2020ರಲ್ಲಿ ಬೆಂಗಳೂರಿನಿಂದ ಟೋಕಿಯೋಗೆ ನೇರ ವಿಮಾನ
ಬೆಂಗಳೂರು, ಜನವರಿ 23: 2020ರ ವೇಳೆಗೆ ಟೋಕಿಯೋ ಹಾಗೂ ಬೆಂಗಳೂರಿನ ನಡುವೆ ನೇರ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ ಎಂದು ಜಪಾನ್ ಏರ್ಲೈನ್ಸ್ ಲಿಮಿಟೆಡ್ (ಜೆಎಎಲ್) ಬುಧವಾರದಂದು ಪ್ರಕಟಿಸಿದೆ.
2020ರ ಬೇಸಿಗೆ ಅವಧಿಯಲ್ಲಿ ಬೆಂಗಳೂರು- ಟೋಕಿಯೋ ನಡುವೆ ತಡೆರಹಿತ ನೇರ ವಿಮಾನಗಳು ಜೆಎಎಲ್ ಸಂಸ್ಥೆಯಿಂದ ಹಾರಾಡಲಿವೆ. ಸದ್ಯ ಟೋಕಿಯೋ- ನವದೆಹಲಿ- ಬೆಂಗಳೂರು ಮೂಲಕ ವಾಯುಯಾನ ಸೇವೆ ಲಭ್ಯವಿದೆ. ಬೋಯಿಂಗ್ 787-8 ಸುದೀರ್ಘ ಒಂಬ್ಬತ್ತು ಗಂಟೆಗಳ ಪ್ರಯಾಣದ ಹಾರಾಟ ನಡೆಸುತ್ತಿದೆ ಎಂದು ಜೆಎಎಲ್ ತಿಳಿಸಿದೆ.
ಪವರ್ ಫುಲ್ ಪಾಸ್ ಪೋರ್ಟ್: ಜಪಾನ್ ನಂ.1, ಭಾರತ 71ನೇ ಸ್ಥಾನ
ಬೆಂಗಳೂರು ಐಟಿ/ಬಿಟಿ, ಟೆಲಿಕಾಂ ಹಬ್ ಎಂದು ಗುರುತಿಸಿಕೊಂಡಿದೆ. ಟೋಕಿಯೋದಿಂದ ನೇರ ವಿಮಾನ ಸಂಪರ್ಕ ಕಲ್ಪಿಸಿದರೆ ಎರಡೂ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಗೆ ಸಹಾಯಕವಾಗಲಿದೆ. ಭಾರತ- ಜಪಾನ್ನ ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕವಾಗಲಿದೆ. ಉದ್ಯೋಗ ಸೃಷ್ಟಿ ಉದ್ದೇಶದಿಂದಲೂ ಈ ಸೇವೆ ಉಪಯೋಗವಾಗಲಿದೆ ಎಂದು ಬೆಂಗಳೂರಿನಲ್ಲಿರುವ ಜಪಾನ್ನಿನ ಕೌನ್ಸಲ್ ಜನರಲ್ ಟಕಾಯುಕಿ ಕಿತಾಗವಾ ಅವರು ಹೇಳಿದ್ದಾರೆ.