ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಆರ್ ಡಿಓ ಡೈರೆಕ್ಟರ್ ಆಗಿ ಜೆ. ಮಂಜುಳಾ ನೇಮಕ

By Vanitha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 09 : ಡಿಆರ್ ಡಿಓ (defeance Research and Development Organization) ಸಂಸ್ಥೆಯ ನಿರ್ದೇಶಕ ಹುದ್ದೆಗೆ ಇದೇ ಮೊದಲ ಬಾರಿ ಒಬ್ಬ ಮಹಿಳೆ ನೇಮಕ ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.

ದಿಆರ್ ಡಿಓ ಸಂಸ್ಥೆಗೆ ನೂತನ ಡೈರೆಕ್ಟರ್ ಜನರಲ್ ಆಗಿ ನೇಮಕವಾದ ಜೆ. ಮಂಜುಳ ಅವರು ಮೊದಲು ಬೆಂಗಳೂರಿನ ಡಿಎಆರ್ ಇ (Defence Avionics Research Establishment) ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಶನ್ ಕ್ಲಸ್ಟರ್ ಆಗಿ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ.[ಭಾರತೀಯ ಮೂಲದ ಮಹಿಳೆ ಟ್ವಿಟರ್ ಸಿಇಓ ಆಗ್ತಾರಾ?]

J. Manjula becomes DRDO's first woman Director General

ಈ ಮೊದಲು ವಿಶೇಷ ವಿಜ್ಞಾನಿಯಾಗಿ ಹಾಗೂ ಡೈರೆಕ್ಟರ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಡಿ ನಾಯಕ್ ಅವರ ಸ್ಥಾನವನ್ನು ಸಿ. ಜೆ ಮಂಜುಳ ನಿರ್ವಹಿಸಲಿದ್ದು, ಆರು ಪ್ರಾಯೋಗಾಲಯಗಳ ಹೆಚ್ಚುವರಿ ಅಧಿಕಾರಿಯಾಗಿ ಮುನ್ನಡೆಯಲಿದ್ದಾರೆ.

ಮಂಜುಳ ಅವರು ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್ ಪದವಿಯನ್ನು ಅಲ್ಯೂಮ್ನ ಆಫ್ ಒಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಡಿಆರ್ ಡಿಓ ಸಂಸ್ಥೆಗೆ 1987ರ ನಂತರ ಸೇರಿದ ಇವರು ಇದಕ್ಕೂ ಮೊದಲು ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಲಿಟೆಡ್ ನಲ್ಲಿ ಅಲ್ಪಾವಧಿ ಸೇವೆ ಸಲ್ಲಿಸಿದ್ದಾರೆ.[ಮೋದಿ ಸಲಹೆ: ಡಿಆರ್ ಡಿಓ ನಡೆ ಏನು?]

ಹೈದರಾಬಾದಿನ ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ರಿಸರ್ಚ್ ಲ್ಯಾಬೋರೇಟರಿ ಸಂಸ್ಥೆಯಲ್ಲಿಯೂ ಅಧಿಕಾರ ನಿರ್ವಹಿಸಿದ ಮಂಜುಳ ವೇಗದ ಸಿಗ್ನಲ್ ವ್ಯವಸ್ಥೆ , ಆರ್ ಎಫ್ (Radio Frequency) ವ್ಯವಸ್ಥೆ, ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಬಳಸುವ ವಿವಿಧ ವ್ಯವಸ್ಥೆಗೆ ನಿಯಂತ್ರಕ ತಂತ್ರಾಂಶ ಅಭಿವೃದ್ಧಿಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಮಂಜುಳಾ ಅವರ ವಿಶೇಷ ಆಸಕ್ತಿ ಕ್ಷೇತ್ರ ಕಾನ್ಫಿಗರೇಷನ್ ಆಫ್ ಕಮ್ಯೂನಿಕೇಶನ್ ಮತ್ತು ರಾಡರ್ ಇಎಸ್ಎಂ (Electronic Support Measures) ಮತ್ತು ಇಸಿಎಂ( Electronic Contract Manufacturing) ಆಗಿದೆ. ಇವರ ಅದ್ಭುತ ಸೇವೆಯನ್ನು ಪರಿಗಣಿಸಿದ ಡಿಆರ್ ಡಿ ಓ ಸಂಸ್ಥೆಯು 2011ರಲ್ಲಿ ಉತ್ತಮ ವಿಜ್ಞಾನಿ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಜೊತೆಗೆ 2014ರಲ್ಲಿ ವುಮೆನ್ ಅಮಿತ್ ಪ್ರಶಸ್ತಿಯೂ ಸಂದಿದೆ.

English summary
J. Manjula has been named DRDO's first woman Director General.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X