• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅರಮನೆಗೆ ಮತ್ತೊಂದು ಕೆಟ್ಟಸುದ್ದಿ: ಜಯಚಾಮರಾಜೇಂದ್ರ ಒಡೆಯರ್‌ ಪುತ್ರಿ ನಿಧನ

|
   ಮೈಸೂರು ಅರಮನೆಗೆ ಮತ್ತೊಂದು ಕೆಟ್ಟಸುದ್ದಿ: ಜಯಚಾಮರಾಜೇಂದ್ರ ಒಡೆಯರ್‌ ಪುತ್ರಿ ನಿಧನ | Oneindia Kannada

   ಮೈಸೂರು, ಅಕ್ಟೋಬರ್ 19: ಮೈಸೂರು ರಾಜಮನೆತನಕ್ಕೆ ಸೂತಕದ ಛಾಯೆ ಬಿಡುತ್ತಿಲ್ಲ. ಇಂದು ಬೆಳಿಗ್ಗೆಯಷ್ಟೆ ರಾಜಮಾತೆ ಪ್ರಮೋದಾ ದೇವಿ ಅವರ ತಾಯಿ ಅಸುನೀಗಿದ್ದರು. ಈಗ ಸಂಜೆ ವೇಳೆಗೆ ಜಯಚಾಮರಾಜೇಂದ್ರ ಒಡೆಯರ ಪುತ್ರಿ ವಿಶಾಲಾಕ್ಷಿ ದೇವಿ ವಿಧಿವಶರಾಗಿದ್ದಾರೆ.

   ಪ್ರಮೋದಾದೇವಿ ತಾಯಿ ವಿಧಿವಶ : ವಜ್ರಮುಷ್ಠಿ ಕಾಳಗ ರದ್ದು

   ಚಯರಾಜೇಂದ್ರ ಒಡೆಯರ್ ಅವರ ಕೊನೆಯ ಪುತ್ರಿ ಆಗಿದ್ದ ಇವರು ಈ ಹಿಂದಿನ ಮೈಸೂರಿನ ರಾಜ ನರಸಿಂಹರಾಜ ಒಡೆಯರ್ ಅವರ ಸಹೋದರಿ ಆಗಿದ್ದರು. ಬಹಳ ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ವಿಶಾಲಾಕ್ಷಿ ಅವರು ಬೆಂಗಳೂರಿನಲ್ಲಿ ಇಂದು ಸಂಜೆ ವೇಳೆಗೆ ವಿಧಿವಶರಾಗಿದ್ದಾರೆ.

   ಅಂಬಾರಿ ಹೊರುವ ಅರ್ಜುನನ ಸಂಪೂರ್ಣ ವಿವರ ಇಲ್ಲಿದೆ ಓದಿ...

   ವಿಶಾಲಾಕ್ಷಿ ಅವರ ಸಾವಿನೊಂದಿಗೆ ಮೈಸೂರಿನ ರಾಜಮನೆತನಕ್ಕೆ ಸಂಬಂಧಿಸಿದ ಇಬ್ಬರು ವ್ಯಕ್ತಿಗಳು ಒಂದೇ ದಿನ ಅಸುನೀಗಿದಂತಾಗಿದೆ. ಇಂದು ಬೆಳಿಗ್ಗೆಯಷ್ಟೆ ರಾಜಮಾತೆ ಪ್ರಮೋದಾ ದೇವಿ ಅವರ ತಾಯಿ ತೀರಿಕೊಂಡರು. ಈಗ ವಿಶಾಲಾಕ್ಷಿ ದೇವಿ ಅಸುನೀಗಿದ್ದಾರೆ.

   ವಿಶಾಲಾಕ್ಷಿದೇವಿಯವರು ಬೆಂಗಳೂರಿನ ನಿವಾಸಿಯಾಗಿದ್ದು ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಪರಿಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನ ಬೆಂಗಳೂರಿನ ವಿಕ್ರಮ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

   ವಿಶಾಲಾಕ್ಷಿದೇವಿ ಅವರಿಗೆ ಪ್ರಾಣಿಗಳನ್ನು ಕಂಡರೆ ಬಲು ಪ್ರೀತಿ. ಈ ಹಿಂದೆ ಅವರೇ ಚಿರತೆ ಮರಿಯೊಂದನ್ನು ಸಾಕಿದ್ದರು. ಬಳಿಕ ಅದು ದೊಡ್ಡದಾಗಿ ತನ್ನ ಭೇಟೆಯನ್ನು ತಾನೇ ಹುಡುಕಲು ಶಕ್ತವಾದ ಬಳಿಕ ಬಂಡೀಪುರ ಅರಣ್ಯಕ್ಕೆ ಬಿಟ್ಟಿದ್ದರು.

   ಆ ನಂತರದ ದಿನಗಳಲ್ಲಿ ಈ ಚಿರತೆ ವಿಶಲಾಕ್ಷಿ ದೇವಿ ಅವರನ್ನು ಎಷ್ಟು ಹಚ್ಚಿಕೊಂಡಿತ್ತು ಎಂಬುದು ಅವರು ಅರಣ್ಯಕ್ಕೆ ಬಂದು ನಿರ್ಧಿಷ್ಠ ಸ್ಥಳದಲ್ಲಿ ಅದನ್ನು ಕೂಗಿದಲ್ಲಿ , ಆ ಚಿರತೆ ಅಲ್ಲಿಗೆ ಬರುತ್ತಿತ್ತು. ಅಷ್ಟರಮಟ್ಟಿಗೆ ಇಬ್ಬರ ನಡುವೆ ಬಾಂಧವ್ಯ ಮೂಡಿತ್ತು. ಅವರು ಹೆಚ್ಚು ಪ್ರಾಣಿ ಪ್ರಿಯರಾಗಿದ್ದರು.

   English summary
   Mysuru royal family gets another bad news today. late king Jayachamarajendra Odeyar's last daughter Vishalakshi Devi passed away today in Bengaluru. She was suffering from illness.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X