ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ.23ರಿಂದ ಲಾಲ್‌ಬಾಗ್‌ನಲ್ಲಿ ಮಾವು ಹಲಸು ಮೇಳ

By Ashwath
|
Google Oneindia Kannada News

ಬೆಂಗಳೂರು, ಮೇ 21: ಬೆಂಗಳೂರಿನ ಮಾವು ಹಲಸು ಪ್ರೇಮಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌. ಕಳೆದ ತಿಂಗಳಿನಿಂದ ನಗರದ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದ ಮಾವು ಮತ್ತು ಹಲಸು ಮೇಳ ಈಗ ಲಾಲ್‌‌‌ಬಾಗ್‌ನಲ್ಲಿ ಆರಂಭವಾಗಲಿದೆ

ಮಾವು ಮತ್ತು ಹಲಸು ಬೆಳೆಗಾರರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಹಣ್ಣನ್ನು ದೊರಕಿಸಿಕೊಡುವ ಉದ್ದೇಶದಿಂದ ಮೇ. 23ರಿಂದ ಜೂನ್‌ 15ರವರೆಗೆ ಈ ಮೇಳ ನಡೆಯಲಿದೆ.

ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹಾಪ್‌ಕಾಮ್ಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ .

Jackfruit and Mango Mela

ರಾಸಾಯನಿಕ ಬಳಸದೇ ಸಹಜವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾತ್ರ ಮೇಳದಲ್ಲಿ ಮಾರಾಟ ಮಾಡಲಾಗುವುದು. ಒಂದು ವೇಳೆ ರೈತರು ಮೋಸ ಮಾಡಿ ರಾಸಾಯನಿಕ ಬಳಸಿ ಮಾವನ್ನು ಹಣ್ಣು ಮಾಡಿದ್ದರೆ, ಅಂತಹ ಹಣ್ಣುಗಳ ಮಾರಾಟವನ್ನು ಸಂಪೂರ್ಣ‌ ನಿಷೇಧಿಸಿದಲಾಗಿದೆ. ಮಾರಾಟಗಾರರಿಗೆ ಈಗಾಗಲೇ ಈ ಸೂಚನೆ ನೀಡಿದ್ದು ಸೂಚನೆ ಉಲ್ಲಂಘಿಸಿದವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.

ಮೇಳದಲ್ಲಿ 90 ಸುಸಜ್ಜಿತ ಮಾರಾಟ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದ್ದು, 75 ಮಳಿಗೆ ಮಾವಿನ ಹಣ್ಣಿಗೆ ಮೀಸಲಾದರೆ, 15 ಮಳಿಗೆಯಲ್ಲಿ ಹಲಸಿನ ಹಣ್ಣಿನ ಮಾರಾಟ ಮಾಡಲಾಗುತ್ತದೆ. ಬೆಳಗ್ಗೆ 8 ರಿಂದ ಸಂಜೆ 7ರವರೆಗೆ ಮಳಿಗೆಗಳು ತೆರೆದಿದ್ದು, ಗ್ರಾಹಕರು ಯೋಗ್ಯವಾದ ದರದಲ್ಲಿ ತಾಜಾ ಹಣ್ಣುಗಳನ್ನು ಖರೀದಿಸಬಹುದಾಗಿದೆ.

ಮೇಳದಲ್ಲಿ ವಿವಿಧ ಮಾವಿನ ತಳಿಗಳ ಸಿಂಧೂರ, ಮಲ್ಗೊಬಾ, ಬಾದಾಮಿ, ನೀಲಂ, ಮಲ್ಲಿಕಾ ಹಾಗೂ ಹಲಸಿನಲ್ಲಿ ಸ್ವರ್ಣ, ಲಾಲ್‌ಬಾಗ್ ಮಧುರ ತಳಿಯ ಹಣ್ಣುಗಳನ್ನು ಮಾರಾಟ ನಡೆಯಲಿದೆ. ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶ್ಯಾಮನೂರು ಶಿವಶಂಕರಪ್ಪ ಶುಕ್ರವಾರ ಮೇಳಕ್ಕೆ ಚಾಲನೆ ನೀಡಲಿದ್ದಾರೆ.

English summary
Mango and Jackfruit Mela is back in Bangalore. Horticulture department as organised Mango and Jackfruit mela which starts from May.23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X