ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಮೇಶ್ ಗೌಡ ಬರೆದ ಡೆತ್ ನೋಟ್ ನಲ್ಲಿ ಏನಿದೆ?

ಮಾಜಿ ಸಚಿವ ಜನಾರ್ದನ ರೆಡ್ಡಿಯ ಮಗಳ ಮದುವೆಗೆ ನೂರು ಕೋಟಿ ರುಪಾಯಿ ಹಣವನ್ನು ಬದಲಿಸಿಕೊಟ್ಟ ಭೀಮಾ ನಾಯ್ಕ್ ಅವರ ವಾಹನ ಚಾಲಕ ರಮೇಶ್ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯಾ ಪತ್ರದಲ್ಲಿ ಗಾಲಿ ರೆಡ್ಡಿ ಭ್ರಷ್ಟಾಚಾರ ಬಹಿರಂಗಗೊಂಡಿದೆ.

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 07: ಮಾಜಿ ಸಚಿವ ಜನಾರ್ದನ ರೆಡ್ಡಿಯ ಮಗಳ ಮದುವೆಗೆ ನೂರು ಕೋಟಿ ರುಪಾಯಿ ಹಣವನ್ನು ಬದಲಿಸಿಕೊಟ್ಟ ಭೀಮಾ ನಾಯ್ಕ್ ಅವರ ವಾಹನ ಚಾಲಕ ರಮೇಶ್ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದ್ದೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರಮೇಶ್ ಬರೆದಿರುವ ಆತ್ಮಹತ್ಯಾ ಪತ್ರದಲ್ಲಿ ಗಾಲಿ ರೆಡ್ಡಿ ಅವರ ಭ್ರಷ್ಟಾಚಾರ ಬಹಿರಂಗಗೊಂಡಿದೆ.

ನವೆಂಬರ್ 8ರಂದು 500 ಹಾಗೂ 1000 ರೂಪಾಯಿ ನೋಟುಗಳ ಬಳಕೆಯನ್ನು ನಿಷೇಧಿಸಿ ಪ್ರಧಾನಿ ಮೋದಿ ಅವರು ಅದೇಶ ಹೊರಡಿಸಿದ್ದು ಎಲ್ಲರಿಗೂ ತಿಳಿದಿರಬಹುದು. [ಜನಾ ರೆಡ್ಡಿಗೆ 100 ಕೋಟಿ ಅರೇಂಜ್ ಮಾಡಿದ್ದು ಭೀಮಾ ನಾಯ್ಕ್]

ಇದೇ ಸಂದರ್ಭದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಣಿ ಅವರ ಮದುವೆಯನ್ನು ನೂರಾರು ಕೋಟಿ ಖರ್ಚು ಮಾಡಿ ವಿಜೃಂಭಣೆಯಿಂದ ನೆರವೇರಿಸಿದರು. ಸರಿ ಸುಮಾರು 100 ಕೋಟಿ ರು ಗೂ ಅಧಿಕ ಮೊತ್ತದ ಹಳೆ ನೋಟುಗಳನ್ನು ಹೊಸ ನೋಟುಗಳಾಗಿ ಪರಿವರ್ತಿಸಿದ ಕೆಎಎಸ್ ಅಧಿಕಾರಿ ಭೀಮಾ ನಾಯ್ಕ್ ಅವರು ಕಮಿಷನ್ ಪಡೆದುಕೊಂಡಿದ್ದರು.[ಗಾಲಿ ರೆಡ್ಡಿಗೆ ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?]

 ರೆಡ್ಡಿ ಸೋದರರು ಹಾಗೂ ಭೀಮಾ ನಾಯ್ಕ್ ರಿಂದ ಬೆದರಿಕೆ

ರೆಡ್ಡಿ ಸೋದರರು ಹಾಗೂ ಭೀಮಾ ನಾಯ್ಕ್ ರಿಂದ ಬೆದರಿಕೆ

ನೋಟು ಬ್ಯಾಬ್ ಬಳಿಕ ಹಣ ವಿನಿಯಮ ಮಾಡಿಕೊಂಡು ಕಮಿಷನ್ ಪಡೆದುಕೊಂಡ ಬಗ್ಗೆ ಡ್ರೈವರ್ ರಮೇಶ್ ಅವರಿಗೆ ಎಲ್ಲವೂ ತಿಳಿದಿತ್ತು. ಈ ಬಗ್ಗೆ ಎಲ್ಲೂ ಕೂಡಾ ಬಾಯಿಬಿಡದಂತೆ ಗಾಲಿ ರೆಡ್ಡಿ ಸೋದರರು ಹಾಗೂ ಭೀಮಾ ನಾಯ್ಕ್ ರಿಂದ ಬೆದರಿಕೆ ಕರೆ ಹಾಕಿದ್ದರು. ಇದರಿಂದ ಹೆದರಿದ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಮಾರು 12 ಪುಟಗಳ ಸುದೀರ್ಘ ಪತ್ರವನ್ನು ಬರೆದಿದ್ದಾರೆ.

ರಮೇಶ್ ಬರೆದ ಪತ್ರದಲ್ಲಿ ಏನಿದೆ?

ರಮೇಶ್ ಬರೆದ ಪತ್ರದಲ್ಲಿ ಏನಿದೆ?

ಡಿಸೆಂಬರ್ 6ರಂದು ಬರೆದಿರುವ ಪತ್ರದಲ್ಲಿ : ನಾನು ನನ್ನ ಕೈಯಾರೇ ಬರೆದಿರುವ ಡೆತ್ ನೋಟ್ ರಮೇಶ್ ಕೆಸಿ (ವಿ.ಭೂ. ಅ ಕಚೇರಿ, ಬೆಂಗಳೂರು) ಎಂದು ಆರಂಭವಾಗುತ್ತದೆ.ಪತ್ರದಲ್ಲಿ ಗಾಲಿ ರೆಡ್ಡಿ, ಬಿ ಶ್ರೀರಾಮುಲು ಅವರನ್ನು ಭೇಟಿ ಮಾಡಿದ್ದರ ಬಗ್ಗೆ, ಭೀಮಾನಾಯ್ಡ್ ಅವರ ಕಮಿಷನ್ ವ್ಯವಹಾರ, ಸಾವಿನ ನಂತರ ತನ್ನ ಅಂತ್ಯ ಸಂಸ್ಕಾರ ಯಾರು ಮಾಡಬೇಕು ಎಂಬುದನ್ನು ವಿವರಿಸಿದ್ದಾರೆ.

ತಾಜ್ ಹೋಟೆಲ್ ನಲ್ಲಿ ನಡೆದ ಡೀಲ್

ತಾಜ್ ಹೋಟೆಲ್ ನಲ್ಲಿ ನಡೆದ ಡೀಲ್

ತಾಜ್ ಹೋಟೆಲ್ ನಲ್ಲಿ ಗಾಲಿ ರೆಡ್ಡಿ ಅವರ ಬಳಿ ಇದ್ದ 1000, 500 ರು ನೋಟುಗಳಿಗೆ ಬದಲಾಗಿ 50,100,2000 ರೂ ನೋಟುಗಳನ್ನು ಭೀಮಾನಾಯ್ಕ್ ನೀಡಿದರು. ಮೊದಲಿಗೆ 25 ಕೋಟಿ ರು ಅದಲು ಬದಲಾಯಿತು ನಂತರ ಮಿಕ್ಕಿದ್ದು ಅದೇ ರೀತಿ ಬದಲಾಯಿಸಿಕೊಂಡರು. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ರೌಡಿಗಳನ್ನು ಕರೆಸಿ, ನಿನ್ನನ್ನು ಕೊಲೆ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ರಮೇಶ್ ಬರೆದುಕೊಂಡಿದ್ದಾರೆ.

ಜೀವನದ ಕೊನೆ ಆಸೆ ವಿವರಣೆ

ಜೀವನದ ಕೊನೆ ಆಸೆ ವಿವರಣೆ

ನನ್ನ ಜೀವನದ ಕೊನೆ ಆಸೆ, ನನ್ನ ಅಕ್ಕನ ಮಗ ಮನೋಜ್ ಗೌಡನೇ ನನ್ನ ದೇಹಕ್ಕೆ ಅಗ್ನಿಸ್ಪರ್ಶ ಮಾಡ್ಬೇಕು. ಇದು ನನ್ನ ಕೊನೆ ಆಸೆ ಹಾಗೂ ನನ್ನ ಜೊತೆ ಸಹಕರಿಸಿದ ನನ್ನ ಸ್ನೇಹಿತರಿಗೆ ನಾನು ಅಭಾರಿಯಾಗಿರುತ್ತೇನೆ ಎಂದು ಬರೆದಿದ್ದು ನಂತರ ನನ್ನ ಸಾವಿಗೆ ಕಾರಣಕರ್ತರು ಎಂದು ಭೀಮಾ ನಾಯ್ಕ KAS ಇವರು ನನ್ನ ಸಾವಿಗೆ ನೇರ ಕಾರಣ ಹಾಗೂ ನನಗೆ ಬರಬೇಕಾದ 3 ತಿಂಗಳ ಸಂಬಳವನ್ನು ತಡೆ ಹಿಡಿದಿದ್ದಾರೆ.

ಭೀಮಾ ನಾಯ್ಕ್ ತಮ್ಮಂದಿರ ಹೆಸರಿನಲ್ಲಿ ಆಸ್ತಿ

ಭೀಮಾ ನಾಯ್ಕ್ ತಮ್ಮಂದಿರ ಹೆಸರಿನಲ್ಲಿ ಆಸ್ತಿ

* ಭೀಮಾನಾಯ್ಕ್ ಅವರು ತಮ್ಮಂದಿರ ಹೆಸರಿನಲ್ಲಿ ಆಸ್ತಿ ಮಾಡಿದ್ದರು. ಕೃಷ್ಣನಾಯ್ಕ್ ಹೆಸರಿನಲ್ಲಿ 2 ದುಬಾರಿ ಕಾರು.
* ಇನ್ನೊಬ್ಬ ತಮ್ಮ (ಅರ್ಜುನ್ ) ಹೆಸರಿನಲ್ಲಿ 1ಟ್ರಾವೆರಾ ಕಾರು
* ಕೇಸುಗಳನ್ನು ಮುಚ್ಚಿ ಹಾಕಲು ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ ನಾಗರಾಜುಗೆ 25 ಲಕ್ಷ ರು ಲಂಚ
* ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಹೆಸರಿನಲ್ಲಿ 1 ಕೋಟಿ ರುಗೂ ಅಧಿಕ ವ್ಯವಹಾರ, 50 ಲಕ್ಷ ಬೆಲೆಯ ವಜ್ರದ ಉಂಗುರ(142565 ಐಡಿ).
* ಸುದರ್ಶನ ಸಿಲ್ಕ್ಸ್ ನಲ್ಲಿ 50 ಲಕ್ಷ ರು ಬಟ್ಟೆ ಖರೀದಿ

ರೆಡ್ಡಿ ಹಾಗೂ ಶ್ರೀರಾಮುಲು ಬಗ್ಗೆ

ರೆಡ್ಡಿ ಹಾಗೂ ಶ್ರೀರಾಮುಲು ಬಗ್ಗೆ

28/10/2016ರಂದು ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಅವರನ್ನು ಪಾರಿಜಾತ ಗೆಸ್ಟ್ ಹೌಸ್ ನಲ್ಲಿ ಭೇಟಿ ಮಾಡಿ, 2018ಕ್ಕೆ ವಿಧಾನಸೌಧ ಎಲೆಕ್ಷನ್ ಗೆ ನಿಲ್ಲಲು ಮಾತುಕತೆ ಹಾಗೂ 25 ಕೋಟಿ ರು ಡೀಲ್ ನಡೆಸಿರುತ್ತಾರೆ.

ಬೇನಾಮಿ ಆಸ್ತಿ 100 ಕೋಟಿ ರು ಮೀರುತ್ತದೆ

ಬೇನಾಮಿ ಆಸ್ತಿ 100 ಕೋಟಿ ರು ಮೀರುತ್ತದೆ

* ಬೆಳಗಾವಿಯ ಸದಾಶಿವ ನಗರದಲ್ಲಿ ಬಂಗಲೆ
* ಹೊಸಪೇಟೆಯಲ್ಲಿ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಲೋನ್ ಮಾಡಿ 20 ಗುಂಟೆ ಖಾಲಿ ನಿವೇಶನ
* ಹಗರಿ ಬೊಮ್ಮನಹಳ್ಳಿಯಲ್ಲಿ 30 ಎಕರೆ ಹೊಲ
* ಮರಿಯಮ್ಮನಹಳ್ಳಿಯಲ್ಲಿ ಖರೀದಿಸಿರುವ 10 ಎಕರೆ
* ಯಲಹಂಕ ಬಳಿ ಸ್ವಂತ ಮನೆ, ಹೆಂಡತಿ ಹೆಸರಿನಲ್ಲಿದೆ
* ತಮ್ಮ ಕೃಷ್ಣಕುಮಾರ್ ಹೆಸರಿನಲ್ಲಿ ಪೆಟ್ರೋಲ್ ಬಂಕ್

English summary
Ramesh Gowda who worked as driver for a KAS officer was found dead in Maddur. In a suicide note, the man has claimed to know how Janardhana Reddy converted black money for his daughter's lavish wedding. He further alleges that he was threatened by Reddy and the KAS officer he worked for.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X