ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2022ರ ವಿಧಾನಸಭೆ ಚುನಾವಣೆಗೆ ದೇವೇಗೌಡರ ಮೆಗಾ ಪ್ಲಾನ್ ಏನೂ ಗೊತ್ತಾ?

By ಅನಿಲ್ ಬಾಸೂರ್
|
Google Oneindia Kannada News

Recommended Video

2022ರ ಚುನಾವಣೆಗೆ ಗೇವೇಗೌಡರ ರಣತಂತ್ರ ಈಗ್ಲೇ ಶುರು | Oneindia Kannada

ಬೆಂಗಳೂರು, ಜ. 04: ಕಳೆದ ಮೇ ತಿಂಗಳಿನಲ್ಲಿ ನಡೆದ ಲೋಕಸಭಾ ಚುನಾವಣೆ. ನಂತರ ನಡೆದ ವಿಧಾನಸಭಾ ಉಪಚುನಾವಣೆಯ ಸೋಲಿನ ಬಳಿಕ ಜೆಡಿಎಸ್ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅವರು ಮೆಗಾ ಪ್ಲಾನ್ ಮಾಡಿದ್ದಾರೆ.

ಪಕ್ಷದ ಶಾಸಕರು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸೇರಿದಂತೆ 2022ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಿದ್ದಗೊಳಿಸಲು ಸಂಕ್ರಾಂತಿ ನಂತರ ಮಹತ್ವದ ಸಭೆ ಕರೆದಿದ್ದಾರೆ.

ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಜೆಡಿಎಸ್ ನಾಯಕರ ತಂತ್ರ

ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಜೆಡಿಎಸ್ ನಾಯಕರ ತಂತ್ರ

ಮುಂದೆ ಬರುವ ಚುನಾವಣೆಗಳಿಗೆ ಮೊದಲು ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸ ಬೇಕಾದ ಅನಿವಾರ್ಯತೆ ಜೆಡಿಎಸ್ ನಾಯಕರಿಗೆ ಇದೆ. ಈ ನಿಟ್ಟಿನಲ್ಲಿ ಜೆಡಿಎಸ್ ನಾಯಕರು, ಶಾಸಕರ ಮಹತ್ವದ ಸಭೆಯನ್ನು ನಡೆಸಲು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮುಂದಾಗಿದ್ದು, ಸಂಕ್ರಾಂತಿ ನಂತರ ಮಹತ್ವದ ಸಭೆ ಕರೆದಿದ್ದಾರೆ ಎಂಬ ಮಾಹಿತಿಯಿದೆ. ಪ್ರಮುಖ ನಾಯಕರು ಹಾಗೂ ಶಾಸಕರಿಗೆ ಸಭೆಗೆ ಬರುವಂತೆ ತಿಳಿಸಲಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ?ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ?

ಕುಟುಂಬದವರಿಗೆ ಮಾತ್ರ ಅಧಿಕಾರ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ನಿರ್ಧಾರ

ಕುಟುಂಬದವರಿಗೆ ಮಾತ್ರ ಅಧಿಕಾರ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ನಿರ್ಧಾರ

ರಾಜಕೀಯದಲ್ಲಿ ಅಧಿಕಾರವಿಲ್ಲದೆ ಅಸ್ತಿತ್ವ ಕಾಪಾಡಿಕೊಳ್ಳುವುದು ಸಾಧ್ಯವಿಲ್ಲ ಎಂಬುದು ರಾಜಕೀಯ ಮುತ್ಸದ್ದಿ ದೇವೇಗೌಡ ಅವರಿಗೆ ತಿಳಿಯದ ವಿಚಾರವಲ್ಲ.

ಪಕ್ಷದ ನಾಯಕರಿಂದ ಹಿಡಿದು ಕಾರ್ಯವರ್ತರ ವರೆಗೆ ಎಲ್ಲರಿಗೂ ಅಧಿಕಾರ ಕೊಡಬೇಕು. ಅದಕ್ಕಾಗಿ ನಿರ್ಣಾಯಕ ಸ್ಥಾನಗಳನ್ನು ಚುನಾವಣೆಯಲ್ಲಿ ಗೆಲ್ಲಬೇಕು.
ಇದಕ್ಕೆಲ್ಲ ನಾಯಕರ, ಕಾರ್ಯಕರ್ತರ ಸಹಾಯ, ಪಕ್ಷದ ಚಟುವಟಿಕೆಗಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ.

ಆದರೆ ಜೆಡಿಎಸ್ ಒಂದು ಕುಟುಂಬದ ಪಕ್ಷ ಅಂತಾ ಬಿಜೆಪಿ ನಾಯಕರು ಅಗಾಗ ಕುಟುಕುತ್ತಲೇ ಇರುತ್ತಾರೆ. ಇದೇ ಆರೋಪ ಮಾಡಿ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸ್ವಪಕ್ಷದ ನಾಯಕರೇ ಜೆಡಿಎಸ್ ತೊರೆದಿದ್ದರು. ಮಾಜಿ ಸಚಿವ ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್ ಖಾನ್, ಬಾಲಕೃಷ್ಣ ಸೇರಿದಂತೆ 7 ಶಾಸಕರು ಆಗ ಜೆಡಿಎಸ್ ತೊರೆದು 'ಕೈ' ಹಿಡಿದಿದ್ದರು.

ನಂತರ 2018ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಜೆಡಿಎಸ್ ಪಕ್ಷದ ಹುಣಸೂರು ಶಾಸಕ ಎಚ್. ವಿಶ್ವನಾಥ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕೆ.ಆರ್. ಪೇಟೆ ಶಾಸಕ ನಾರಾಯಣಗೌಡ ಕಮಲ ಹಿಡಿದು ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾದರು. ಅವರೆಲ್ಲರೂ ಕುಟುಂಬ ರಾಜಕಾರಣದ ಆರೋವನ್ನು.ಮಾಡಿದ್ದರು.

ಮಾಜಿ ಸಿಎಂ ಎಚ್‌ಡಿಕೆಗೆ ಜೋಳದ ರೊಟ್ಟಿ ಕಳಿಸಿದ್ದು ಯಾಕೇ?ಮಾಜಿ ಸಿಎಂ ಎಚ್‌ಡಿಕೆಗೆ ಜೋಳದ ರೊಟ್ಟಿ ಕಳಿಸಿದ್ದು ಯಾಕೇ?

ಕಾರ್ಯಕರ್ತರು, ನಾಯಕರಲ್ಲಿ ಆತ್ಮವಿಶ್ವಾಸ ತುಂಬುತ್ತರಾ ಎಚ್ಡಿಡಿ, ಎಚ್ಡಿಕೆ?

ಕಾರ್ಯಕರ್ತರು, ನಾಯಕರಲ್ಲಿ ಆತ್ಮವಿಶ್ವಾಸ ತುಂಬುತ್ತರಾ ಎಚ್ಡಿಡಿ, ಎಚ್ಡಿಕೆ?

ಘಟಾನುಗಟಿ ನಾಯಕರು ನಿರಂತರವಾಗಿ ಪಕ್ಷ ತೊರೆಯುತ್ತಿರುವುದು ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಸಹಜವಾಗಿಗೆ ಭರವಸೆ ಕಳೆದುಕೊಳ್ಳುವಂತೆ ಮಾಡಿದೆ. ಅದನ್ನು ಹೋಗಲಾಡಿಸಲೇಬೇಕಾದ ಅನಿವಾರ್ಯತೆ ಕೂಡ ಜೆಡಿಎಸ್ ಪ್ರಮುಖ ನಾಯಕರ ಮೇಲಿದೆ.

ಇದಕ್ಕಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, 'ನಾನು 'ಜೆಡಿಎಸ್ ರಾಜ್ಯಾಧ್ಯಕ್ಷ ಆಗುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್ ಪಕ್ಷದಲ್ಲಿ ಕೇವಲ ದೇವೇಗೌಡರ ಕುಟುಂಬದವರಿಗೆ, ಸಂಬಂಧಿಕರಿಗೆ ಮಾತ್ರ ಅಧಿಕಾರ ಎಂಬ ಆರೋಪ ಮಾಡಿ ಹಲವು ಘಟನಾಗಟಿ ನಾಯಕರು ಪಕ್ಷ ತೊರೆದಿದ್ದಾರೆ.

ಇತ್ತೀಚೆಗೆ ಇದೇ ಆರೋಪ ಮಾಡಿ ಜೆಡಿಎಸ್ ಪಕ್ಷದ ಮೂವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದರಿಂದ ಎಚ್.ಡಿ. ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದಷ್ಟೇ ಅಲ್ಲ 'ಕೈ' ಜೊತೆಗಿನ ಮೈತ್ರಿಯೂ ಮುರಿದುಬಿತ್ತು. ಬಿಬಿಎಂಪಿಯಲ್ಲಿಯೂ ಅಧಿಕಾರ ಹೋಯಿತು.

ಈ ಎಲ್ಲವನ್ನೂ ಕಾರ್ಯಕರ್ತರ ಮನಸ್ಸಿನಿಂದ ಹೋಗಲಾಡಿಸಬೇಕಿದೆ. ಇದಲ್ಲದೆ ಘಟಾನುಗಟಿ ನಾಯಕರಿಲ್ಲದೆ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ ಎಂಬ ತೀರ್ಮಾನದ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೆ ಮೊದಲು ಪಕ್ಷದಲ್ಲಿ ಅಧಿಕಾರ ಹಂಚಿಕೆ ಸೂತ್ರಕ್ಕೆ ದೇವೇಗೌಡರು ಮುಂದಾಗಿದ್ದಾರೆ ಎನ್ನಲಾಗಿದೆ.

28 ಅಭ್ಯರ್ಥಿಗಳು ಗೆಲವಿಗೆ ಸನಿಹದಲ್ಲಿ ಸೋತ ಕ್ಷೇತ್ರಗಳಿಗೆ ಎಚ್ಡಿಡಿ ಕಾರ್ಯತಂತ್ರ

28 ಅಭ್ಯರ್ಥಿಗಳು ಗೆಲವಿಗೆ ಸನಿಹದಲ್ಲಿ ಸೋತ ಕ್ಷೇತ್ರಗಳಿಗೆ ಎಚ್ಡಿಡಿ ಕಾರ್ಯತಂತ್ರ

2018ರ ವಿಧಾನಸಭೆ ಚುನಾವಣೆ ಫಲಿತಾಂಶದ ಆಧಾರದ ಮೇಲೆ 2022ರ ಚುನಾವಣೆಗೆ ತಯಾರಿ ನಡೆಸಲು ಜೆಡಿಎಸ್ ಮೆಗಾ ಪ್ಲಾನ್ ಮಾಡಿಕೊಂಡಿದೆ. ಮೊದಲ ಹಂತದಲ್ಲಿ 'ಎಲ್ಲರಿಗೂ ಅಧಿಕಾರ' ಎಂಬುದನ್ನು ಮನವರಿಕೆ ಮಾಡಿಕೊಡಲು ಜೆಡಿಎಸ್ ನಾಯಕರು ಸಿದ್ಧರಾಗಿದ್ದಾರೆ.

ಜೊತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಸನಿಹದಲ್ಲಿದ್ದ 28 ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತುಕೊಡಲು ನಿರ್ಧಾರ ಮಾಡಲಾಗಿದೆ. ಈ ವಾರ ನಡೆಯಲಿರುವ ಸಭೆಯಲ್ಲಿ ಪ್ರಮುಖವಾಗಿ ಇದೇ ವಿಚಾರಗಳನ್ನು ದೇವೇಗೌಡರು ಪ್ರಸ್ತಾಪ ಮಾಡಲಿದ್ದಾರೆ ಎಂಬ ಮಾಹಿತಿಯಿದೆ.

English summary
JDS Suprimo h.d. deve gowda called important meeting after sankranti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X