ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯದೇವ ಮೇಲ್ಸೇತುವೆ ಡೆಮಾಲಿಷನ್: ಮೆಟ್ರೋ ನೀಡಿದ ಸೂಚನೆಗಳೇನು?

|
Google Oneindia Kannada News

ಬೆಂಗಳೂರು, ಜನವರಿ 17:ನಮ್ಮ ಮೆಟ್ರೋದ ಎರಡನೇ ಹಂತದ ಕಾಮಗಾರಿಯ ಭಾಗವಾಗಿ (ಎಲೆಕ್ಟ್ರಾನಿಕ್ ಸಿಟಿ ಕಾರಿಡಾರ್) ಜಯದೇವ ಮೇಲ್ಸೇತುವೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ (ಬಿಎಂಆರ್‌ಸಿಎಲ್) ಜನವರಿ 20 ರಿಂದ ಚಾಲನೆ ನೀಡಲಿದೆ.

ಈ ಕುರಿತು ಶುಕ್ರವಾರ ಸಾರ್ವಜನಿಕರಿಗೆ ಸೂಚನೆ ನೀಡಿರುವ ಬಿಎಂಆರ್‌ಸಿಎಲ್ (ಮೆಟ್ರೋ) ಕಾಮಗಾರಿಗೆ ಅನುಕೂಲ ಆಗಲಿ ಎಂದು ಸಂಚಾರ ಮಾರ್ಗಗಳ ಬದಲಿಸಿದೆ. 2017ರಲ್ಲಿಯೇ ಜಯದೇವ ಮೇಲ್ಸೇತುವೆ ತೆರವಿಗೆ ಅನುಮತಿ ದೊರೆತಿತ್ತು. ಈ ಕುರಿತು ನಮ್ಮ ಮೆಟ್ರೋ ನೀಡಿರುವ ಬಹುಮುಖ್ಯ ಸೂಚನೆಗಳು ಇಲ್ಲಿವೆ..

ಏರ್‌ಪೋರ್ಟ್‌ ಮೆಟ್ರೋ ಕಾಮಗಾರಿಗೆ ಚುರುಕುಏರ್‌ಪೋರ್ಟ್‌ ಮೆಟ್ರೋ ಕಾಮಗಾರಿಗೆ ಚುರುಕು

1) ಎಲ್ಲ ರೀತಿಯ ಸಂಚಾರಗಳಿಗೆ ಜಯದೇವ ಮೇಲ್ಸೇತುವೆಯನ್ನು ಮುಚ್ಚಲಾಗುತ್ತಿದೆ

2) ಮಾರೇನಹಳ್ಳಿಯಿಂದ ಬಿಟಿಎಂ 2 ನೇ ಹಂತದ ರಸ್ತೆಯಲ್ಲಿ, ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ಎಲ್ಲ ರೀತಿಯ ವಾಹನ ಸಂಚಾರಗಳನ್ನು ಎರಡೂ ಮಾರ್ಗದಲ್ಲಿ ಮುಚ್ಚಲಾಗುತ್ತದೆ.

Jayadeva Flyover Demolition: BMRCL Issued The New Traffic Rules

3) ಮಾರೇನಹಳ್ಳಿಯಿಂದ ಬಿಟಿಎಂ 2 ನೇ ಹಂತದ ರಸ್ತೆಯನ್ನು ಬೆಳಿಗ್ಗೆ 6 ರಿಂದ ರಾತ್ರಿ 10 ರವೆರೆಗೆ ಬಿಎಂಟಿಸಿ, ಅಂಬುಲೆನ್ಸ್ ಹಾಗೂ ದ್ವಿಚಕ್ರ ವಾಹನಗಳಿಗೆ ಮಾತ್ರ ತೆರೆಯಲಾಗುತ್ತದೆ.

4) ಈ ಮಾರ್ಗದಲ್ಲಿ ಈ ಮೊದಲು ಸಂಚರಿಸುತ್ತಿದ್ದ ಕಾರುಗಳು, ಆಟೋ ರಿಕ್ಷಾಗಳು ಬೆಳಿಗ್ಗೆ 6 ರಿಂದ ರಾತ್ರಿ 10 ರವೆರೆಗೆ ಔಟರ್ ರಿಂಗ್ ರಸ್ತೆ ಉದ್ದಕ್ಕೂ ಚಲಿಸದೇ, ಬಿಟಿಎಂ ಎರಡನೇ ಹಂತದ 16 ನೇ ಮುಖ್ಯ ರಸ್ತೆ ಹಾಗೂ 29 ನೇ ಮುಖ್ಯ ರಸ್ತೆ ಮೂಲಕ ಹೋಗಬಹುದು.

5) ಮಾರೇನಹಳ್ಳಿ ರಸ್ತೆಯ 18 ನೇ ಮುಖ್ಯ ರಸ್ತೆಯಿಂದ ಸಿಲ್ಕ್ ಬೋರ್ಡ್ ಜಂಕ್ಸನ್‌ವರೆಗಿನ ಪ್ರಮುಖ ಒಳ ರಸ್ತೆಗಳಲ್ಲಿ ಎಲ್ಲ ರೀತಿಯ ವಾಹನಗಳ ಪಾರ್ಕಿಂಗ್‌ನ್ನು ಎಲ್ಲ ಸಮಯದಲ್ಲೂ ನಿಷೇಧಿಸಲಾಗಿದೆ.

6) ಜಯದೇವ ಮೇಲ್ಸೇತುವೆಯ ಅಂಡರ್‌ ಪಾಸ್‌ನ ಎರಡೂ ಮಾರ್ಗಗಳ ವಾಹನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮೆಟ್ರೋ ಹೇಳಿದೆ.

English summary
The Bangalore Metro Rail Corporation (BMRCL) is set to begin operation on January 20 as part of the second phase of Namma Metro. BMRCL Issued The New Traffic Rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X