ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯಲಲಿತ ಪ್ರಕರಣ : ಇಂದು ರಾಜ್ಯ ಕಾನೂನು ಆಯೋಗದ ಸಭೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜುಲೈ, 07 : ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಸರ್ಕಾರ ಸಲ್ಲಿಕೆ ಮಾಡಿರುವ ಮೇಲ್ಮನವಿ ಕುರಿತು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಆಕ್ಷೇಪಣೆಗಳ ಕುರಿತು ರಾಜ್ಯ ಕಾನೂನು ಆಯೋಗ ಜುಲೈ 7 ರಂದು ಸಭೆ ಸೇರಿ ಮುಂದಿನ ಹಂತಗಳ ಬಗ್ಗೆ ಚರ್ಚೆ ಮಾಡಲಿದೆ.

ಈಗ ಕೇಳಿ ಬಂದ ಆಕ್ಷೇಪಣೆಗಳು ಸಾಮಾನ್ಯ ಆಡಳಿತಕ್ಕೆ ಸಂಬಂಧಪಟ್ಟಿದ್ದಾಗಿದ್ದು, ಉಳಿದ ವಿಚಾರಗಳು ಮುಂದಿನ ವಾರ ವಿಚಾರಣೆಗೆ ಬರಲಿದೆ. ಡಿಎಂಕೆ ಪಕ್ಷ ನಾಯಕ ಕೆ ಅನ್‌ಬಳಗನ್ ಸಲ್ಲಿಸಿದ್ದ ಅರ್ಜಿ ಹಾಗೂ ಕರ್ನಾಟಕ ಸರ್ಕಾರ ಮೇಲ್ಮನವಿಯನ್ನು ಮುಂದಿನವಾರ ಒಟ್ಟಿಗೆ ವಿಚಾರಣೆಗೆ ಒಳಪಡಿಸಲಾಗುವುದು ಎಂದು ರಾಜ್ಯ ಕಾನೂನು ಅಧಿಕಾರಿಗಳು ತಿಳಿಸಿದ್ದಾರೆ.[ಜಯಾ ಖುಲಾಸೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಡಿಎಂಕೆ]

Jayalalithaa appeal: Karnataka law department meeting today

ಡಿಎಂಕೆ ನಾಯಕ ಅನ್‌ಬಳಗನ್ ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸೀ, ಸುಧಾಕರನ್ ಸಂಬಂಧಪಟ್ಟಂತೆ ಪ್ರಕರಣವನ್ನು ಖುಲಾಸೆಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸುವುದರ ಜೊತೆಯಲ್ಲಿ ತಪ್ಪು ತೀರ್ಪು ಪ್ರಕಟಿಸಿದೆ ಎಂದು ಹೇಳಿದ್ದಾರೆ.

ಜಯಲಲಿತಾ 1,50,00,000 ನಷ್ಟು ಮೌಲ್ಯಭರಿತ ಬಹುಮಾನವನ್ನು ಸ್ವೀಕರಿಸಿಲ್ಲ ಎಂದಿರುವ ಹೈಕೋರ್ಟ್ ತೀರ್ಪನ್ನು ಅಲ್ಲಗಳೆದಿದ್ದಾರೆ. ತೀರ್ಪು ನೀಡುವಾಗ ಹೈಕೋರ್ಟ್ ಹಲವು ಗಣಿತದ ತಪ್ಪುಗಳನ್ನು ಮಾಡಿದ್ದು, ಇದರಿಂದ ಜಯಲಲಿತಾ ಅವರು ಖುಲಾಸೆಗೊಂಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿದೆ. ಜಯಲಲಿತಾ ಅವರ 100 ಬ್ಯಾಂಕ್ ಅಕೌಂಟ್ ಗಳಲ್ಲಿ 34 ಬ್ಯಾಂಕ್‌ ಅಕೌಂಟ್ ಗಳು ಬೋಗಸ್ ಎಂದು ಡಿಎಂಕೆ ನಾಯಕ ಅನ್‌ಬಳಗನ್ ಅರೋಪಿಸಿದ್ದಾರೆ

English summary
The Karnataka Law Department will hold a meeting to comply with the office objections raised by the Supreme Court filing branch in connection with the appeal filed challenging the acquittal of Tamil Nadu Chief Minister J Jayalalithaa in the disproportionate assets case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X