ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯದೇವ ಮೇಲ್ಸೇತುವೆ ತೆರವು ಕಾರ್ಯ ಆರಂಭ ಯಾವಾಗ?

|
Google Oneindia Kannada News

ಬೆಂಗಳೂರು, ಜುಲೈ 16: ಜಯದೇವ ಮೇಲ್ಸೇತುವೆ ತೆರವು ಕಾರ್ಯವನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.

ಈ ಸೋಮವಾರದಿಂದಲೇ ತೆರವು ಕಾರ್ಯ ಆರಂಭವಾಗಬೇಕಿತ್ತು ಆದರೆ ಅದನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ. ಜುಲೈ 15ರಿಂದ ಬನ್ನೇರುಘಟ್ಟ ರಸ್ತೆಯಿಂದ ಸಿಲ್ಕ್‌ಬೋರ್ಡ್‌ ಜಂಕ್ಷನ್‌ವರೆಗೆ ಫ್ಲೈಓರ್ ಲೂಪ್ ನಿರ್ಮಾಣಮಾಡಲಿರುವ ಕಾರಣ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಸುವುದಾಗಿ ತಿಳಿಸಲಾಗಿತ್ತು.

ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ

ಈ ಲೂಪ್ ಬನ್ನೇರುಘಟ್ಟ ರಸ್ತೆಯಿಂದ ಸೆಂಟ್ರಲ್ ಸಿಲ್ಕ್‌ಬೋರ್ಡ್‌ ಜಂಕ್ಷನ್‌ಗೆ ಸಂಪರ್ಕಿಸುತ್ತದೆ. ಗುರುವಾರದಿಂದ ಈ ಮಾರ್ಗದಲ್ಲಿ ಸಂಚಾರವನ್ನು ನಿಷೇಧಿಸಲಾಗುತ್ತಿದ್ದು ಮುಂದಿನ ಸೋಮವಾರದಿಂದ ಕಾಮಗಾರಿ ಆರಂಭವಾಗಲಿದೆ.

Jayadeva flyover demolition start from July 22

ನಮ್ಮ ಮೆಟ್ರೋ ರೀಚ್ 5(ಆರ್‌ವಿ ರಸ್ತೆಯಿಂದ ಮೊಬ್ಬಸಂದ್ರ) ರೀಚ್ 6 ಲೈನ್(ಗೊಟ್ಟಿಗೆರೆಯಿಂದ ನಾಗವಾರ) ಕಾಮಗಾರಿಯಿಂದ ಬಿಟಿಎಂ ಲೇಔಟ್, ಜಯನಗರ, ಬನ್ನೇರುಘಟ್ಟ ರಸ್ತೆಯ ನಿವಾಸಿಗಳಿಗೆ ಅಡಚಣೆ ಉಂಟಾಗಲಿದೆ.

ಬಿಎಂಆರ್‌ಸಿಎಲ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಬದಲಿ ಮಾರ್ಗ ಈಗಾಗಲೇ ಸಂಚಾರ ಪೊಲೀಸರು ಗುರುತಿಸಿದ್ದಾರೆ. 2017ರಲ್ಲೇ ಅನುಮತಿ ನೀಡಿದಂತೆ ಮೊದಲು ಬಿಎಂಆರ್‌ಸಿಎಲ್ ಮೇಲ್ಸೇತುವೆಯನ್ನು ತೆರವುಗೊಳಿಸುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈ ಮೇಲ್ಸೇತುವೆಯ ನಿರ್ಮಾಣಕ್ಕೆ 21 ಕೋಟಿ ರೂ ವೆಚ್ಚ ಮಾಡಿತ್ತು.

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಮೈಕೋ ಲೇಔಟ್‌ನಲ್ಲಿ ಟ್ರಾಫಿಕ್ ಪೊಲೀಸರೂ ಈಗಾಗಲೇ ಗುರಪ್ಪನಪಾಳ್ಯಕ್ಕೆ ತೆರಳುವವರು ಸರ್ವೀಸ್‌ ರಸ್ತೆ ಮೂಲಕ ತೆರಳಲು ಸೂಚಿಸಿದ್ದಾರೆ. ಒಟ್ಟು ಎರಡು ಹಂತಗಳಲ್ಲಿ ಜಯದೇವ ಮೇಲ್ಸೇತುವೆ ತೆರವು ಕಾರ್ಯ ನಡೆಸಲಾಗುತ್ತದೆ.

ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ! ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ!

ಜುಲೈ ಮೂರನೇ ವಾರದಲ್ಲಿ ಬನ್ನೇರುಘಟ್ಟದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ ತಲುಪುವ ಕಡೆಗಿನ ಫ್ಲೈಓವರ್‌ನ್ನು ಮೊದಲು ತೆರವುಗೊಳಿಸಲಾಗುತ್ತದೆ. ಬಳಿಕ ಮುಖ್ಯ ಮೇಲ್ಸೇತುವೆ ಭಾಗವನ್ನು ನಂತರದ ದಿನದಲ್ಲಿ ತೆರವುಗೊಳಿಸಲಾಗುತ್ತದೆ. 12 ವರ್ಷಗಳ ಹಳೆಯ ಸೇತುವೆಯನ್ನು ತೆರವುಗೊಳಿಸಲು ಎರಡರಿಂದ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದರು.

English summary
Jayadeva flyover demolition start from July 22, The traffic diversion plan at Jayadeva flyover junction, which was supposed to come into effect on Monday, has been postponed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X