ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುತೂಹಲ ಮೂಡಿಸಿದ ದೇವೇಗೌಡ-ಡಿ.ಕೆ. ಶಿವಕುಮಾರ್ ಭೇಟಿ!

|
Google Oneindia Kannada News

ಬೆಂಗಳೂರು, ಅ. 07: ಮಹತ್ವದ ಬೆಳವಣಿಗೆಯಲ್ಲಿ ಜೆಡಿಎಸ್ ನಾಯಕ ದೇವೇಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಹೊಂದಿರುವ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿ ಸಿಬಿಐ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಿದ್ದರು. ಡಿಕೆಶಿ ಅವರು ವಾಸವಿರುವ ಸದಾಶಿವನಗರದ ಮನೆಯೂ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿತ್ತು. ಅದಾದ ಬಳಿಕ ಹಲವು ರಾಜಕೀಯ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿವೆ.

ಆದರೆ ದಾಳಿ ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕರ ಆರೋಪ ಮಡುತ್ತಿರುವ ಸಂದರ್ಭದಲ್ಲಿಯೇ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಡಿಕೆ ಶಿವಕುಮಾರ್ ಅವರು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಮಾತನಾಡಿರುವ ಅವರು, ನಾನು ಮತ್ತು ಡಿ.ಕೆ. ಶಿವಕುಮಾರ್ ಅವರು ಬಹಳ ವರ್ಷಗಳಿಂದ ಸ್ನೇಹಿತರು. ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇವು. ಮುಂಬೈಗೆ ಸಹ ಹೋಗಿ ಪ್ರಯತ್ನಿಸಿದ್ದೇವು. ಹೀಗಾಗಿ ಬಂದು ಮಾತುಕತೆಯನ್ನು ಮಾಡಿದ್ದೇನೆ ಎಂದಿದ್ದಾರೆ.

ಮಗಳ ಮದುವೆಗೆ ತಂದಿದ್ದ ಚಿನ್ನ ಜಪ್ತಿ ಮಾಡಿರುವುದು ನೋವಾಗಿದೆ: ಡಿಕೆಶಿಮಗಳ ಮದುವೆಗೆ ತಂದಿದ್ದ ಚಿನ್ನ ಜಪ್ತಿ ಮಾಡಿರುವುದು ನೋವಾಗಿದೆ: ಡಿಕೆಶಿ

Recommended Video

DK Shivakumar ಮನೆಯ ಮೇಲೆ ದಾಳಿ ನಡೆಸಿದ ಹಿಂದಿನ ಅಸಲಿ ಕಾರಣ ಇದೇ | Oneindia Kannada

ಚುನಾವಣೆ ಸಮಯದಲ್ಲಿ ರೇಡ್ ಮಾಡಬಾರದು. ರೇಡ್ ಮಾಡಿರುವುದು ತಪ್ಪು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಇಷ್ಟೇ ಅಲ್ಲ ಡಿಕೆಶಿ ಅವರ ಶ್ರೀಮತಿಯವರು ನಮ್ಮ ಮೈಸೂರಿನವರು. ರೇಡ್ ಆದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ಧೈರ್ಯ ಹೇಳಬೇಕು. ಯಾಕೆಂದರೆ ಅವರು ನನ್ನ ಸ್ನೇಹಿತರು ಎಂದು ವಿವರಿಸಿದರು.

jgs leader deve gowda met and discussed dk shivakumar in significant development

ಜೆಡಿಎಸ್ ಪಕ್ಷದಿಂದ ಅಂತರ ಕಾಯದ್ಉಕೊಂಡಿರುವ ಕುರಿತು ಪ್ರತಿಕ್ರಿಯೆ ನೀಡಿರುವ ದೇವೇಗೌಡ ಅವರು, ಎಲ್ಲವೂ ನಿಮೆಗೆ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆಯ ಕುರಿತು ನಿರ್ಧಾರ ಮಾಡುವವರು ಚಾಮುಂಡೇಶ್ವರಿ ಕ್ಷೇತ್ರದ ಜನರು ಎಂದು ಹೇಳುವ ಮೂಲಕ ಹೊಸ ಜೆಡಿಎಸ್ ತೊರೆಯುವ ನಿರ್ಧಾರವನ್ನು ಸೂಚ್ಯವಾಗಿಸಿದರು.

English summary
In a significant development JDS leader G.T. Deve Gowda met KPCC President D.K. Shivakumar and discussed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X