ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಜನಪದ ವಿವಿ' ಕನ್ನಡ-ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿ: ಗೋವಿಂದ ಕಾರಜೋಳ

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 19: ಹಾವೇರಿ ಜಿಲ್ಲೆಯಲ್ಲಿರುವ ಜನಪದ ವಿಶ್ವವಿದ್ಯಾಲಯವನ್ನು ಉನ್ನತ ಶಿಕ್ಷಣ ಇಲಾಖೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಬೇಕು. ಆಗ ಮಾತ್ರವೇ ಅಲ್ಲಿ ಚಟುವಟಿಕೆಗಳು ನಡೆಯುತ್ತವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ವಿಧಾನ ಪರಿಷತ್‌ನಲ್ಲಿ ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಅವರು, ಜಾನಪದ ವಿಶ್ವವಿದ್ಯಾಲಯ ನಮ್ಮ ಕಾಲದಲ್ಲಿಯೇ ಪ್ರಾರಂಭ ಆಗಿತ್ತು. ಕರ್ನಾಟಕದ ಮಧ್ಯಭಾಗದಲ್ಲಿ ಇರಬೇಕು ಎಂದು ಹಾವೇರಿಯಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಯಿತು.

ವಿಶ್ವವಿದ್ಯಾಲಯ ಎಂಬುದಿದ್ದರೆ ಅದು ಉನ್ನತ ಶಿಕ್ಷಣ ಇಲಾಖೆಯಲ್ಲಿಯೇ ಬರಲಿ ಕೆಲವರ ತಲೆಯಲ್ಲಿ ಇತ್ತು. ವಿಶ್ವವಿದ್ಯಾಲಯ ಸಹ ನಮ್ಮಿಂದಲೇ ಪ್ರಾರಂಭವೂ ಆಯಿತು. ಆದರೆ, ಆದೇಶ ಕೊಡುವಾಗ ಉನ್ನತ ಶಿಕ್ಷಣ ಇಲಾಖೆಯಲ್ಲಿರಲಿ ಅಂತಾ ಹೇಳಿ ಅಲ್ಲಿಗೆ ಸೇರಿಸಿಬಿಟ್ಟರು. ಆದ್ದರಿಂದ ಜಾನಪದ ವಿವಿಯ ಚಟುವಟಿಕೆಗಳು ಕುಂಠಿತಗೊಂಡಿವೆ ಎಂಬ ವಿಚಾರವನ್ನು ಅವರು ಕಲಾಪದಲ್ಲಿ ಪ್ರಸ್ತಾಪಿಸಿದರು.

Janapada University will be Transfer to Kannada-Culture Department said Govind Karjol

2 ಇಲಾಖೆ ಸಚಿವರು ಚರ್ಚಿಸಿ

ಈ ಜನಪದ ಕಲಾವಿದರು, ಕವಿಗಳು, ಸಾಹಿತಿಗಳು ಎಲ್ಲರೂ ಕೆಳ ವರ್ಗದಿಂದ ಬಂದಿರುವವರು. ಕೆಳ ವರ್ಗದವರ ಬದುಕೇ ಜನಪದ ಕಲೆ ಆಗಿದೆ. ಆದ್ದರಿಂದ ಪಕ್ಕದಲ್ಲೇ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಇದ್ದಾರೆ. ನನ್ನ ಇನ್ನೊಂದು ಬದಿಯಲ್ಲಿ ಉನ್ನತ ಶಿಕ್ಷಣ ಸಚಿವರೂ ಇದ್ದಾರೆ. ಇಬ್ಬರು ಕುಳಿತು ಮಾತನಾಡಿ ಜಾನಪದ ವಿವಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿ ಎಂದು ಗೋವಿಂದ್ ಕಾರಜೋಳ ಅವರು ಮನವಿ ಮಾಡಿದರು.

ಹಾಗೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿದರೆ ಮಾತ್ರ ವಿಶ್ವವಿದ್ಯಾಲಯದಲ್ಲಿ ಚಟುವಟಿಕೆ ನಡೆಯುತ್ತವೆ. ಸಾಕಷ್ಟು ಜಾಗ, ಹಣ ಕೊಡಲಾಗಿದೆ. ಸುವ್ಯವಸ್ಥಿತ ಕಟ್ಟಡ ಕಟ್ಟಲಾಗಿದೆ. ಇದೆಲ್ಲವನ್ನು ಗಮನಿಸಿ ವಿಶ್ವವಿದ್ಯಾಲಯಕ್ಕೆ ನೇಮಕಾತಿ ಮಾಡುವಾಗಲೂ ಕೂಡ ಅರ್ಹತೆ ಇರುವ ಜನಪದ ಕಲಾವಿದರನ್ನೇ ನೇಮಕ ಮಾಡಿ. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ ನಾನು ಕೂಡ ವಿಶ್ವವಿದ್ಯಾಲಯಕ್ಕೆ ಹೋಗಿ ಬಂದಿದ್ದೇನೆ. ಆದ್ದರಿಂದ ಸಚಿವರು ಇದನ್ನು ಪರಿಶೀಲಿಸಬೇಕು ಎಂದು ಅವರು ಕೋರಿದರು.

English summary
'Janapada University' will be Transfer to Kannada-Culture Department form Higher Education Department, request by Water resource minister Govind Karjol.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X