ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಲಲಿತಾ ಸಾಕು ಪುತ್ರ ಸುಧಾಕರನ್ ಜೈಲಿನಿಂದ ಬಿಡುಗಡೆ ಸನ್ನಿಹಿತ

|
Google Oneindia Kannada News

ಬೆಂಗಳೂರು, ಡಿ. 18: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅವರ ಬಿಡುಗಡೆ ಮುಂದಿನ ವರ್ಷಕ್ಕೆ ಎಂಬುದು ನಿಗದಿಯಾಗಿದೆ. ಆದರೆ, ಸಹ ಕೈದಿಯಾಗಿರುವ ಜೆ ಜಯಲಲಿತಾ ಅವರ ಸಾಕು ಪುತ್ರ ವಿಎನ್ ಸುಧಾಕರನ್ ಇನ್ನು ಮುರ್ನಾಲ್ಕು ದಿನಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಕಂಡು ಬಂದಿದೆ.

ಶಶಿಕಲಾ ನಟರಾಜನ್ ಅವರು ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಆದರೆ, ಅರ್ಜಿ ಸಲ್ಲಿಸದೆ ಸುಧಾಕರನ್ ಶಶಿಕಲಾರಿಗಿಂತ ಮುಂಚಿತವಾಗಿ ಪರಪ್ಪನ ಅಗ್ರಹಾರ ತೊರೆಯುವ ಸಾಧ್ಯತೆಯಿದೆ.

ಸನ್ನಡತೆ ಆಧಾರದ ಮೇಲೆ ಬಿಡುಗಡೆ ಬಯಸಿದ್ದ ಶಶಿಕಲಾಗೆ ಹಿನ್ನಡೆ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಬಯಸಿದ್ದ ಶಶಿಕಲಾಗೆ ಹಿನ್ನಡೆ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಅವರು ಸನ್ನಡತೆ ಆಧಾರದ ಮೇಲೆ ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ ಮಾಡುವಂತೆ ಕೋರಿದ್ದ ಅರ್ಜಿ ತಿರಸ್ಕೃತಗೊಂಡಿದೆ.

Jayalalithaas foster son VN Sudhakaran likely to be released from jail in the next 3-4 days

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾರಂತೆ ವಿಎನ್ ಸುಧಾಕರನ್ ಅವರಿಗೂ 10 ಕೋಟಿ ರೂ ದಂಡವನ್ನು ವಿಧಿಸಲಾಗಿತ್ತು. ಸುಧಾಕರನ್ ಪರ ವಕೀಲರು ನ್ಯಾಯಾಲಯಕ್ಕೆ ಅಗತ್ಯ ಮೊತ್ತ ಪಾವತಿಸಲು ಸಿದ್ಧರಾಗಿದ್ದಾರೆ. ದಂಡವನ್ನು ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಸೋಮವಾರ(ಡಿ. 21)ದಂದು ಕೋರ್ಟಿಗೆ ಪಾವತಿಸುತ್ತಾರೆ ಎಂಬ ಸುದ್ದಿ ಬಂದಿದೆ. ದಂಡ ಪಾವತಿಸಿರುವುದರಿಂದ ನಿಗದಿಯಂತೆ ಬಿಡುಗಡೆಯಾಗಬಹುದು.ಆದರೆ, ನಿಗದಿತ ದಿನಾಂಕಕ್ಕೂ ಮುನ್ನವೇ ಜೈಲಿನಿಂದ ಬಿಡುಗಡೆ ಬಯಸಿದ್ದ ಶಶಿಕಲಾ ಅವರು ಜನವರಿ 27, 2021ರಂದು ಬಿಡುಗಡೆ ಆಗಲಿದ್ದಾರೆ.

Recommended Video

ಕೇವಲ 39 ಗಳಿಸಿ ಎಲ್ಲಾ ವಿಕೆಟ್ ಒಪ್ಪಿಸಿದ ನಮ್ಮ ಭಾರತ | Oneindia Kannada

ದಂಡ ವಿಧಿಸಿದ ಬಳಿಕ ಬಿಡುಗಡೆಗೆ ಅರ್ಹ:
2014ರ ಸೆಪ್ಟೆಂಬರ್‌ ನಲ್ಲಿ ಸ್ಪೆಷಲ್ ಟ್ರಯಲ್ ಕೋರ್ಟ್ ನ್ಯಾ. ಜಾನ್ ಮೈಕೇಲ್ ಕನ್ಹಾ ಐಪಿಸಿ ಸೆಕ್ಷನ್ 109ರಡಿ ಜೆ ಜಯಲಲಿತಾ, ಶಶಿಕಲಾ, ಸುಧಾಕರನ್, ಇಳವರಸಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು. ಶಶಿಕಲಾ ದತ್ತು ಪುತ್ರ, ಜಯಲಲಿತಾ ಸಾಕುಪುತ್ರ ವಿಎನ್ ಸುಧಾಕರನ್, ಜೆ ಇಳವರಸಿ ಹಾಗೂ ಶಿಶಿಕಲಾ ಅವರಿಗೆ 2017ರ ಫೆಬ್ರವರಿ 15ರಂದು ಜೈಲುಶಿಕ್ಷೆ ಪ್ರಕಟವಾಗಿತ್ತು. ಈಗ 10 ಕೋಟಿ ರು ದಂಡ ಪಾವತಿಸಿದ ಬಗ್ಗೆ ನ್ಯಾಯಾಲಯದಿಂದ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳಿಗೆ ಪತ್ರ ತಲುಪಿದ ಬಳಿಕ ಬಿಡುಗಡೆ ಕುರಿತ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕೃತವಾಗಿ ಮಾಹಿತಿ ಬಂದಿದೆ. ಶಶಿಕಲಾ, ವಿಎನ್ ಸುಧಾಕರನ್, ಜೆ ಇಳವರಸಿ ಅವರಿಗೂ 10ಕೋಟಿ ಪ್ಲಸ್ 10 ಸಾವಿರ ರು ದಂಡ ವಿಧಿಸಲಾಗಿದ್ದು, ಎಲ್ಲರೂ ಕೂಡಾ ದಂಡ ವಿಧಿಸಿದ ಬಳಿಕ ಬಿಡುಗಡೆಗೆ ಅರ್ಹರಾಗುತ್ತದೆ

English summary
The late Jayalalithaa's foster son VN Sudhakaran likely to be released from Bengaluru central jail in the next 3-4 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X