ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲ ಪ್ರದರ್ಶನದಲ್ಲೇ ಮೆಚ್ಚುಗೆ ಗಳಿಸಿದ ನಾಟ್ಯ ಮಯೂರಿ ಜಾಜಿ

By Manjunatha
|
Google Oneindia Kannada News

ಬೆಂಗಳೂರು, 26 ಮಾರ್ಚ್: ಕಲಾಕ್ಷಿತಿ ಸಂಸ್ಥಾಪಕರಾಗಿರುವ ನೃತ್ಯಗುರು ಡಾ. ಎಂ.ಆರ್.ಕೃಷ್ಣಮೂರ್ತಿ ಅವರ ಶಿಷ್ಯೆ, ಭರತನಾಟ್ಯ ಕಲಾವಿದೆ ಜಾಜಿ ಆರ್.ರಾಜು ಅವರು ರಂಗಪ್ರವೇಶದ ಪ್ರಸ್ತುತಿಯನ್ನು ಆರಂಭಿಸಿದರು. ತಮ್ಮ ಮೊದಲ ಪ್ರದರ್ಣದಲ್ಲೇ ನಾಟ್ಯಪ್ರಿಯರ ಮೆಚ್ಚುಗೆ ಗಳಿಸಿದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬಿ.ಪಿ.ವಾಡಿಯಾ ರಸ್ತೆಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಭಾನುವಾರ (ಮಾರ್ಚ್ 26) ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜಾಜಿ ಅವರು ತಮ್ಮ ಮೊದಲ ಪ್ರದರ್ಶನದಲ್ಲಿಯೇ ಅತ್ಯಂತ ಶಾಸ್ತ್ರಬದ್ಧವಾಗಿ ಭರತನಾಟ್ಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

Jaji got attention of dance lovers from her Baratanatyam dance

ಸುನೀತಾ ಮತ್ತು ರಾಮಮೋಹನ್‌ರಾಜು ಅವರ ಮಗಳಾಗಿರುವ ಜಾಜಿ ಅವರು ಕಳೆದ ಹಲವು ವರ್ಷಗಳಿಂದ ಭರತನಾಟ್ಯದ ವಿವಿಧ ಮಜಲುಗಳನ್ನು ಕಲಿಯುತ್ತಾ ಬಂದಿದ್ದು, ಭಾನುವಾರದ ಸಮಾರಂಭದ ಮೂಲಕ ಭರತನಾಟ್ಯ ಪ್ರದರ್ಶನ ನೀಡುವುದರೊಂದಿಗೆ ಮತ್ತೊಂದು ಉದಯೋನ್ಮುಖ ಭರತನಾಟ್ಯ ಪ್ರತಿಭೆ ನಾಟ್ಯ ಸಾಂಸ್ಕೃತಿಕ ವಲಯಕ್ಕೆ ಪರಿಚಯವಾದಂತಾಯಿತು.

ತನ್ನ ಪ್ರಬುದ್ಧವಾದ ಮತ್ತು ಸಂಪೂರ್ಣ ಹಿಡಿತದ ಭಾರತನಾಟ್ಯ ಹೆಜ್ಜೆಗಳ ಮೂಲಕ ನೆರೆದಿದ್ದ ಕಲಾಸಕ್ತರಿಂದ ಪ್ರಶಂಸೆ ಪಡೆದರು.

English summary
Jaji grabs attention of dance lovers from her first Baratanatyam show. She is student of Barathnatya teacher MR Krishna Murty. Her dance performance organized in IIWC of BP wadia road on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X