ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಇರುವುದು ಕಾರ್ಯಕರ್ತರಿಂದ, ನಾಯಕರಿಂದಲ್ಲ: ಮಾಜಿ ಪ್ರಧಾನಿ ದೇವೇಗೌಡ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 2: "ದೇವೇಗೌಡರು ಹೋದರೆ ಜೆಡಿಎಸ್ ಪಕ್ಷವೇ ಹೋಗುತ್ತದೆ ಎಂದು ಇತರ ಪಕ್ಷಗಳ ನಾಯಕರು ಅಣಕ ಮಾಡುತ್ತಾರೆ. ಆದರೆ ನೀವು ಯಾರೂ ದೇವೇಗೌಡರನ್ನು ನೋಡಿ ಪಕ್ಷಕ್ಕೆ ಬಂದಿಲ್ಲ. ಕಾರ್ಯಕರ್ತರಿಂದಲೇ ಜೆಡಿಎಸ್ ಪಕ್ಷ ಇರುವುದೆ ಹೊರತು ಯಾವುದೇ ನಾಯಕರಿಂದಲ್ಲ," ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ, "ಕಾಲ ಬಂದಾಗ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತೇನೆ. ಕಾಂಗ್ರೆಸ್​ನವರು ಏನೇನು ಮಾತಾಡುತ್ತಿದ್ದಾರೆಂದು ಗೊತ್ತಿದೆ," ಎಂದರು.

"ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಕಣಕ್ಕೆ ಇಳಿಯಲಿದ್ದು, ಬೆಂಗಳೂರಿನಲ್ಲಿ 8 ರಿಂದ 9 ಮಹಿಳಾ ಕಾರ್ಯಕರ್ತೆಯರಿಗೆ ಟಿಕೆಟ್ ನೀಡುತ್ತೇವೆ," ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಿಳಿಸಿದರು.

Bengaluru: JDS Is Activists Party: Former PM HD Deve Gowda

"ಮುಸ್ಲಿಂ ಸಮುದಾಯವನ್ನು ಜೆಡಿಎಸ್ ಪಕ್ಷ ಕೈಬಿಡುವುದಿಲ್ಲ. ನಮಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ. ಇದನ್ನು ನಾನು ಸಂಸತ್ತಿನಲ್ಲಿಯೂ ಹೇಳಿದ್ದೇನೆ. ನಮ್ಮ ಪಕ್ಷ ಎಲ್ಲರನ್ನು ಒಳಗೊಂಡ ಪಕ್ಷವಾಗಿದೆ," ಎಂದು ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಮಹಿಳಾ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

"ಹೇಗೆ ಪಕ್ಷ ಸಂಘಟನೆ ಮಾಡಬೇಕು ಎಂದು ಎಲ್ಲರಿಗೂ ಸೂಚನೆ ಕೊಟ್ಟಿದ್ದೇನೆ. ರಾಜಕೀಯವಾಗಿ ನಮ್ಮ ಶಕ್ತಿ ಪ್ರದರ್ಶನ ಮಾಡಲು ಮಹಿಳೆಯರು ಆಗಮಿಸಿದ್ದೀರಿ. ನಾನು ಸಿಎಂ ಆಗುವುದುಕ್ಕೂ ಮುಂಚೆಯೇ ಹೆಣ್ಣು ಮಕ್ಕಳಿಗೆ ಏನೂ ಮಾಡಬೇಕು ಎಂದು ಚಿಂತನೆ ಮಾಡಿ, ಮಹಿಳಾ ಮೀಸಲಾತಿಗೆ ಹೋರಾಟ ಮಾಡಿದ್ದೆ," ಎಂದು ದೇವೇಗೌಡರು ಸಮಾವೇಶದಲ್ಲಿ ಸೇರಿದ್ದ ಮಹಿಳಾ ಕಾರ್ಯಕರ್ತೆಯರನ್ನುದ್ದೇಶಿಸಿ ಮಾತನಾಡಿದರು.

ಇನ್ನು ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಮಹಿಳಾ ಸಮಾವೇಶಕ್ಕೆ ಜೆಡಿಎಸ್‌ನ ಏಕೈಕ ಮಹಿಳಾ ಶಾಸಕಿ, ಮಾಜಿ ಸಿಎಂ ಎಚ್.ಡಿ, ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಗೈರಾಗಿದ್ದರು. ಇದು ಹಲವು ಅನುಮಾನ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

Bengaluru: JDS Is Activists Party: Former PM HD Deve Gowda

ಅರುಣ್ ಸಿಂಗ್ ಹೇಳಿಕೆಗೆ ತಿರುಗೇಟು
ಇನ್ನು ಮೈಸೂರಿನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಜೆಡಿಎಸ್ ಮುಳುಗುತ್ತಿರುವ ಹಡಗು ಎಂಬ ಹೇಳಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ‌. ಕುಮಾರಸ್ವಾಮಿ ತಿರುಗೇಟು ನೀಡಿದರು.

"ಬಿಜೆಪಿ ಅದೇ ಹಡಗಿನ ಜೊತೆ ಎರಡು ಬಾರಿ ಸರ್ಕಾರ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಅವರಿಗೆ ನಮ್ಮ ಶಕ್ತಿ ತೋರಿಸುತ್ತೇವೆ," ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸವಾಲು ಹಾಕಿದರು.

ಪ್ರಧಾನಿ ಮೋದಿಯವರನ್ನು ಕೇಳಿ ತಿಳಿದುಕೊಳ್ಳಲಿ
ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ರಾಮನಗರದಲ್ಲಿ ಮಾತನಾಡಿ, "ನನ್ನ ಬಗ್ಗೆ, ದೇವೆಗೌಡರ ಬಗ್ಗೆ ಮತ್ತು ನಮ್ಮ ಪಕ್ಷದ ಬಗ್ಗೆ ಗೊತ್ತಿಲ್ಲದಿದ್ದರೆ ಪ್ರಧಾನಿ ಮೋದಿಯವರನ್ನು ಕೇಳಿ ತಿಳಿದುಕೊಳ್ಳುವಂತೆ," ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧ ಗುಡುಗಿದರು.

Recommended Video

ಶ್ರೀಲಂಕಾದಲ್ಲಿ ಆಹಾರಕ್ಕೆ ಹಾಹಾಕಾರ: ಆರ್ಥಿಕ ಬಿಕ್ಕಟ್ಟಿನಿಂದ ತುರ್ತುಪರಿಸ್ಥಿತಿ ಘೋಷಣೆ | Oneindia Kannada

"ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇನ್ನೂ ಬಿಜೆಪಿ ಪಕ್ಷದ ಮುಖಂಡರು ನನಗೆ ಬುದ್ಧಿ ಹೇಳುವ ಮೊದಲು ಅವರ ನಡುವಳಿಕೆ ಏನೆಂಬುದನ್ನು ನೋಡಿಕೊಳ್ಳಲಿ, ಜೆಡಿಎಸ್ ಪಕ್ಷ ಹಾಗೂ ಕುಮಾರಸ್ವಾಮಿ ಬಗ್ಗೆ ಗೊತ್ತಿಲ್ಲ ಅಂದ್ರೆ ಪ್ರಧಾನಮಂತ್ರಿ ಹತ್ತಿರ ಕೇಳಲಿ," ಎಂದು ಬಿಜೆಪಿ ಉಸ್ತುವಾರಿ ವಿರುದ್ಧ ಎಚ್‌ಡಿಕೆ ಹರಿಹಾಯ್ದರು.

English summary
The JDS party is from activists and not from any leader, Former PM HD Deve Gowda Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X