ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯದೇವ ಫ್ಲೈಓವರ್ ತೆರವು ಕಾರ್ಯ ಅಕ್ಟೋಬರ್‌ನಲ್ಲಿ?

|
Google Oneindia Kannada News

ಬೆಂಗಳೂರು, ಮೇ 10: ನಮ್ಮ ಮೆಟ್ರೋ ಎರಡನೇ ಹಂತದ ಮಾರ್ಗ ನಿರ್ಮಾಣಕ್ಕಾಗಿ ಜಯದೇವ ಮೇಲ್ಸೇತುವೆಯನ್ನು ತೆರವುಗೊಳಿಸುವುದು ಅನಿವಾರ್ಯವಾಗಿದ್ದು, ತೆರವು ಕಾರ್ಯವನ್ನು ದಿನದಿಂದ ದಿನಕ್ಕೆ ಮುಂದೂಡಲಾಗುತ್ತಿದೆ.

ಗೊಟ್ಟಿಗೆರೆ-ನಾಗವಾರ ಮೆಟ್ರೋ ಮಾರ್ಗ ಇದಾಗಿದೆ. ಇಲ್ಲಿ ಮೇಲ್ಸೇತುವೆ ತೆರವು ಕಾರ್ಯ ನಡೆಯುವುದರಿಂದ ಬಿಟಿಎಂ ಲೇಔಟ್‌, ಜಯನಗರ, ಬನ್ನೇರುಘಟ್ಟ ಪ್ರದೇಶಕ್ಕೆ ತೊಂದರೆ ಉಂಟಾಗಲಿದೆ.

ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ ಜಯದೇವ ಮೇಲ್ಸೇತುವೆ ತೆರವು ಕಾರ್ಯ ಸದ್ಯಕ್ಕಿಲ್ಲ, ಕಾರಣಗಳು ಇಲ್ಲಿವೆ

ಇದುವರೆಗೆ ಆರ್‌ವಿ ರಸ್ತೆ-ಸಿಲ್ಕ್ ಬೋರ್ಡ್ ನಡುವೆ ಕೇವಲ ಶೇ.15ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಕೆಲಸಗಾರರು ರಜೆಯ ಮೇಲೆ ಊರುಗಳಿಗೆ ತೆರಳಿರುವುದರಿಂದ ಕಾಮಗಾರಿ ನಿಧಾನವಾಗುತ್ತಿದೆ.

ಕಾಮಗಾರಿಯು ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ನಮಗೆ ತೊಂದರೆಯಾಗುತ್ತಿದೆ. ಇನ್ನು ಬನ್ನೇರುಘಟ್ಟ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ಸಂಪರ್ಕಿಸುವ ಫ್ಲೈಓವರ್ ನಿರ್ಮಾಣ ಕಾರ್ಯವನ್ನು ಮೊದಲು ಪೂರ್ಣಗೊಳಿಸಿ, 2017ರಲ್ಲೇ ಬಿಎಂಆರ್‌ಸಿಎಲ್ ಡೆಡ್‌ಲೈನ್ ನೀಡಿತ್ತು ಹಲವಾರು ಬಾರಿ ಗಡುವು ಮೀರಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ವಿಳಂಬ ಏಕೆ

ಕಾಮಗಾರಿ ವಿಳಂಬ ಏಕೆ

ರೀಚ್ 5 ಹಾಗೂ ರೀಚ್ 6ರ ನಮ್ಮ ಮೆಟ್ರೋ ಕಾಮಗಾರಿ ಆರಂಭಕ್ಕೂ ಮುನ್ನ ಬಿಎಂಆರ್‌ಸಿಎಲ್ ವಾಹನ ಸವಾರರಿಗೆ ಅನನುಕೂಲವಾಗದಂತೆ ನೋಡಿಕೊಳ್ಳುವುದು ಕೂಡ ಕರ್ತವ್ಯವಾಗಿದೆ. 300ಕ್ಕೂ ಹೆಚ್ಚು ಕೆಲಸಗಾರರು ಮತದಾನ ಮಾಡಲು ಊರಿಗೆ ತೆರಳಿರುವ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ.

ಪರ್ಯಾಯ ಮಾರ್ಗ ಯಾವುದು

ಪರ್ಯಾಯ ಮಾರ್ಗ ಯಾವುದು

ಮೈಕೋ ಲೇಔಟ್‌ನಲ್ಲಿ ಟ್ರಾಫಿಕ್ ಪೊಲೀಸರೂ ಈಗಾಗಲೇ ಗುರಪ್ಪನಪಾಳ್ಯಕ್ಕೆ ತೆರಳುವವರು ಸರ್ವೀಸ್‌ ರಸ್ತೆ ಮೂಲಕ ತೆರಳಲು ಸೂಚಿಸಿದ್ದಾರೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಒಟ್ಟು ಎರಡು ಹಂತದಲ್ಲಿ ಮೇಲ್ಸೇತುವೆ ತೆರವು ಕಾರ್ಯ

ಒಟ್ಟು ಎರಡು ಹಂತದಲ್ಲಿ ಮೇಲ್ಸೇತುವೆ ತೆರವು ಕಾರ್ಯ

ಒಟ್ಟು ಎರಡು ಹಂತಗಳಲ್ಲಿ ಜಯದೇವ ಮೇಲ್ಸೇತುವೆ ತೆರವು ಕಾರ್ಯ ನಡೆಸಲಾಗುತ್ತದೆ. ಮೇ ಅಂತ್ಯದಲ್ಲಿ ಬನ್ನೇರುಘಟ್ಟದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ ತಲುಪುವ ಕಡೆಗಿನ ಫ್ಲೈಓವರ್‌ನ್ನು ಮೊದಲು ತೆರವುಗೊಳಿಸಲಾಗುತ್ತದೆ. ಬಳಿಕ ಮುಖ್ಯ ಮೇಲ್ಸೇತುವೆ ಭಾಗವನ್ನು ನಂತರದ ದಿನದಲ್ಲಿ ತೆರವುಗೊಳಿಸಲಾಗುತ್ತದೆ. 12 ವರ್ಷಗಳ ಹಳೆಯ ಸೇತುವೆಯನ್ನು ತೆರವುಗೊಳಿಸಲು ಎರಡರಿಂದ ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದರು ಆದರೆ ಈಗಿರುವ ಮಾಹಿತಿ ಪ್ರಕಾರ ಕಾರ್ಯ ಆರಂಭವಾಗುವುದೇ ಅಕ್ಟೋಬರ್ ನಲ್ಲಿ.

ಬಿಎಂಆರ್‌ಸಿಎಲ್ ಮಾರ್ಚ್ ಅಂತ್ಯದಲ್ಲೇ ಆರಂಭಿಸಬೇಕಿತ್ತು

ಬಿಎಂಆರ್‌ಸಿಎಲ್ ಮಾರ್ಚ್ ಅಂತ್ಯದಲ್ಲೇ ಆರಂಭಿಸಬೇಕಿತ್ತು

ಬಿಎಂಆರ್‌ಸಿಎಲ್ ತಿಳಿಸಿದ ಹಾಗೆ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ತಿಂಗಳ ಆರಂಭದಲ್ಲೇ ತೆರವು ಕಾರ್ಯವನ್ನು ಆರಂಭಿಸಬೇಕಿತ್ತು. ಆದರೆ ಹಲವಾರು ಕಾರಣಗಳಿಂದ ಮುಂದೂಡಿದೆ. ಇದೀಗ ಕೆಲಸಗಾರರು ಊರುಗಳಿಗೆ ತೆರಳಿರುವುದರಿಂದ ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭಿಸುವ ಸಾಧ್ಯತೆ ಇದೆ. ಒಟ್ಟು ಎರಡು ಹಂತದಲ್ಲಿ ತೆರವು ಕಾರ್ಯ ನಡೆಯಲಿದೆ.

ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ! ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ!

English summary
Work on demolishing Jayadeva flyover may begin only by this October. The busy hospital junction is being remodeled into a six-level infrastructure to accommodate an additional elevated road and the interchange Metro station of Reach 5 line (RV Road to Bommasandra) and Reach 6 line (Gottigere to Nagawara).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X