ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಕೆ ಹರಿಪ್ರಸಾದ್ 'ಹಾಲು' ಕುಡಿದಷ್ಟು ತೇಜಸ್ವಿ ಸೂರ್ಯ 'ನೀರು' ಕುಡಿದಿಲ್ಲ

|
Google Oneindia Kannada News

Recommended Video

T.A. Sharavana: ಬಿಜೆಪಿ ಹಾಗು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ಮುಖಂಡ ಟಿ ಎ ಶರವಣ

ಬೆಂಗಳೂರು, ಏ 3: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮೂರು ಪಕ್ಷಗಳ ಆರೋಪ, ಪ್ರತ್ಯಾರೋಪ ಬೇರೆ ಬೇರೆ ಹಂತಕ್ಕೆ ಸಾಗುತ್ತಿದೆ. ಕರ್ನಾಟಕ ಬಿಜೆಪಿಯ ಹೆಬ್ಬಾಗಿಲು ಎನ್ನುವ ಮಾತು ಏನಿದೆಯೋ, ಅದನ್ನು ಈ ಚುನಾವಣೆಯಲ್ಲಿ ಅಳಿಸಿಬಿಡುತ್ತೇವೆ ಎಂದು ಜೆಡಿಎಸ್ ಮುಖಂಡ ಮತ್ತು ವಿಧಾನಪರಿಷತ್ ಸದಸ್ಯ ಟಿ ಎ ಶರವಣ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ಒನ್ ಇಂಡಿಯಾ' ಪ್ರತಿನಿಧಿಯೊಂದಿಗೆ ಮಾತನಾಡುತ್ತಿದ್ದ ಶರವಣ, ಬೆಂಗಳೂರು ದಕ್ಷಿಣದಲ್ಲಿ ಬಿ ಕೆ ಹರಿಪ್ರಸಾದ್ ಮುಂದೆ, ಬಿಜೆಪಿ ಅನುಭವವಿಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸ್ಫೋಟವಾಯಿತು ಶರವಣ ಅಸಮಾಧಾನ, ಜೆಡಿಎಸ್ ನಲ್ಲಿ ಭಾರೀ ಕಂಪನಸ್ಫೋಟವಾಯಿತು ಶರವಣ ಅಸಮಾಧಾನ, ಜೆಡಿಎಸ್ ನಲ್ಲಿ ಭಾರೀ ಕಂಪನ

ಬಿ ಕೆ ಹರಿಪ್ರಸಾದ್ ಅವರ ಮುಂದೆ ತೇಜಸ್ವಿ ಸೂರ್ಯ ಏನೂ ಇಲ್ಲ. ನಮ್ಮ ಅಭ್ಯರ್ಥಿ ಹಾಲು ಕುಡಿದಷ್ಟು ಬಿಜೆಪಿ ಅಭ್ಯರ್ಥಿ ನೀರು ಕುಡಿದಿಲ್ಲ. ಇವರು ಹೈವೇ ನೋಡಿದಷ್ಟು ಅವರು ರಸ್ತೆ ನೋಡಿಲ್ಲ ಎಂದು ಬಿಜೆಪಿ ಅಭ್ಯರ್ಥಿಯನ್ನು ಶರವಣ ಕೆಣಕಿದ್ದಾರೆ.

JDS leader TA Saravana very much confident that, Congress will win Bengaluru South

ಕಾಂಗ್ರೆಸ್ ಈ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿಯನ್ನೇ ನೀಡಿದೆ. ಇವರನ್ನು ಯಾವ ಕಾರಣಕ್ಕೂ ಸೋಲಲು ನಾವು ಬಿಡುವುದಿಲ್ಲ. ಕನಿಷ್ಟ ಮೂರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಹರಿಪ್ರಸಾದ್ ಅವರನ್ನು ಗೆಲ್ಲಿಸುತ್ತೇವೆ ಎಂದು ಶರವಣ ಭರವಸೆಯ ಮಾತನ್ನಾಡಿದ್ದಾರೆ.

ದೇವೇಗೌಡರ ಭೇಟಿ ನಂತರ ಮುಂದಿನ ತೀರ್ಮಾನ ಎಂದ ಶರವಣದೇವೇಗೌಡರ ಭೇಟಿ ನಂತರ ಮುಂದಿನ ತೀರ್ಮಾನ ಎಂದ ಶರವಣ

ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈ ಭಾಗದ ಜನತೆ ತೀರ್ಮಾನ ಮಾಡಿದ್ದಾರೆ. 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ನಾವು ಇಟ್ಟುಕೊಂಡಿದ್ದೇವೆ ಮತ್ತು ಅದರಲ್ಲಿ ಯಶಸ್ಸನ್ನು ಕಾಣುತ್ತೇವೆ ಎಂದು ಶರವಣ ಹೇಳಿದ್ದಾರೆ.

ನರೇಂದ್ರ ಮೋದಿ ಸರಕಾರ ಬರೀ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದೆ. ದೇಶ ಕಳೆದ ಐದು ವರ್ಷಗಳಲ್ಲಿ ಏನೂ ಅಭಿವೃದ್ದಿಯನ್ನು ಕಂಡಿಲ್ಲ. ಹಾಗಾಗಿ, ಈ ಬಾರಿಯ ಚುನಾವಣೆಯ ನಂತರ ಮೋದಿ, ಮಾಜಿಯಾಗಲಿದ್ದಾರೆಂದು ಶರವಣ ಹೇಳಿದ್ದಾರೆ.

English summary
JDS leader and Karnataka upper house member TA Saravana very much confident that, Congress candidate BK Hariprasad will win Bengaluru South Loksabha constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X