಂಡು ಹೋಗಬೇಕು ಎನ್ನುವುದು ನಮ್ಮ ಮನವಿ. ಮಹೇಶ್ ಕುಮಟಳ್ಳಿ ಎದುರು ಸೋತವರಿಗೆ ಸಚಿವ ಸ್ಥಾನ ನೀಡಿದರೆ ಅವರಿಗೆ ಬೇಸರವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

JDS MLC C Puttanan Is With Disqualified MLA

ರಾಜೀನಾಮೆ ವೇಳೆ ನಮ್ಮ ಜೊತೆ ಮಾತುಕತೆ ನಡೆಸಿದವರೇ ಬೇರೆ, ಈಗ ನಾವೇ ಮಾಡಿಸಿದ್ದು ಎಂದು ಓಡಾಡುತ್ತಿರುವವರೇ ಬೇರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

English summary
JDS MLCC Puttanna has said that it will hold talks with Chief Minister BS Yediyurappa and Home Minister Amit Shah on Friday (August 23).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X