• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ

|

ಬೆಂಗಳೂರು, ಏ.24: ಜಯದೇವ ಮೇಲ್ಸೇತುವೆ ತೆರವು ಕಾರ್ಯ ದಿನದಿಂದ ದಿನಕ್ಕೆ ವಿಳಂಬವಾಗುತ್ತಾ ಹೋಗುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಗಾಗಲೇ ತೆರವು ಕಾರ್ಯ ಆರಂಭಗೊಂಡು ಒಂದು ತಿಂಗಳು ಕಳೆಯಬೇಕಿತ್ತು, ಆದರೆ ಇದುವರೆಗೂ ಕಾರ್ಯ ಆರಂಭಗೊಂಡಿಲ್ಲ. ಇದಕ್ಕೆ ಬಿಎಂಆರ್‌ಸಿಎಲ್ ನೇರ ಕಾರಣವಾಗಿದೆ.

ನಮ್ಮ ಮೆಟ್ರೋ ಕಾಮಗಾರಿ, ಜಯದೇವ ಸರ್ವೀಸ್ ರಸ್ತೆ ಬಂದ್

ಮೆಟ್ರೋ ಕಾಮಗಾರಿಗೆ ಅಗತ್ಯವಿರುವ ಭೂಮಿಯ ಸ್ವಾಧೀನ ಪ್ರಕ್ರಿಯೆ ತಡವಾಗಿದೆ. ಹೀಗಾಗಿ ಮೇಲು ರಸ್ತೆ ತೆರವು ಕಾರ್ಯವನ್ನು ಒಂದೆರೆಡು ತಿಂಗಳುಗಳ ಕಾಲ ಮುಂದೂಡಲಾಗಿದೆ.

ಮೆಟ್ರೋ ಅಧಿಕಾರಿಗಳು ಮಾರ್ಚ್ ಅಂತ್ಯದ ವೇಳೆಗೆ ಫ್ಲೈಓವರ್ ತೆರವು ಗೊಳಿಸುವುದಾಗಿ ಹೇಳಿದ್ದರು ಆದರೆ ಅಂತಹ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ.

ಮೆಟ್ರೋ ನಿಗಮ ನೀಡಿದ್ದ ಗಡುವು ಮೀರಿದೆ

ಮೆಟ್ರೋ ನಿಗಮ ನೀಡಿದ್ದ ಗಡುವು ಮೀರಿದೆ

ಮೆಟ್ರೋ ನಿಗಮ ಫ್ಲೈಓವರ್ ತೆರವು ಕಾರ್ಯಕ್ಕೆ ನೀಡಿದ್ದ ಗಡುವು ಮುಕ್ತಾಯವಾಗಿದೆ. ಜಯದೇವ ಆಸ್ಪತ್ರೆ ಜಂಕ್ಷನ್‌ನಲ್ಲಿ ಸುಗಮ ಸಂಚಾರ ಕಲ್ಪಿಸಲು , ಸುತ್ತಮುತ್ತಲಿನ ಕಟ್ಟಡಗಳನ್ನು ತೆರವುಗೊಳಿಸಬೇಕಿದೆ. ಹೀಗಾಗಿ ಮೇಲುರಸ್ತೆ ತೆರವು ಕಾರ್ಯ ವಿಳಂಬವಾಗಿದೆ. ಈಗಾಗಲೇ ಸಂಚಾರ ಪೊಲೀಸರ ನೆರವಿನೊಂದಿಗೆ ಕಟ್ಟಡ ತೆರವು ಕಾರ್ಯ ಆರಂಭವಾಗಿದೆ.

ಗೊಟ್ಟಿಗೆರೆ-ನಾಗವಾರ ಮೆಟ್ರೋ ಕಾಮಗಾರಿ ಚುರುಕು

ಗೊಟ್ಟಿಗೆರೆ-ನಾಗವಾರ ಮೆಟ್ರೋ ಕಾಮಗಾರಿ ಚುರುಕು

ಗೊಟ್ಟಿಗೆರೆ-ನಾಗವಾರ ಮಾರ್ಗ ನಿರ್ಮಾಣ ಕಾಮಗಾರಿ ಚುರುಕಿನಿಂದ ಸಾಗಿದೆ. ಐಐಎಂಬಿ ಜಂಕ್ಷನ್‌ನಲ್ಲಿ ಡಕ್ಟ್‌ಗಳನ್ನು ಅಳವಡಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಾರ್ಮಿಕರು ಮತದಾನ ಮಾಡಲು ಊರಿಗೆ ತೆರಳಿದ್ದಾರೆ. ಅವರು ವಾಪಸಾದ ಬಳಿಕ ಕಾಮಗಾರಿಯು ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಲ್ಲಿ ಮೊದಲ ಡಬ್ಬಲ್ ಡೆಕ್ಕರ್ ಮೇಲ್ಸೇತುವೆ, ಹೇಗಿರುತ್ತೆ?

ಫ್ಲೈಓವರ್ ತೆರವಿಗೆ ಸಕಲ ಸಿದ್ಧತೆ

ಫ್ಲೈಓವರ್ ತೆರವಿಗೆ ಸಕಲ ಸಿದ್ಧತೆ

ಜಯದೇವ ಜಂಕ್ಷನ್‌ನಲ್ಲಿನ ಫ್ಲೈಓವರ್ ತೆರವಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಅಥವಾ ಎರಡು ತಿಂಗಳಲ್ಲಿ ತೆರವು ಕಾರ್ಯ ಆರಂಭಗೊಳ್ಳಲಿದೆ. ನಂತರ ಎರಡು ತಿಂಗಳೊಳಗೆ ತೆರವು ಕಾರ್ಯ ಮುಗಿಯಲಿದೆ.

ಬಿಟಿಎಂ ರಸ್ತೆ ಹೆಚ್ಚು ಅಪಾಯಕಾರಿ

ಬಿಟಿಎಂ ರಸ್ತೆ ಹೆಚ್ಚು ಅಪಾಯಕಾರಿ

ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಬಹುತೇಕರು ಬಿಟಿಎಂ ಬಡಾವಣೆಯ ರಸ್ತೆಗಳ ಮೂಲಕ ಬನ್ನೇರುಘಟ್ಟ ರಸ್ತೆಯನ್ನು ತಲುಪುತ್ತಾರೆ. ಈ ರಸ್ತೆಗಳು ವಾಹನ ಸವಾರರಿಗೆ ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

English summary
BMRCL finalized the land acquisition process. So Jayadeva Flyover demolition work has been delayed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X