ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿಪಿ ರೀನಾ ಮಾರ್ಗದರ್ಶನ, ಜೆಸಿ ನಗರದಲ್ಲಿ 45 ಕೆಜಿ ಗಾಂಜಾ ವಶ

|
Google Oneindia Kannada News

ಬೆಂಗಳೂರು, ಸೆ. 30: ಮಾದಕ ವಸ್ತು ಎಂ.ಡಿ.ಎಂ.ಎ., ಗಾಂಜಾ, ಮಾರಾಟ ಮಾಡುತ್ತಿದ್ದ ಅಂತರ ರಾಜ್ಯ 3 ಜನ ಆರೋಪಿಗಳ ಬಂಧನ, 45 ಕೆ.ಜಿ ಗಾಂಜಾ, 70 ಗ್ರಾಂ ಎಂ.ಡಿ.ಎಂ.ಎ. ವಶ ಪಡೆದುಕೊಳ್ಳಲಾಗಿದೆ.

ಜೆ.ಸಿ.ನಗರ ಪೊಲೀಸ್ ಠಾಣಾ ಸರಹದ್ದಿನ ಬೋರ್ ಬಂಕ್ ರಸ್ತೆಯ ಬಳಿ ಕಾರಿನಲ್ಲಿ ಮೂರು ಜನ ಆಸಾಮಿಗಳು ಗಾಂಜಾ ಮತ್ತು ಎಂ.ಡಿ.ಎಂ.ಎ ಎಂಬ ಮಾದಕ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಭಾತ್ಮೀದಾರರಿಂದ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ರವರಿಗೆಖಚಿತ ಮಾಹಿತಿ ಸಿಕ್ಕಿದೆ. ಮಾಹಿತಿ ಅಧಾರಿಸಿ ಸ್ಥಳಕ್ಕೆ ಹೋಗಿ, ಖಚಿತ ಪಡಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಜಿಂಡೋಜೇಮ್ಸ್ (29 ವರ್ಷ), ಪ್ರೀಸ್ಟೇಜ್ ಅಪಾರ್ಟ್‍ಮೆಂಟ್, ಪೃಥ್ವಿಲೇಔಟ್, ಕಾಡುಗೋಡಿಯಲ್ಲಿ ನೆಲೆಸಿದ್ದಾನೆ. ಆದರ್ಶ(27) ಹಾಗೂ ಇನ್ಮೇಶ್ (32) ಕ್ವೀನ್‍ವ್ಯಾಲಿ ರೆಸಿಡೆನ್ಸಿ, ಟಿ.ವಿ.ಎಸ್.ರಸ್ತೆ, ಅತ್ತಿಬೆಲೆಯಲ್ಲಿ ವಾಸ. ಮೂವರು ಕೇರಳದ ಕಣ್ಣೂರು ಜಿಲ್ಲೆಯವರು ಎಂದು ತಿಳಿದು ಬಂದಿದೆ.

ಮೈಸೂರು: ಟೊಮ್ಯಾಟೊ ಒಳಗೆ ಗಾಂಜಾ ಸಾಗಾಟ; ನಾಲ್ವರ ಬಂಧನಮೈಸೂರು: ಟೊಮ್ಯಾಟೊ ಒಳಗೆ ಗಾಂಜಾ ಸಾಗಾಟ; ನಾಲ್ವರ ಬಂಧನ

ಆರೋಪಿಗಳ ವಶದಿಂದ ಸುಮಾರು 25 ಲಕ್ಷ ರೂ. ಮೌಲ್ಯದ 45 ಕೆ.ಜಿ. ಗಾಂಜಾ, 70 ಗ್ರಾಂ ಎಂ.ಡಿ.ಎಂ.ಎ. ಮತ್ತು 1,000/- ರೂ. ನಗದು ಹಣ ಹಾಗೂ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳುವಲ್ಲಿ ಜೆ.ಸಿ.ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಲೂಬಿನ್ ಅಮಲ್ ನಾಥ್ ಪೆಡ್ಲರ್

ಲೂಬಿನ್ ಅಮಲ್ ನಾಥ್ ಪೆಡ್ಲರ್

ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಈ ಹಿಂದೆ ಗಾಂಜಾವನ್ನು ಲೂಬಿನ್ ಅಮಲ್ ನಾಥ್ ಎಂಬುವನ ಕಡೆಯಿಂದ ಖರೀದಿಸಿ, ಸೇವನೆ ಮಾಡುವಾಗ ಲೂಬಿನ್‍ಗೆ ನಾವು ಕೂಡ ಈ ರೀತಿ ತಂದು ಮಾರಾಟ ಮಾಡಬೇಕೆಂದು ಕೇಳಿಕೊಂಡಾಗ ಆತನು ವಿಶಾಖಪಟ್ಟಣಂನ, ಆಂಧ್ರಪ್ರದೇಶದಿಂದ ತರುವುದಾಗಿ ತೋರಿಸಿ ಕೊಟ್ಟಿದ್ದು, ಲೂಬಿನ್ ಅಮಲ್ ನಾಥ್ ಪ್ರಸ್ತುತ ಜಾಲಹಳ್ಳಿ ಪೊಲೀಸ್ ಠಾಣೆಯ ಗಾಂಜಾ ಮಾರಾಟ ಪ್ರಕರಣದಲ್ಲಿ ಕಾರಾಗೃಹದಲ್ಲಿರುತ್ತಾನೆ.

ರಾಜ್ಯದ ಗಡಿಭಾಗದಿಂದ ವ್ಯಕ್ತಿಯೊಬ್ಬನಿಂದ ಖರೀದಿ

ರಾಜ್ಯದ ಗಡಿಭಾಗದಿಂದ ವ್ಯಕ್ತಿಯೊಬ್ಬನಿಂದ ಖರೀದಿ

ಆರೋಪಿಗಳು ವಿಶಾಖಪಟ್ಟಣಂನ, ಆಂಧ್ರಪ್ರದೇಶ ರಾಜ್ಯದ ಗಡಿಭಾಗದಿಂದ ವ್ಯಕ್ತಿಯೊಬ್ಬರಿಂದ ಖರೀದಿಸಿದ ಗಾಂಜಾವನ್ನು ಗೂಡ್ಸ್ ಟ್ರಕ್/ಲಾರಿ ಮತ್ತು ಕಾರಿನಲ್ಲಿ ತಂದು ಅತ್ತಿಬೆಲೆಯಲ್ಲಿ ತಾವು ವಾಸವಿರುವ ಮನೆಯಲ್ಲಿ ಸಂಗ್ರಹಿಸಿಟ್ಟುಕೊಂಡು, ಸ್ವಲ್ವ ಸ್ವಲ್ಪ ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದಾಗಿ ತಿಳಿಸಿರುತ್ತಾರೆ.

ಜೆ.ಸಿ.ನಗರ ಠಾಣಾ ಸರಹದ್ದಿನಲ್ಲಿ ಮಾರಾಟ

ಆರೋಪಿಗಳು ಜೆ.ಸಿ.ನಗರ ಠಾಣಾ ಸರಹದ್ದಿನಲ್ಲಿ ಮಾರಾಟ ಮಾಡುವಾಗ 5 ಕೆ.ಜಿ. ಗಾಂಜಾವನ್ನು ಮತ್ತು 20 ಎಂ.ಡಿ.ಎಂ.ಎ ಯನ್ನು ವಶಪಡಿಸಿಕೊಂಡು, ಹೆಚ್ಚಿನ ತನಿಖೆಯನ್ನು ಕೈಗೊಂಡಾಗ ಆರೋಪಿಗಳು ಅತ್ತಿಬೆಲೆಯಲ್ಲಿ ವಾಸವಿರುವ ಮನೆಯಲ್ಲಿ ಸಂಗ್ರಹಿಸಿಟ್ಟಿರುವುದಾಗಿ ತಿಳಿಸಿದ ಮೇರೆಗೆ ಆರೋಪಿಗಳ ಮನೆಯಿಂದ 40 ಗಾಂಜಾ ಮತ್ತು 50 ಗ್ರಾಂ ಎಂ.ಡಿ.ಎಂ.ಎ ಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಎಂ.ಡಿ.ಎಂ.ಎ ಮಾದಕ ವಸ್ತುವನ್ನು ಕೊತ್ತನೂರು ಬಳಿ ನೈಜೀರಿಯಾದ ವ್ಯಕ್ತಿಯೊಬ್ಬರಿಂದ ಖರೀದಿಸಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.

Recommended Video

ಪರಿಷತ್ ಗೂ ಅಖಾಡ ರೆಡಿ.. ಕಲಿಗಳು ಇವ್ರೇ ನೋಡಿ | Oneindia Kannada
ಎಸಿಪಿ ಶ್ರೀಮತಿ ರೀನಾ ಸುವರ್ಣ ಮಾರ್ಗದರ್ಶನ

ಎಸಿಪಿ ಶ್ರೀಮತಿ ರೀನಾ ಸುವರ್ಣ ಮಾರ್ಗದರ್ಶನ

ಈ ಪ್ರಕರಣದಲ್ಲಿ ಶ್ರೀಮತಿ ರೀನಾ ಸುವರ್ಣ, ಎಸಿಪಿ, ಜೆ.ಸಿ ನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಡಿ.ಆರ್. ನಾಗರಾಜ್ ಪೊಲೀಸ್ ಇನ್ಸ್‍ಪೆಕ್ಟರ್, ಜೆ.ಸಿ ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್‍ಐ ವಿನೋದ್ ಜಿರಗಾಳೆ, ನೇಮಿನಾಥ್ ಠಕಾಯಿ, ಪ್ರೋ.ಪಿಎಸ್‍ಐ, ರಘುಪತಿ ಹೆಚ್.ಎಸ್. ಹಾಗೂ ಮೆಹಬೂಬ್ ಸಾಬ್ ಹೆಚ್.ಸಿ. 8903, ಶ್ರೀಮಂತ ರಾಠೋಡ ಪಿ.ಸಿ. 14142, ಶಿವಾನಂದ ಕಮತ ಪಿ.ಸಿ.15606, ರಮೇಶ್ ತೊಂಡಿಹಾಳ್ ಪಿ.ಸಿ.14176 ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

English summary
J.C Nagar Police team under the guidance of Smt Reena Suvarna arrested three person and seized 45 KG Ganja and 70 gm of MDMA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X