ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಟ್ಯಂತರ ಜನರಿರುವ ಈ ದೇಶವು ಬಡವರು, ರೈತರಿಗೆ ಸೇರಿದ್ದು: ರಾಹುಲ್

|
Google Oneindia Kannada News

ಬೆಂಗಳೂರು, ಮಾರ್ಚ್ 31: ಕಾಂಗ್ರೆಸ್- ಜೆಡಿಎಸ್ ಪಕ್ಷಗಳು ಜತೆಯಾಗಿ ಲೋಕಸಭಾ ಚುನಾವಣೆ ಎದುರಿಸಲು ಕರ್ನಾಟಕದಲ್ಲಿ ಸಿದ್ಧವಾಗಿರುವುದು ಗೊತ್ತಿರುವ ವಿಚಾರವೇ. ನೆಲಮಂಗಲದ ಬಳಿ ಎರಡೂ ಪಕ್ಷಗಳ ನಾಯಕರ ಸಮಾವೇಶವನ್ನು ಭಾನುವಾರ ಆಯೋಜಿಸಿದ್ದು, ಅತಿರಥ-ಮಹಾರಥ ನಾಯಕರು ಭಾಗವಹಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಾರ್ಯಕ್ರಮದ ಪ್ರಮುಖಾಂಶಗಳು ಇಲ್ಲಿವೆ.

JDS- Congress Joint convention Bengaluru LIVE

Newest FirstOldest First
7:13 PM, 31 Mar

ಛತ್ತೀಸ್ ಗಢ, ರಾಜಸ್ತಾನ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಹೇಗೆ ಸಾಲ ಮನ್ನಾ ಮಾಡಲು ಸಾಧ್ಯವಾಯಿತು?: ರಾಹುಲ್
7:11 PM, 31 Mar

ರೈತರ ಸಾಲ ಮನ್ನಾ ಮಾಡಿ ಅಂತ ಕೇಳಿದರೆ ಎಲ್ಲಿಂದ ಹಣ ಬರುತ್ತದೆ ಎನ್ನುತ್ತಾರೆ ನರೇಂದ್ರ ಮೋದಿ, ಅರುಣ್ ಜೇಟ್ಲಿ
7:11 PM, 31 Mar

ದೇಶದ ಕಾವಲುಗಾರ ಅಂತ ಹೇಳಿಕೊಳ್ಳುವ ನರೇಂದ್ರ ಮೋದಿ ಅವರು ರಫೇಲ್ ವ್ಯವಹಾರದಲ್ಲಿ ಖುಲ್ಲಂಖುಲ್ಲಾ ಅನಿಲ್ ಅಂಬಾನಿಗೆ ನೆರವಾಗಿದ್ದಾರೆ: ರಾಹುಲ್
7:08 PM, 31 Mar

ಕೋಟ್ಯಂತರ ಜನರಿರುವ ಈ ದೇಶವು ಬಡವರು, ರೈತರಿಗೆ ಸೇರಿದ್ದು: ರಾಹುಲ್
7:07 PM, 31 Mar

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಎಲ್ಲೆಲ್ಲಿ ಜೆಡಿಎಸ್ ನವರು ಸ್ಪರ್ಧೆ ಮಾಡಿದ್ದಾರೋ ಅಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು. ಕಾಂಗ್ರೆಸ್ ಗೆ ಜೆಡಿಎಸ್ ಸಹ ಬೆಂಬಲಿಸಬೇಕು: ರಾಹುಲ್ ಗಾಂಧಿ
7:04 PM, 31 Mar

ಮೂರು ವರ್ಷಗಳ ಕಾಲ ಕಾಶ್ಮೀರದಲ್ಲಿ ಕರ್ಫ್ಯೂ ಹೇರಿದರು. ಅದಕ್ಕೆ ಯಾರು ಕಾರಣರು ಎಂದು ಹೇಳಬಲ್ಲೆ: ಎಚ್ ಡಿ ದೇವೇಗೌಡ
7:01 PM, 31 Mar

ಎಲ್ಲ ಧರ್ಮವನ್ನೂ ಒಟ್ಟುಗೂಡಿಸಿಕೊಂಡು ಒಟ್ಟಿಗೆ ತೆಗೆದುಕೊಂಡು ಹೋಗುವ ಮುಖಂಡರಿದ್ದಾರೆ: ಎಚ್ ಡಿಡಿ
Advertisement
7:01 PM, 31 Mar

ಎಲ್ಲ ನಾನೇ ಮಾಡಿದ್ದೇನೆ, ಎಲ್ಲ ನನ್ನಿಂದಲೇ ಎಂದು ನರೇಂದ್ರ ಮೋದಿ ಅವರು ಮಾತನಾಡುತ್ತಾರೆ: ದೇವೇಗೌಡ
6:57 PM, 31 Mar

ಮೊದಲ ಬಾರಿಗೆ ಎರಡೂ ಪಕ್ಷಗಳೂ ಸೇರಿ ಸಂದೇಶ ರವಾನಿಸಬೇಕು ಎಂದು ತೀರ್ಮಾನ ಮಾಡಿದೆವು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
6:57 PM, 31 Mar

ಕರ್ನಾಟಕದಲ್ಲಿ ಇಪ್ಪತ್ತೆಂಟಕ್ಕೆ ಇಪ್ಪತ್ತೆಂಟೂ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳನ್ನು ಗೆಲ್ಲಿಸಿ, ಇಡೀ ದೇಶಕ್ಕೆ ಒಂದು ಸಂದೇಶ ರವಾನಿಸಿ: ಎಚ್ ಡಿಕೆ
6:57 PM, 31 Mar

ಎಲೆಕ್ಷನ್ ಬಾಂಡ್ ಮೂಲಕ ಬಿಜೆಪಿ ಪಡೆದಿರುವ ಪಾರ್ಟಿ ಫಂಡ್ ಗೆ ಲೆಕ್ಕವೇ ಇಲ್ಲ ಎಂಬುದು ಮಾಧ್ಯಮಗಳಲ್ಲಿ ವರದಿ ಆಗಿದೆ: ಕುಮಾರಸ್ವಾಮಿ
6:54 PM, 31 Mar

ಬೆಂಗಳೂರು ಅಭಿವೃದ್ಧಿಗಾಗಿ, ಇಡೀ ರಾಜ್ಯದ ಅಬಿವೃದ್ಧಿಗಾಗಿ ನಮ್ಮ ಸರಕಾರ ಅಪಾರ ಪ್ರಮಾಣದಲ್ಲಿ ಅನುದಾನ ನೀಡಿದೆ. ಎರಡು ಮೂರು ಕ್ಷೇತ್ರದಲ್ಲಿ ಇರುವ ಸಮಸ್ಯೆಯನ್ನು ದೊಡ್ಡದು ಮಾಡಬೇಡಿ: ಕುಮಾರಸ್ವಾಮಿ
Advertisement
6:51 PM, 31 Mar

ಮಹಾದಾಯಿ ನೀರಿನ ಯೋಜನೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲು ಮನವಿ ಮಾಡಿದರೆ ಅದಕ್ಕೆ ಸ್ಪಂದಿಸಲಿಲ್ಲ: ಎಚ್ ಡಿಕೆ
6:50 PM, 31 Mar

ಪಕ್ಕದ ತಮಿಳುನಾಡಿನಿಂದ ರೈತರು ದೆಹಲಿಗೆ ತೆರಳಿ, ಅರೆ ಬೆತ್ತಲೆ ಮೆರವಣಿಗೆ ಮಾಡಿದಾಗ ಕಷ್ಟ ಕೇಳಲಿಲ್ಲ. ಆದರೆ ಕಿಸಾನ್ ಸಮ್ಮಾನ್ ಯೋಜನೆ ಅಂತ ಜಾರಿಗೆ ತಂದು ವರ್ಷಕ್ಕೆ ಆರು ಸಾವಿರ ರುಪಾಯಿ ನೀಡುವ ಕಾರ್ಯಕ್ರಮಕ್ಕೆ ತಂದರು. ಕರ್ನಾಟಕದಲ್ಲಿ ಹದಿನೇಳು ಕುಟುಂಬಕ್ಕೆ ಮಾತ್ರ ಕಿಸಾನ್ ಸಮ್ಮಾನ್ ಯೋಜನೆ ಹಣ ನೀಡಿದೆ: ಕುಮಾರಸ್ವಾಮಿ
6:49 PM, 31 Mar

ಮೈತ್ರಿ ಸರಕಾರವು (ಕಾಂಗ್ರೆಸ್- ಜೆಡಿಎಸ್) ರೈತರ ಸಾಲ ಮನ್ನಾ ಮಾಡಿಲ್ಲ ಎಂದರು. ಆದರೆ ಹದಿನೈದು ಲಕ್ಷ ಕುಟುಂಬಗಳಿಗೆ ಸಾಲ ಮನ್ನಾ ಆಗಿದೆ: ಕುಮಾರಸ್ವಾಮಿ
6:49 PM, 31 Mar

ಬಣ್ಣದ ಮಾತುಗಳಿಗೆ ಮಾರು ಹೋಗಬೇಡಿ ಎಂದು ವಿನಂತಿ ಮಾಡಿಕೊಳ್ಳುತೇನೆ. ಹಲವಾರು ಭರವಸೆ ನೀಡಿ, ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಒಬ್ಬ ಸುಳ್ಳುಗಾರ- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
6:32 PM, 31 Mar

ನಾನು ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಎಲ್ಲ ಯೋಜನೆಗಳು ಮುಂದುವರಿದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ನೀಡಿದ ಭರವಸೆಗಳನ್ನು ಈಡೇರಿಸಲಾಗಿದೆ: ಸಿದ್ದರಾಮಯ್ಯ
6:32 PM, 31 Mar

ಇಲ್ಲಿಂದಲೇ (ಕರ್ನಾಟಕ) ಇಡೀ ದೇಶಕ್ಕೆ ಸಂದೇಶ ಕಳುಹಿಸಬೇಕು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ರೈತರು ಕಷ್ಟ ಪಡುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ತರಬೇಕು. ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಮಾಡಬೇಕು: ಸಿದ್ದರಾಮಯ್ಯ
6:32 PM, 31 Mar

ನರೇಂದ್ರ ಮೋದಿ ಅವರಿಂದ ದೇಶದ ಆರ್ಥಿಕ ಸ್ಥಿತಿ ಹಾಳಾಗಿದೆ. ಕೋಮುವಾದಿ ಪಕ್ಷ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯಬೇಕು. ಯಾರು ಪ್ರಜಾಪ್ರಭುತ್ವವನ್ನು ಬೆಂಬಲಿಸುತ್ತಾರೆ, ದೇಶದಲ್ಲಿ ಶಾಂತಿಯನ್ನು ಬಯಸುತ್ತಾರೋ ಎಲ್ಲ ಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಶ್ರಮಿಸಬೇಕು: ಸಿದ್ದರಾಮಯ್ಯ

English summary
Lok Sabha Elections 2019: JDS- Congress Joint convention Bengaluru LIVE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X