ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸಖ್ಯ ಬಯಸುತ್ತಿರುವ ಜೆಡಿಎಸ್ ಶಾಸಕರು: ಬಿಜೆಪಿ ನಾಯಕರು ಏನಂದ್ರು?

|
Google Oneindia Kannada News

Recommended Video

ಕಾಂಗ್ರೆಸ್ ಗೆ ಶಾಕ್ ನೀಡಿದ ಜೆಡಿಎಸ್ ಪಕ್ಷದ ಶಾಸಕರು..? | Oneindia Kannada

ಬೆಂಗಳೂರು, ಜುಲೈ 27: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿಶ್ವಾಸಮತ ಯಾಚನೆ ಸಮಯದಲ್ಲಿ ಬಾಹ್ಯ ಬೆಂಬಲ ನೀಡುವಂತೆ ಜೆಡಿಎಸ್ ಶಾಸಕರು ಹೇಳಿರುವುದು ಸ್ವಾಗತಾರ್ಹ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.

ಕುಮಾರಸ್ವಾಮಿ ಬಹುಮತ ಸಾಬೀತು ಪಡಿಸಲು ಸಾಧ್ಯವಾಗದೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಾಗಿದೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿಯಾಗಿದೆ.

ಈಗ ಜೆಡಿಎಸ್ ಶಾಸಕರು ಬಿಜೆಪಿ ಸಖ್ಯ ಬಯಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.ಈ ಕುರಿತು ಜೆಡಿಎಸ್ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.

ಸರ್ಕಾರ ಪತನಕ್ಕೆ ಕಾರಣ ಏನು?: ಕಾದು ನೋಡಿ, ಮುಂದೆ ಹೇಳ್ತೀನಿ ಎಂದ ಸತೀಶ್ ಜಾರಕಿಹೊಳಿಸರ್ಕಾರ ಪತನಕ್ಕೆ ಕಾರಣ ಏನು?: ಕಾದು ನೋಡಿ, ಮುಂದೆ ಹೇಳ್ತೀನಿ ಎಂದ ಸತೀಶ್ ಜಾರಕಿಹೊಳಿ

ಮೈತ್ರಿ ಸರ್ಕಾರ ಉರುಳಿದ ಬಳಿಕ ಜೆಡಿಎಸ್ ಕೆಲ ಶಾಸಕರಲ್ಲಿ ಹೊಸ ಆಲೋಚನೆ ಮೂಡಿದ್ದು, ಬಾಹ್ಯವಾಗಿ ಬಿಜೆಪಿಗೆ ಬೆಂಬಲ ನೀಡಲು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಬಳಿ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

ಶುಕ್ರವಾರ ಸಂಜೆ ತಾಜ್ ವೆಸ್ಟ್‌ ಎಂಡ್ ಹೋಟೆಲ್‌ನಲ್ಲಿ ಸಭೆ ನಡೆದಿತ್ತು. ಬಳಿಕ ಶಾಸಕ ಜಿಟಿ ದೇವೇಗೌಡ ಅವರು ಮಾತನಾಡಿ, ಪಕ್ಷದ ಎಲ್ಲ ಶಾಸಕರು ಕೂಡ ಒಗ್ಗಟ್ಟಿನಿಂದ ಇರಲು ಪಕ್ಷದ ಶಾಸಕರ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಈ ವೇಳೆ ಕೆಲ ಶಾಸಕರು ವಿರೋಧಿ ಪಕ್ಷದಲ್ಲಿ ಕುಳಿತು ಕೆಲಸ ಮಾಡುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನುವುದಾಗಿ ತಿಳಿಸಿದ್ದರು.

ಅಧಿಕಾರಕ್ಕೆ ಬರುತ್ತಿದ್ದಂತೆ ಬಿಎಸ್‌ವೈಗೆ ಸಂಕಷ್ಟ: ಹಳೆ ಕೇಸ್ ರೀಓಪನ್ಅಧಿಕಾರಕ್ಕೆ ಬರುತ್ತಿದ್ದಂತೆ ಬಿಎಸ್‌ವೈಗೆ ಸಂಕಷ್ಟ: ಹಳೆ ಕೇಸ್ ರೀಓಪನ್

ಈ ಹಿನ್ನೆಲೆಯಲ್ಲಿ ಶಾಸಕರ ಅಭಿಪ್ರಾಯಕ್ಕೆ ಎಚ್‍ಡಿಡಿ ಒಪ್ಪಿಗೆ ನೀಡುತ್ತಾರಾ ಎಂಬ ಅನುಮಾನ ಮೂಡಿದೆ. ಮತ್ತಷ್ಟು ಶಾಸಕರು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಹೇಳಿದ್ದಾರೆ. ಎಲ್ಲ ಶಾಸಕರು ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿರ್ಧಾರವನ್ನು ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ ಎಂದರು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೋಮವಾರ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ತಮ್ಮ ಹುಟ್ಟೂರಾದ ಬೂಕನಕೆರೆಗೆ ಶನಿವಾರ ಭೇಟಿ ನೀಡಿದ್ದಾರೆ. ಅಲ್ಲಿ ಕುಲದೇವರಿಗೆ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಜಿಟಿ ದೇವೇಗೌಡ ಬಿಜೆಪಿಗೆ ಬೆಂಬಲ

ಜಿಟಿ ದೇವೇಗೌಡ ಬಿಜೆಪಿಗೆ ಬೆಂಬಲ

ಜಿಟಿ ದೇವೇಗೌಡ ಅವರು ಕೂಡ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಕುಮಾರಸ್ವಾಮಿ ಅವರು ಯಾವುದೇ ತೀರ್ಮಾನ ಪ್ರಕಟಿಸಿಲ್ಲ. ಎಚ್‌ಡಿ ದೇವೇಗೌಡ ಅವರ ಜೊತೆ ಚರ್ಚೆ ನಡೆಸಿ ಈ ಬಗ್ಗೆ ಹೇಳುವುದಾಗಿ ಅವರು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಜೆಪಿಗೆ ಜೆಡಿಎಸ್‍ನಿಂದ ಬಾಹ್ಯ ಬೆಂಬಲ ನೀಡುವುದರಿಂದ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ ಸಿಗುವುದು ಹಾಗೂ ಪಕ್ಷದ ಸಂಘಟನೆಗೆ ಸಹಕಾರಿ ಆಗಲಿದೆ ಎಂಬುವುದು ಕೆಲ ಶಾಸಕರ ಅಭಿಪ್ರಾಯವಾಗಿದೆ.

 ಯಡಿಯೂರಪ್ಪ ಮತ ಯಾಚನೆ ವೇಳೆ ಗೈರಾಗಲು ಸೂಚನೆ?

ಯಡಿಯೂರಪ್ಪ ಮತ ಯಾಚನೆ ವೇಳೆ ಗೈರಾಗಲು ಸೂಚನೆ?

ಪಕ್ಷದ ಶಾಸಕರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಸೋಮವಾರ ಬಿಎಸ್ ಯಡಿಯೂರಪ್ಪ ಅವರು ಬಹುಮತಯಾಚನೆ ವೇಳೆ ಗೈರಾಗಲು ಕೂಡ ಸಲಹೆ ಲಭಿಸಿದೆ ಎನ್ನಲಾಗಿದೆ.

ಬಿಜೆಪಿಯೂ ಉತ್ತಮ ಸರ್ಕಾರ ನೀಡುತ್ತೆ?

ಬಿಜೆಪಿಯೂ ಉತ್ತಮ ಸರ್ಕಾರ ನೀಡುತ್ತೆ?

ಅನೇಕ ಜನ ಜೆಡಿಎಸ್ ನಲ್ಲಿರೋ ಶಾಸಕರು ಬಿಜೆಪಿಯೂ ಉತ್ತಮ ಸರ್ಕಾರ ನೀಡುತ್ತೆ, ಅಂತಾ ಬಾಹ್ಯ ಬೆಂಬಲ ನೀಡಲು ಮುಂದಾಗಿದ್ದಾರೆ. ನಮ್ಮ ಪಕ್ಷದಲ್ಲಿ ಆ ರೀತಿಯ ಯೋಜನೆಯಲ್ಲಿ ನಾವು ಇಲ್ಲ.

ನಮ್ಮ ಯಡಿಯೂರಪ್ಪನ ಸರ್ಕಾರದ ಬಗ್ಗೆ ಒಲವು ತೋರಿಸಿರೋ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೆಡಿಎಸ್ ವರಿಷ್ಠ ನಾಯಕರಿಂದ ನಮ್ಮಗೆ ಆ ರೀತಿಯ ಬೇಡಿಕೆ ಬಂದ್ರೇ ನಮ್ಮ ವರಿಷ್ಠರು ತಿರ್ಮಾನ ಮಾಡುತ್ತಾರೆ..

ಸೋಮವಾರ 100 ಕ್ಕೆ 100 ಬಹುಮತ ಸಾಬೀತು ಪಡಿಸುತ್ತೇವೆ.. ಈಗ ವಿಧಾನಸಭೆಯಲ್ಲಿ 209 ಸಂಖ್ಯಾಬಲವಿದೆ.. ನಮ್ಮಗೆ ಯಾವ ಪಕ್ಷದ ಬೆಂಬಲವಿಲ್ಲದೆ ಬಹುಮತ ಸಾಬೀತು ಪಡಿಸಲು ಶಕ್ತರಾಗಿದ್ದೇವೆ ಎಂದು ಬಿಜೆಪಿ ಎಂಎಲ್‌ಸಿ ರವಿಕುಮಾರ್ ಹೇಳಿದ್ದಾರೆ.

ಸುಭದ್ರ, ರೈತರ, ಜನರ ಪರ ಸರ್ಕಾರ

ಸುಭದ್ರ, ರೈತರ, ಜನರ ಪರ ಸರ್ಕಾರ

ನೂರಕ್ಕೆ ನೂರು ಶೇಕಡ ನಾವು ಬಹುಮತ ಸಾಬೀತು ಪಡಿಸ್ತೇವೆ, ನಮ್ಮದು ಸುಭದ್ರ, ರೈತರ, ಜನಪರ ಸರ್ಕಾರವಾಗಿದೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಸೌಹಾರ್ದಯುತ ಭೇಟಿ ಮಾಡಿ ಶುಭ ಹಾರೈಸಿದ್ದೇನೆ ಯಡಿಯೂರಪ್ಪ ಅವರು, ಒಬ್ಬ ಹೋರಾಟಗಾರರ ಸ್ವಪ್ರಯತ್ನದಿಂದ ರೈತನಾಯಕನಾಯಕನಾಗಿ ಹೊರಹೊಮ್ಮಿದವರು ಬಂದ ತಕ್ಷಣ ರೈತರ ಪರವಾದ ನಿರ್ಣಯ ಕೈಗೊಂಡಿದ್ದಾರೆ.

ಬಡವರು, ಕೂಲಿಕಾರ್ಮಿಕರು, ನೇಕಾರರ ಜೀವನಗುಣಮಟ್ಟ ಹೆಚ್ಚಿಸಲಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

English summary
JDS mla's expressed their view to give external support to BJP government in meeting with Former chief minister HD kumaraswamy .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X