ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗ್ರಾಮಾಂತರ : ಪ್ರಭಾಕರ ರೆಡ್ಡಿ ವ್ಯಕ್ತಿಚಿತ್ರ

By Mahesh
|
Google Oneindia Kannada News

ಬೆಂಗಳೂರು, ಮಾ.25: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ್ ರೆಡ್ಡಿ ಕಣಕ್ಕಿಳಿಸುವ ಮೂಲಕ ಜೆಡಿಎಸ್ ಕುತೂಹಲ ಕಾಯ್ದುಕೊಂಡಿದೆ. ಪಕ್ಕಾ ಕಾಂಗ್ರೆಸ್ ಪ್ರಭಾವವಿರುವ ಈ ಕ್ಷೇತ್ರದಲ್ಲಿ ಪ್ರಭಾಕರ್ ರೆಡ್ಡಿ ಅವರಿಗೆ ಹಾಲಿ ಸಂಸದ ಡಿಕೆ ಸುರೇಶ್ ಹಾಗೂ ಎಎಪಿ ಪಕ್ಷದ ರವಿಕೃಷ್ಣಾರೆಡ್ಡಿ ಪ್ರಬಲ ಎದುರಾಳಿಗಳಾಗಿದ್ದಾರೆ. ಸೋಮವಾರ ಪ್ರಭಾಕರ್ ರೆಡ್ಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಬೇಗೂರು ಹೋಬಳಿ ಮೈಲಸಂದ್ರ ಎಂಬ ಗ್ರಾಮದಿಂದ ಬಂದಿರುವ ಪ್ರಭಾಕರ್ ರೆಡ್ಡಿ ಅವರದ್ದು ಕೃಷಿಕ ಕುಟುಂಬ. ವಿವಿ ಪುರಂ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿರುವ ಪ್ರಭಾಕರ್ ಅವರು 1987ರಲ್ಲಿ ಉದ್ಯಮಿಯಾಗಿ ಸಿಮೆಂಟ್ ಬ್ರಿಕ್ಸ್ ಕಾರ್ಖಾನೆಯೊಂದಿಗೆ ವೃತ್ತಿ ಆರಂಭಿಸಿದರು. ಬೆಂಗಳೂರಿನಲ್ಲಿ ರಾಮಾಂಜನೇಯ ಕಾಂಕ್ರೀಟ್ ಬ್ರಿಕ್ಸ್ ಲಾರಿ ಕಂಡರೆ ಅದು ರೆಡ್ಡಿ ಅವರದ್ದು ಎಂದು ತಿಳಿಯಬಹುದು.

ನಂತರ 2000ರ ವೇಳೆಗೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಇಳಿದ ಪ್ರಭಾಕರ್ ರೆಡ್ಡಿ ಅವರು ಸಾಯಿ ರಿಯಲ್ ಸಂಸ್ಥೆ ಕಟ್ಟಿ ಬೆಳೆಸಿದರು. 2007ರಲ್ಲಿ ಸದ್ಗುರು ಸಾಯಿನಾಥ್ ಶಿಕ್ಷಣ ಹಾಗೂ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಇಂಟರ್ ನ್ಯಾಷನಲ್ ಶಾಲೆ, ಪಿಯು ಕಾಲೇಜು, ಪದವಿ ಕಾಲೇಜುಗಳನ್ನು ಸ್ಥಾಪಿಸಿದರು.

ಧಾರ್ಮಿಕ ಕಾರ್ಯಕ್ರಮ: ಉಳಿದಂತೆ ಅನೇಕಲ್ ತಾಲೂಕಿನ ಗ್ರಾಮೀಣ ಪ್ರದೇಶ ಹಾಗೂ ಎಲೆಕ್ಟ್ರಾನಿಕ್ ಸಿಟಿಗೆ ಸಮೀಪವಿರುವ ಬೇಗೂರು, ಮೈಲಸಂದ್ರ, ಕೂಡ್ಲು, ಚಿಕ್ಕಲಸಂದ್ರಗಳಲ್ಲಿ ಗ್ರಾಮೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಈ ಎಲ್ಲಾ ಭಾಗಗಳಲ್ಲಿ ಪ್ರಭಾಕರ್ ರೆಡ್ಡಿ ಎಂದರೆ ಹೋಮ ಹವನ ಮಾಡಿಸುವ ರೆಡ್ಡಿಗಳು ಎಂದೇ ಜನ ಗುರುತಿಸುತ್ತಾರೆ.

ದಕ್ಷಿಣ ಬಿಟ್ಟು ಗ್ರಾಮಾಂತರದ ಅಭ್ಯರ್ಥಿಯಾಗಿ ಪ್ರಭಾಕರ್

ದಕ್ಷಿಣ ಬಿಟ್ಟು ಗ್ರಾಮಾಂತರದ ಅಭ್ಯರ್ಥಿಯಾಗಿ ಪ್ರಭಾಕರ್

ಬೆಂಗಳೂರು ದಕ್ಷಿಣ ಭಾಗದಲ್ಲಿ ಚಿರಪರಿಚಿತವಾಗಿರುವ ಮೈಲಸಂದ್ರದ ಪ್ರಭಾಕರ್ ರೆಡ್ಡಿ ಅವರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
* ವಯಸ್ಸು: 43
* ತಂದೆ : ರಾಮರೆಡ್ಡಿ, ಕೃಷಿಕರು
* ಪತ್ನಿ : ಎಸ್ ದೀಪ (199ರಲ್ಲಿ ವಿವಾಹ) ಮೂವರು ಹೆಣ್ಣು ಮಕ್ಕಳು
* ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡಿದ್ದಾರೆ.
* ವೃತ್ತಿ: ರಿಯಲ್ ಎಸ್ಟೇಟ್, ಶಿಕ್ಷಣ ಸಂಸ್ಥೆ
ಬೆಂಗಳೂರು ಗ್ರಾಮಾಂತರ : ಪ್ರಭಾಕರ ರೆಡ್ಡಿ ವ್ಯಕ್ತಿಚಿತ್ರ

ಪ್ರಭಾಕರ್ ರೆಡ್ಡಿ ಅವರ ಸಂಪರ್ಕ ವಿವರ

ಪ್ರಭಾಕರ್ ರೆಡ್ಡಿ ಅವರ ಸಂಪರ್ಕ ವಿವರ

ನಂ. 65, ಮೈಲಸಂದ್ರ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ -560 068
ಇಮೇಲ್: [email protected]
ದೂರವಾಣಿ: 98451 16855, 2572 5000
ವೆಬ್ ತಾಣ: http://rprabhakarreddy.in/

ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಸಮಾವೇಶ

ನಾಮಪತ್ರ ಸಲ್ಲಿಕೆ ವೇಳೆ ಬೃಹತ್ ಸಮಾವೇಶ

ಸೋಮವಾರ ಬೆಂಗಳೂರಿನ ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕ ರಾಜಣ್ಣ, ಮೇಲ್ಮನೆ ಸದಸ್ಯರಾದ ಪುಟ್ಟಣ್ಣ, ಅಪ್ಸರ್ ಆಗಾ ಅವರು ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮಗಳಲ್ಲಿ ರೆಡ್ಡಿ ಮುಂದು

ಧಾರ್ಮಿಕ ಕಾರ್ಯಕ್ರಮಗಳಲ್ಲಿ ರೆಡ್ಡಿ ಮುಂದು

ಇತ್ತೀಚೆಗೆ ಸಂಪನ್ನಗೊಂಡ ಅತಿರುದ್ರ ಮಹಾಯಾಗ ಸೇರಿದಂತೆ ಅನೇಕಲ್ ಹಬ್ಬ, ದಸರಾ ಮಹೋತ್ಸವ, ಲಕ್ಷ ದೀಪೋತ್ಸವ, ಬೆಂಗಳೂರಿನ ಹೆಸರಿನ ಶಾಸನವಿರುವ ಬೇಗೂರು ನಾಗೇಶ್ವರ ಪಂಚಲಿಂಗ ದೇಗುಲದ ಜೀರ್ಣೋದ್ಧಾರ ಸೇರಿದಂತೆ ಅನೇಕ ಧಾರ್ಮಿಕ, ಸಂಪ್ರದಾಯಬದ್ಧ ಹಬ್ಬ ಹರಿದಿನಗಳಿಗೆ ಪ್ರಭಾಕರ್ ರೆಡ್ಡಿ ಕೊಡುಗೆ ಯಥೇಚ್ಛವಾಗಿದೆ.

English summary
Elections 2014: Here is brief profile of JD(S) candidate from Bangalore Rural Prabhakar Reddy. Real estate businessman 43 year old Prabhakar Reddy filed his nomination paper on Monday(March.24, 2014)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X