ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಪಾನ್ ರಾಜ ಮತ್ತೆ ಪೊಲೀಸರ ಅತಿಥಿ, ವಿರುದ್ಧದ ಪ್ರಕರಣಗಳೆಷ್ಟು?

|
Google Oneindia Kannada News

ಬೆಂಗಳೂರು, ಮೇ 15: ಜೈಲಿನಿಂದ ಬಿಡುಗಡೆಯಾಗಿ 3 ತಿಂಗಳಿಗೆ 17 ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ತಲೆನೋವು ಉಂಟು ಮಾಡಿದ್ದ ಮನೆಗಳ್ಳ ಜಪಾನ್ ರಾಜ ಅಂತೂ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

ಜಪಾನ್ ರಾಜನ ಜೊತೆಗೆ ಆತನ ಸಹೋದರ ಗೋಪಿ(43) ಹಾಗೂ ಡೇವಿಡ್(34) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 35 ಲಕ್ಷ ರೂ ಮೌಲ್ಯದ ಒಂದು ಕೆಜಿ 119 ಗ್ರಾಂ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ಹಾಗೂ ಮನೆ ಬಾಗಿಲು, ಕಿಟಕಿ ಮೀಟಿ ತೆರೆಯಲು ಬಳಸುತ್ತಿದ್ದ ಕಬ್ಬಿಣದ ಸಲಾಕೆಯನ್ನು ವಶಪಡಿಸಿಕೊಳ್ಳಲಾಗಿದೆ.

ಮುಗ್ಧ ಮಹಿಳೆಯರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಬಾಬಾ ಸರೆಮುಗ್ಧ ಮಹಿಳೆಯರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಬಾಬಾ ಸರೆ

ಆಟೋ ಚಾಲಕನಾಗಿದ್ದ ಜಪಾನ್ ರಾಜ ಜೀವನ ನಿರ್ವಹಣೆಗೆ ಹಣ ಸಾಕಾಗುತ್ತಿಲ್ಲವೆಂದು ಮೂರು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದಾನೆ. ಈತನ ಮೇಲೆ ಒಟ್ಟು 61 ಪ್ರಕರಣಗಳು ದಾಖಲಾಗಿವೆ. ಎರಡನೇ ಬಾರಿ ಬಂಧಿತನಾಗಿರುವ ಈತನ ವಿರುದ್ಧ ಶೀಘ್ರವೇ ಹಲವು ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಲಿದೆ.

Japan Raja arrested by police for theft case

ಮೂವರು ವ್ಯವಸ್ಥಿತವಾಗಿ ಸಂಚು ರೂಪಿಸಿ ಮೂವರು ಆಟೋ, ದ್ವಿಚಕ್ರ ವಾಹನ ಸೇರಿದಮತೆ ಇನ್ನಿತರೆ ವಾಹನಗಳಲ್ಲಿ ತೆರಳಿ ಬೀಗ ಹಾಕಿರುವ ಮನೆಯನ್ನು ಟಾರ್ಗೆಟ್ ಮಾಡಿ ದೋಚುತ್ತಿದ್ದರು. ಮನೆಗೆ ಹೋಗಿ ಕಬ್ಬಿಣದ ಸಲಾಕೆಯಿಂದ ಮುರಿದು ಒಳಗೆ ಪ್ರವೇಶಿಸಿ ಚಿನ್ನಾಭರಣ ದೋಚುತ್ತಿದ್ದರು.

English summary
Japan Raja was released earlier, but he involved in 17 theft case. So police arrest him again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X