ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಶಾಸಕಾಂಗ ಸಭೆ: ಆಪರೇಷನ್ ಕಮಲ ಪ್ರಮುಖ ಚರ್ಚೆ ವಿಷಯ

|
Google Oneindia Kannada News

ಬೆಂಗಳೂರು, ಡಿಸೆಂಬರ್ 04: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬೆನ್ನಲ್ಲೇ ಇದೀಗ ಜೆಡಿಎಸ್‌ ಪಕ್ಷ ಸಹ ಶಾಸಕಾಂಗ ಸಭೆ ನಡೆಸುತ್ತಿದೆ. ಇಂದು ಸಂಜೆ ನಗರದಲ್ಲಿ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ.

ಕಳೆದ ವಾರವೇ ಜೆಡಿಎಸ್ ಶಾಸಕಾಂಗ ಸಭೆ ನಿಗದಿ ಆಗಿತ್ತು. ಆದರೆ ಅಂಬರೀಶ್ ಅವರು ಕಾಲವಾದ ಕಾರಣ ಸಭೆಯನ್ನು ರದ್ದು ಮಾಡಲಾಗಿತ್ತು. ಈಗ ಇಂದು ಸಭೆ ನಿಗದಿಪಡಿಸಲಾಗಿದ್ದು, ಎಲ್ಲ ಜೆಡಿಎಸ್ ಶಾಸಕರು ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಕೋರಲಾಗಿದೆ.

ಕುಮಾರಸ್ವಾಮಿ ನೇತೃತ್ವದ ಸಂಸದರ ಸಭೆಗೆ ಹಲವು ಪ್ರಮುಖರು ಗೈರುಕುಮಾರಸ್ವಾಮಿ ನೇತೃತ್ವದ ಸಂಸದರ ಸಭೆಗೆ ಹಲವು ಪ್ರಮುಖರು ಗೈರು

ನಾಳೆ (ಡಿಸೆಂಬರ್ 05) ಸಂಪುಟ ವಿಸ್ತರಣೆ ನಡೆಯುತ್ತಿದ್ದು, ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಲಿದೆ. ರಾಜ್ಯ ರಾಜಕಾರಣದಲ್ಲಿಯೂ ಮಹತ್ವದ ಬದಲಾವಣೆ ಸಾಧ್ಯತೆ ಇದೆ ಹಾಗಾಗಿ ಇಂದಿನ ಶಾಸಕಾಂಗ ಸಭೆ ಮಹತ್ವದ್ದಾಗಿದೆ.

JDS legeslative party meeting on December 04 in Bengaluru

ಬಿಜೆಪಿಯು ಈಗಾಗಲೇ ಆಪರೇಷನ್ ಕಮಲ ಆರಂಭಿಸಿದೆ ಹಲವು ಕಾಂಗ್ರೆಸ್‌ ಹಾಗೂ ಜೆಡಿಎಸ್ ಶಾಸಕರನ್ನು ಸಂಪರ್ಕ ಮಾಡಲಾಗಿದೆ. ಹಾಗಾಗಿ ಇಂದಿನ ಸಭೆಯಲ್ಲಿ ಜೆಡಿಎಸ್‌ ಶಾಸಕರಿಗೆ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುವಂತೆ ಒತ್ತಿ ಹೇಳಲಾಗುತ್ತದೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಅಸಮಾಧಾನ: ಜಿಲ್ಲಾ ಉಸ್ತುವಾರಿ ಬದಲಿಗೆ ಒತ್ತಾಯ?ಬಿಜೆಪಿಯಲ್ಲಿ ಅಸಮಾಧಾನ: ಜಿಲ್ಲಾ ಉಸ್ತುವಾರಿ ಬದಲಿಗೆ ಒತ್ತಾಯ?

ಅಧಿವೇಶನದ ಬಗ್ಗೆ ಚರ್ಚೆ
ಎಚ್‌ಡಿಡಿ-ಎಚ್‌ಡಿಕೆ ನೇತೃತ್ವದಲ್ಲಿ ಸಭೆ
ದೇವೇಗೌಡ ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕರ ಸಭೆ ನಡೆಯಲಿದೆ. ಸಭೆಯಲ್ಲಿ ಡಿಸೆಂಬರ್ 10 ರಿಂದ ಪ್ರಾರಂಭವಾಗುವ ಬೆಳಗಾವಿ ಅಧಿವೇಶನದ ಬಗ್ಗೆಯೂ ಮಾತನಾಡಲಾಗುತ್ತದೆ. ಅಧಿವೇಶನದಲ್ಲಿ ಜೆಡಿಎಸ್ ಶಾಸಕರು ನಿಭಾಯಿಸಬೇಕಾದ ಜವಾಬ್ದಾರಿಗಳ ಹಂಚಿಕೆ ಸಹ ಆಗಲಿದೆ.

ಸಿಎಂ ನಾಳೆ ಶೃಂಗೇರಿಗೆ ಹೋಗಬೇಕಿತ್ತು
ಶೃಂಗೇರಿ ಭೇಟಿ ರದ್ದು
ಪಕ್ಷದ ಶಾಸಕಾಂಗ ಸಭೆ ಇರುವ ಕಾರಣ ಕುಮಾರಸ್ವಾಮಿ ಅವರು ತಮ್ಮ ಶೃಂಗೇರಿ ಭೇಟಿಯನ್ನು ರದ್ದು ಮಾಡಿದ್ದಾರೆ. ಸಭೆಯು ದೀರ್ಘವಾಗಿ ನಡೆಯುವ ಸಾಧ್ಯತೆ ಇರುವ ಕಾರಣ ಭೇಟಿ ರದ್ದು ಮಾಡಿದ್ದಾರೆ. ಸಿಎಂ ಅವರು ನಾಳೆ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆಯಬೇಕಿತ್ತು.

ಸಿಎಂ ಕುಮಾರಸ್ವಾಮಿ ಅವರಿಂದ ದಿನವಿಡೀ ಬರ ಕುರಿತು ಸಭೆಸಿಎಂ ಕುಮಾರಸ್ವಾಮಿ ಅವರಿಂದ ದಿನವಿಡೀ ಬರ ಕುರಿತು ಸಭೆ

ಕೈ ಶಾಸಕರ ಸಮಸ್ಯೆ ಆಲಿಸಲಿದ್ದಾರೆ ಎಚ್‌ಡಿಕೆ
ಕೈ ಶಾಸಕರ ಸಭೆಯಲ್ಲಿ ಎಚ್‌ಡಿಕೆ ಭಾಗಿ
ಕಾಂಗ್ರೆಸ್ ಪಕ್ಷ ಸಹ ಸಂಪುಟ ವಿಸ್ತರಣೆ ಬಳಿಕ ಶಾಸಕಾಂಗ ಸಭೆ ಕರೆದಿದ್ದು, ವಿಶೇಷವಾಗಿ ಈ ಬಾರಿ ಕೈ ಶಾಸಕಾಂಗ ಸಭೆಯಲ್ಲಿ ಕುಮಾರಸ್ವಾಮಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್‌ ಶಾಸಕರ ಸಮಸ್ಯೆಗಳನ್ನು ಕುಮಾರಸ್ವಾಮಿ ಅವರು ಅಂದು ಆಲಿಸಲಿದ್ದಾರೆ.

ಸರ್ಕಾರ ರಚನೆ ಬಗ್ಗೆ ಮಹತ್ವದ ಮಾತುಕತೆ
ಬಿಜೆಪಿ ಶಾಸಕಾಂಗ ಸಭೆಯಲ್ಲಿ ಹಲವು ಚರ್ಚೆ
ಇತ್ತೀಚೆಗಷ್ಟೆ ಬಿಜೆಪಿ ಶಾಸಕಾಂಗ ಸಭೆ ನಡೆದಿತ್ತು. ಸಭೆಯಲ್ಲಿ ಅಧಿವೇಶನದಲ್ಲಿ ಬಿಜೆಪಿ ಹೋರಾಟ ಸೇರಿದಂತೆ ಸರ್ಕಾರ ರಚನೆ ಪ್ರಯತ್ನ, ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆ ಸೋಲು, ಮುಂದಿನ ಲೋಕಸಭೆ ಚುನಾವಣೆ ತಯಾರಿ ಮತ್ತು ಟಿಕೆಟ್ ಹಂಚಿಕೆ ಕುರಿತು ಮಾತುಕತೆಯಾಯಿತು.

English summary
JDS call for legislative party meeting today in Bengaluru. Deve Gowda and Kumaraswamy will be the head of the meeting. JDS mla will be warned about BJP's operation kamala in the meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X