ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಭಾರತ ಮುನ್ನುಡಿ: ಜಪಾನ್

By Vanitha
|
Google Oneindia Kannada News

ಬೆಂಗಳೂರು ಅಕ್ಟೋಬರ್, 29 : ಮೇಕ್ ಇನ್ ಇಂಡಿಯಾ ಅಭಿಯಾನದಿಂದ ಭಾರತ ವಿಶ್ವದ ಅತ್ಯಂತ ದೊಡ್ಡ ಉತ್ಪಾದನಾ ಕೇಂದ್ರವಾಗಲಿದ್ದು ನಾಲ್ಕನೇ ಕೈಗಾರಿಕೆ ಮಹತ್ವ ಪಡೆದಿದೆ. ಸ್ಥಳೀಯ ಮತ್ತು ವಿದೇಶಿ ಉತ್ಪಾದಕರಿಗೆ ಸರ್ಕಾರ ಹಲವು ಉತ್ತೇಜನ ಕ್ರಮಗಳನ್ನು ಪ್ರಕಟಿಸಿದ್ದು ಆಲ್ಫಾಟಿಕೆಜಿ ಕಂಪನಿ ಲಿಮಿಟೆಡ್ ತಾಂತ್ರಿಕ ನೆರವು ನೀಡುವಲ್ಲಿ ಗಮನಾರ್ಹ ಪಾತ್ರ ವಹಿಸಲಿದೆ ಎಂದು ಆಲ್ಫಾಟಿಕೆಜಿ ಕಂಪನಿ ಲಿಮಿಟೆಡ್ ಸಿಇಒ ತೊಷಿಯೊ ತಕಗಿ ಹೇಳಿದ್ದಾರೆ.

ಇಂಡಸ್ಟ್ರಿ4.0 ಎಂಬ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಭಾರತಕ್ಕೆ ಪ್ರವೇಶ ಪಡೆಯಲಿರುವ ಜಪಾನ್ ಇಂಡಸ್ಟ್ರಿ 4 ಸಣ್ಣ ಹಾಗೂ ಮಧ್ಯಮ ಹಂತದ ಕೈಗಾರಿಕೆಗೆ ಹೊಸ ಆಯಾಮ ನೀಡಲಿದೆ. ಕೈಗಾರಿಕಾ ಉತ್ಪಾದನೆಯಲ್ಲಿ ವಾಸ್ತವ ಮತ್ತು ವರ್ಚುಯಲ್ ಜಗತ್ತನ್ನು ಸಂಯೋಜಿಸಿದ್ದು ಸ್ಮಾರ್ಟ್ ಫ್ಯಾಕ್ಟರಿ'ಯನ್ನು ರೂಪಿಸಿದೆ'ಎಂದು ಮಾಹಿತಿ ನೀಡಿದರು.[ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]

Japan company CEO Toshio Takagi inagurated international seminor at Bengaluru

ಅಲ್ಲದೇ ಇದರ ಅಡಿಯಲ್ಲಿ ಬರುವ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ಸ್ ಇಡೀ ಉತ್ಪಾದನಾ ಪ್ರಕ್ರಿಯೆಯನ್ನು ಒಗ್ಗೂಡಿಸಲಿದೆ. ಇದು ಡಿಜಿಟಲ್ ಶಕ್ತಿ ಉತ್ತೇಜಕವಾಗಿ ಕೆಲಸ ಮಾಡುತ್ತದೆ. ಉತ್ಪಾದನಾ ವಲಯ ಮಾತ್ರವಲ್ಲದೆ ಆಹಾರ, ನೀರು, ಗೃಹ, ಕೃಷಿ, ಸಾರಿಗೆ, ವಿದ್ಯುಚ್ಛಕ್ತಿ, ಆರೋಗ್ಯಸೇವೆಯನ್ನು ಕ್ರಾಂತಿಕಾರಕವಾಗಿ ಬದಲಾಯಿಸಲಿದೆ' ಎಂದು ತಿಳಿಸಿದರು.

ಜಪಾನ್ ಇಂಡಸ್ಟ್ರಿ 4.0 ಜೂನ್ 2015ರಲ್ಲಿ ಪ್ರಾರಂಭಿಸಲಾಯಿತು. ಇದು ನಾಲ್ಕನೆ ಕೈಗಾರಿಕಾ ಕ್ರಾಂತಿಯನ್ನು ಜಾರಿಗೆ ತರಲಿದೆ. ಜಪಾನ್ ಮತ್ತು ಏಷ್ಯಾ ರಾಷ್ಟ್ರಗಳ ಸಣ್ಣ ಹಾಗೂ ಮಧ್ಯಮ ಹಂತದ ಕೈಗಾರಿಕಾ ಉತ್ಪಾದನೆಯಲ್ಲಿ ಅಪಾರ ಅವಕಾಶಗಳಿವೆ. ಭಾರತದ ಮುಂಚೂಣಿಯ ಐಟಿ ಸಂಸ್ಥೆಗಳೊಂದಿಗೆ ಸಹಯೋಗ ಸಾಧಿಸುವ ಉದ್ದೇಶ ಹೊಂದಿದೆ ಎಂದು ಆಲ್ಫಾ ಟಿಕೆಜಿ ಇಂಟಿಗ್ರೇಟೆಡ್ ಸಲ್ಯೂಷನ್ಸ್ ಪ್ರೈ.ಲಿ.ಯ ಅಧ್ಯಕ್ಷ ಮತ್ತು ಸಿಇಒ ಡಾ.ಥನಪಂಡಿ ಹೇಳಿದರು. ಜಪಾನ್ ಹಾಗೂ ಭಾರತ ದೇಶದ ವಿವಿಧ ಗಣ್ಯರು ಉಪಸ್ಥಿತರಿದ್ದರು.

English summary
Japan company CEO Toshio Takagi inagurated Industry 4.0 international seminor at Bengaluru, on October 29th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X