ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಬ್ಬಾರ್ ಅಪಘಾತ: ಓನರ್ ಉಮಾ ಇನ್ನೂ ಬಂಧನವಿಲ್ಲ

By Srinath
|
Google Oneindia Kannada News

Jabbar Travels volvo bus fire accident- 4 arrested- owner Uma Reddy yet to be questioned
ಬೆಂಗಳೂರು, ಜ.10: ಬೆಂಗಳೂರಿನ ಜಬ್ಬಾರ್ ಟ್ರಾವೆಲ್ಸ್ ವೋಲ್ವೊ ಬಸ್ ಸುಟ್ಟುಕರಕಲಾಗಿ, 46 ಮಂದಿ ಸಾವನ್ನಪ್ಪಿ 3 ತಿಂಗಳಾಗ್ತಬಂತು. ಆದರೆ ಘಟನೆಯ ಸಂಬಂಧ ಪೊಲೀಸರು ಯಾರನ್ನೂ ಬಂಧಿಸುವ ಸಾಹಸ ಮಾಡಿರಲಿಲ್ಲ. ಆದರೆ ಇದೀಗ ಎಚ್ಚೆತ್ತಿರುವ ಪೊಲೀಸರು ನಿನ್ನೆ ಟ್ರಾವೆಲ್ಸ್ ಸಂಸ್ಥೆಯ ನಾಲ್ವರು ಸಿಬ್ಬಂದಿಯನ್ನು ಬಂಧಿಸುವ ಶಾಸ್ತ್ರ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಬ್ಬಾರ್‌ ಟ್ರಾವೆಲ್ಸ್‌ ಸಂಸ್ಥೆಯ ಏಜಂಟರಾದ ಶಕೀಲ್‌, ಅಕ್ರಂ, ಅಮಾನುಲ್ಲಾ ಷರೀಫ್ ಮತ್ತು ರಫೀಕ್ ಅವರುಗಳನ್ನು ಆಂಧ್ರ ಸಿಐಡಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆಂಧ್ರದ ಮೆಹಬೂಬ್‌ ನಗರದ ಕೊತ್ತಕೋಟ ಮಂಡಲ್ ವ್ಯಾಪ್ತಿಯ ಪಾಲೆಂ ಗ್ರಾಮದ ಸಮೀಪ ಅ. 30ರಂದು ಸದರಿ ವೋಲ್ವೊ ಬಸ್ ದುರಂತಕ್ಕೀಡಾಗಿತ್ತು. ಆದರೆ ಪ್ರಕರಣದಲ್ಲಿ, ಸಂಸ್ಥೆಯ ಜಮೀಲ್ ಜಬ್ಬಾರ್ ಎಂಬ ವ್ಯಕ್ತಿ ಪೊಲೀಸರಿಗೆ ಪ್ರಮುಖವಾಗಿ ಬೇಕಾಗಿದ್ದು ಆತ ತಲೆಮರೆಸಿಕೊಂಡಿದ್ದಾನೆ.

ಓನರ್ ಉಮಾ ಇನ್ನೂ ಬಂಧನವಿಲ್ಲ:
ಇನ್ನು ಜಬ್ಬಾರ್‌ ಟ್ರಾವೆಲ್ಸ್‌ ಸಂಸ್ಥೆಯ ಮಾಲೀಕ ಜೆಸಿ ಉಮಾ ರೆಡ್ಡಿಯನ್ನು ಆಂಧ್ರ ಪೊಲೀಸರು ಬಂಧಿಸುವ ಅಥವಾ ವಿಚಾರಣೆ ನಡೆಸುವ ಸಾಹಸಕ್ಕೆ ಕೈಹಾಕಿಲ್ಲ. ಉಮಾ ರೆಡ್ಡಿ ರಾಜಕೀಯವಾಗಿ ಅತ್ಯಂತ ಪ್ರಭಾವಿಯಾಗಿದ್ದು, ಪೊಲೀಸರು ಆಕೆಯನ್ನು ವಿಚಾರಣಗೊಳಪಡಿಸಲು ಹಿಂಜರಿಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ದುರಂತದಲ್ಲಿ ಸಾವಿಗೀಡಾದವರ ಕುಟುಂಬಸ್ಥರು ಆಕೆಯನ್ನೂ ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಬೆಂಗಳೂರಿಗೆ ಗುರುವಾರ ಮಧ್ಯಾಹ್ನ ಆಗಮಿಸಿದ ಆಂಧ್ರಪ್ರದೇಶ ಸಿಐಸಿ ಪೊಲೀಸರು prisoner transit warrant ಮೇರೆಗೆ ಈ ನಾಲ್ವರನ್ನೂ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಆದರೆ ಈ ಕಾರ್ಯಾಚರಣೆಯ ಬಗ್ಗೆ ಆಂಧ್ರ ಪೊಲೀಸರು ತಮಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಬಸ್ಸಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರನ್ನು ಹಾಕಿದ್ದು, ದಹನಕಾರಿ ವಸ್ತು ಸಾಗಣೆಯಾಗಿದ್ದು ಇತ್ಯಾದಿ ಸಂಗತಿಗಳು ಪ್ರಾಥಮಿಕ ತನಿಖೆ ಮತ್ತು ವಿಧಿವಿಜ್ಞಾನ ಪರೀಕ್ಷೆಯಲ್ಲಿ ದೃಢಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಈ ಬಂಧನ ನಡೆದಿದೆ ಎನ್ನಲಾಗಿದೆ.

English summary
Bangalore Hyderabad Jabbar Travels volvo bus fire accident- 4 arrested- owner Uma Reddy yet to be questioned. A CID team from Hydearabad on Thursday arrested four persons associated with Jabbar Travels, in Bangalore. However, CID officials are yet to question the bus owner, JC Uma Reddy, who is said to be politically influential. The victims' families have been demanding her arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X