ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುದುರೆ ವ್ಯಾಪಾರದ ಆತಂಕ: ರೆಸಾರ್ಟ್‌ನತ್ತ ಜೆಡಿಎಸ್ ಶಾಸಕರು

|
Google Oneindia Kannada News

ಬೆಂಗಳೂರು, ಜುಲೈ 08: ಇನ್ನಷ್ಟು ಶಾಸಕರು ಬಿಜೆಪಿಯ ಆಪರೇಷನ್‌ಗೆ ಬಲಿ ಆಗದಂತೆ ತಡೆಯಲು ಜೆಡಿಎಸ್‌ನ ಶಾಸಕರನ್ನು ದೇವನಹಳ್ಳಿ ಬಳಿಯ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ.

ಅಲ್ಲಿಗೆ ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕನೇ ಬಾರಿಗೆ ರೆಸಾರ್ಟ್‌ ರಾಜಕಾರಣ ಪ್ರಾರಂಭವಾಗಿದೆ.

ರಾಜಕೀಯ ಬೆಳವಣಿಗೆ ಬಗ್ಗೆ ಸಿಎಂ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆರಾಜಕೀಯ ಬೆಳವಣಿಗೆ ಬಗ್ಗೆ ಸಿಎಂ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ

ಮೈತ್ರಿ ಸರ್ಕಾರದ 13 ಮಂದಿ ಶಾಸಕರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ, ಅದರಲ್ಲಿ ಜೆಡಿಎಸ್‌ನ ಮೂವರು ಶಾಸಕರೂ ಇದ್ದಾರೆ, ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡುವ ಆತಂಕ ಇದೆ, ಹಾಗಾಗಿ ಜೆಡಿಎಸ್ ಶಾಸಕರನ್ನು ಕಾಯ್ದುಕೊಳ್ಳಲು ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ.

JDS MLAs went to resort near Devenahalli

ದೇವನಹಳ್ಳಿ ಬಳಿಯ ನಂದಿ ಬೆಟ್ಟದ ರಸ್ತೆಯಲ್ಲಿರುವ 'ಪ್ರೆಸ್ಟಿಜ್ ಗಾಲ್ಫಶೈರ್' ಎಂಬ ಐಶಾರಾಮಿ ರೆಸಾರ್ಟ್‌ಗೆ ಜೆಡಿಎಸ್‌ನ ಶಾಸಕರನ್ನು ಕರೆದೊಯ್ಯಲಾಗಿದ್ದು, ಕುಮಾರಸ್ವಾಮಿ ಸಹ ಅವರೊಂದಿಗೆ ತೆರಳಿದ್ದು, ದೇವೇಗೌಡ ಅವರು ಸಹ ಅಲ್ಲಿಯೇ ತಂಗಲಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ನಾಯಕರಿಗೆ 24 ಗಂಟೆಯ ಗಡುವು ಕೊಟ್ಟ ಕುಮಾರಣ್ಣ!ಕಾಂಗ್ರೆಸ್ ನಾಯಕರಿಗೆ 24 ಗಂಟೆಯ ಗಡುವು ಕೊಟ್ಟ ಕುಮಾರಣ್ಣ!

ರಾಜ್ಯ ರಾಜಕಾರಣದಲ್ಲಿ ಎರಡು ದಿನದಿಂದ ನಡೆಯುತ್ತಿರುವ ರಾಜಕೀಯ ನಾಟಕ ನಾಳೆ ತಾರ್ತಿಕ ಅಂತ್ಯ ಕಾಣುವ ಸಾಧ್ಯತೆ ಇದೆ, ನಾಳೆ ಸ್ಪೀಕರ್ ರಮೇಶ್ ಕುಮಾರ್ ಅವರು ವಿಧಾನಸೌಧಕ್ಕೆ ಆಗಮಿಸಲಿದ್ದು, ಅವರ ಕೈಯಲ್ಲಿ ಮೈತ್ರಿ ಸರ್ಕಾರದ ಭವಿಷ್ಯವಿದೆ.

English summary
Resort politics again started in Karnataka. JDS mlas today evening went to prestige golf shire resort. Kumaraswamy and Deve Gowda expecting to stay there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X