ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನುಮಾನವಿಲ್ಲ..ನಿಮ್ಮ ಆಭರಣ ಖರೀದಿ ಇಲ್ಲೇ ಕೊನೆ

|
Google Oneindia Kannada News

ಬೆಂಗಳೂರು, ಫೆ. 5: ಭಾರತೀಯರಿಗೆ ಆಭರಣ ಕೊಳ್ಳುವುದು ಒಂದು ಸಂಪ್ರದಾಯ, ಒಂದು ಫ್ಯಾಷನ್, ಒಂದು ಪ್ರತಿಷ್ಠೆ. ಹಬ್ಬಗಳು ಎದುರಾದಾಗ ಅಗತ್ಯವಿರಲಿ ಬಿಡಲಿ ಆಭರಣ ಕೊಳ್ಳುವುದನ್ನು ನಾವು ಒಪ್ಪಿ ಅಪ್ಪಿಕೊಂಡಿದ್ದೇವೆ.

ಮೊದಲು ಚಿನ್ನದ ವರ್ತಕರ ಬಳಿ ತೆರಳಿ ನಿಮಗೆ ಬೇಕಾದ ಬಗೆಯ ಡಿಸೈನ್ ಸೂಚಿಸಿ ಅದನ್ನು ಆತ ತಯಾರು ಮಾಡಿದ ನಂತರ ಕೊಳ್ಳವುದು ಸಾಮಾನ್ಯವಾಗಿತ್ತು. ಆದರೆ ಇಂದು ತರೇವಾರಿ ಡಿಸೈನ್ ಇಟ್ಟ್ಟುಕೊಂಡಿರುವ ಮಳಿಗೆಗಳು ತಲೆ ಎತ್ತಿವೆ. ವಂಶಪಾರಂಪರ್ಯವಾಗಿದ್ದ ಆಭರಣ ಮಾರಾಟ ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ.[ಜಯನಗರ ಸೌತ್ ಎಂಡ್ ವೃತ್ತಕ್ಕೀಗ 'ಸಂಜೀವಿನಿ' ಶಕ್ತಿ]

ನಗರದ ಜನರಿಗೂ ಆಭರಣದ ಮೇಲಿನ ವ್ಯಾಮೋಹ ಕಡಿಮೆಯಿಲ್ಲ. ಬೆಂಗಳೂರಿನ ಜಯನಗರ 3 ನೇ ಹಂತ ಆಭರಣ ಪ್ರಿಯರಿಗೆ ಸ್ವರ್ಗವಿದ್ದಂತೆ ಸೌತ್ ಎಂಡ್ ವೃತ್ತದಿಂದು ಜಯನಗರ 4 ನೇ ಹಂತದ ಬಸ್ ನಿಲ್ದಾಣದ ನಡುವೆ ಲೆಕ್ಕವಿಲ್ಲದಷ್ಟು ಆಭರಣ ಅಂಗಡಿಗಳಿವೆ. ಮತ್ತೆ ಹೊಸದಾಗಿ ಕೆಲ ಪ್ರತಿಷ್ಠಿತ ಮಳಿಗೆಗಳು ತೆರೆದುಕೊಳ್ಳುತ್ತಿವೆ.

ಜೋಸ್ ಆಲುಕಾಸ್, ಜೋಸ್ಕೊ, ಆರ್ ಆರ್ ಗೋಲ್ಡ್, ಕಲ್ಯಾಣ್, ಭೀಮಾ ಮತ್ತು ಇತ್ತೀಚೆಗೆ ಸುಲ್ತಾನ್ ಆಭರಣ ಮಳಿಗೆಯನ್ನು ಸಹ ತೆರೆಯಲಾಗಿದೆ. ಇದಲ್ಲದೇ ಚಿಕ್ಕ ಚಿಕ್ಕ ಆಭರಣ ಮಳಿಗೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಚಿನ್ನ, ವಜ್ರ ಮತ್ತು ಪ್ಲಾಟಿನಂ ಆಭರಣಗಳನ್ನು ಕೊಳ್ಳಲು ಬಯಸುವವರು ಜಯನಗರ 3 ನೇ ಹಂತಕ್ಕೆ ಧಾವಿಸುವುದು ಉತ್ತಮ.

ಆರ್ ಆರ್ ಗೋಲ್ಡ್ ಪ್ಯಾಲೇಸ್

ಆರ್ ಆರ್ ಗೋಲ್ಡ್ ಪ್ಯಾಲೇಸ್

ಆರ್ ಆರ್ ಗೋಲ್ಡ್ ಪ್ಯಾಲೇಸ್ ಎಲಿಫೆಂಟ್ ರಾಕ್ ರಸ್ತೆಯಲ್ಲಿದೆ, ಬೆಳಗ್ಗೆ 10.30 ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಬೆಂಗಳೂರಿನ ಮಲ್ಲೆಶ್ವರಂ ನಲ್ಲಿ ಮೊದಲು ಆರಂಭವಾದ ಮಳಿಗೆ ಯನ್ನು ನಂತರ ಜಯನಗರದಲ್ಲೂ ಸ್ಥಾಪನೆ ಮಾಡಲಾಯಿತು.

ಸುಲ್ತಾನ್ ಜ್ಯುವೆಲರ್ಸ್

ಸುಲ್ತಾನ್ ಜ್ಯುವೆಲರ್ಸ್

ಇತ್ತೀಚೆಗೆ ಆರಂಭವಾದ ಸುಲ್ತಾನ್ ಜ್ಯುವೆಲರ್ಸ್ ನ್ನು ಬಾಲಿವುಡ್ ಸಂಗೀತ ನಿರ್ದೇಶಕ ಎ.ಆರ್. ರೆಹಮಾನೆ ಉದ್ಘಾಟನೆ ಮಾಡಿದರು. ಮೂರು ಮಹಡಿಯ ಆಭರಣ ಮಳಿಗೆಯಲ್ಲಿ ಎಲ್ಪ ಬಗೆಯ ಕಲೆಕ್ಷನ್ ಗಳಿವೆ.

ಜೋಸ್ ಆಲುಕಾಸ್

ಜೋಸ್ ಆಲುಕಾಸ್

ಕ್ಲೌಡ್ 9 ಆಸ್ಪತ್ರೆ ಸಮೀಪ ಇರುವ ಆಭರಣ ಮಳಿಗೆ ಜಯನಗರ 3 ನೇಹಂತದ 9 ನೇ ಮುಖ್ಯರಸ್ತೆಯಲ್ಲಿದೆ. ವಿಶಾಲವಾದ ಜಾಗದಲ್ಲಿರುವ ಮಳಿಗೆಯಲ್ಲಿ ವಿಶೇಷ ಕಲೆಕ್ಷನ್ ಗಳು ಸದಾ ಲಭ್ಯ. ಕೇರಳ ಮೂಲದ ಸಂಸ್ಥೆ ಇಂದು ಬೃಹತ್ ಆಗಿ ಬೆಳೆದಿದೆ.

ಭೀಮಾ ಜ್ಯುವೆಲರ್ಸ್

ಭೀಮಾ ಜ್ಯುವೆಲರ್ಸ್

ಎನ್ ಎಂಕೆ ಆರ್ ವಿ ಕಾಲೇಜು ಸಮೀಪವಿರುವ ಭೀಮಾ ಆಭರಣ ಮಳಿಗೆಯಲ್ಲೂ ಸದಾ ಗ್ರಾಹರಕರು ತುಂಬಿರುತ್ತಾರೆ. 1925 ರಲ್ಲಿ ಆರಂಭವಾದ ಕೇರಳ ಮೂಲದ ಸಂಸ್ಥೆ ಇಂದು ದಕ್ಷಿಣ ಭಾರತದ ಎಲ್ಲ ಕಡೆ ಮಳಿಗೆಯನ್ನು ಹೊಂದಿದೆ. ಎರಡು ಸಾವಿರಕ್ಕೂ ಅಧಿಕ ಜನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಲ್ಯಾಣ್ ಜ್ಯುವೆಲರ್ಸ್

ಕಲ್ಯಾಣ್ ಜ್ಯುವೆಲರ್ಸ್

ಜಯನಗರ 3 ನೇ ಹಂತದ ಎಲಿಫೆಂಟ್ ರಾಕ್ ರಸ್ತೆಯಲ್ಲಿರುವ ಮಳಿಗೆಯನ್ನು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇತ್ತೀಚೆಗೆ ಉದ್ಘಾಟನೆ ಮಾಡಿದರು. ಕೇರಳದ ತ್ರಿಶೂರ್ ಮೂಲದ ಸಂಸ್ಥೆ ಕರ್ನಾಟಕದ ಹಲವೆಡೆ ತನ್ನ ಶಾಖೆಗಳನ್ನು ಹೊಂದಿದೆ.

ಮತ್ಯಾವ ಮಳಿಗೆಗಳಿವೆ?

ಮತ್ಯಾವ ಮಳಿಗೆಗಳಿವೆ?

ಇವುಗಳ ಜತೆಗೆ ಜೋಸ್ಕೋ, ಮಲಬಾರ್ ಗೋಲ್ಡ್‌, ಪದ್ಮಾ, ಸ್ವರ್ಣ ಲಕ್ಷ್ಮೀ, ದೀಪಮ್, ಧವನಂ, ರಾಜೇಶ್ವರಿ, ಗೀತಾ ಸೇರಿದಂತೆ ಸುಮಾರು 30 ಕ್ಕೂ ಅಧಿಕ ಆಭರಣ ಮಳಿಗೆಗಳಿವೆ. ಒಟ್ಟಿನಲ್ಲಿ ಆಭರಣ ಕೊಳ್ಳಲು ತೀರ್ಮಾನಿಸಿದ್ದರೆ ಜಯನಗರ 3 ಹಂತಕ್ಕೆ ಭೇಟಿ ನೀಡಿದರೆ ನಿಮಗಿಷ್ಟವಾದುದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.

ಅಲೆದಾಟವಿಲ್ಲ

ಅಲೆದಾಟವಿಲ್ಲ

ಯಾವುದೋ ಒಂದು ಮಳಿಗೆಯ ಆಭರಣಗಳು ನಿಮ್ಮ ಮನಸ್ಸಿಗೆ ಹಿಡಿಸಲಿಲ್ಲ ಎಂದರೆ ಮತ್ತೆ ಕೀಲೊಮೀಟರ್ ದೂರ ಅಲೆಯಬೇಕಾಗಿಲ್ಲ. ಹತ್ತಿರದಲ್ಲಿಯೇ ಪ್ರತಿಷ್ಠಿತ ಮಳಿಗೆಗಳಿರುವುದರಿಂದ ಸಮಯ ಮತ್ತು ಶ್ರಮದ ಉಳಿತಾಯಮಾಡಿಕೊಳ್ಳಬಹುದು.

English summary
Bengaluru: Jayanagar 3 rd block had number of prestigious gold and jewellery shops including Bhima, Kalyan, Sultan etc. Jayanagara 3 rd block is the best place for purchasing gold and diamonds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X