ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಬ್ಬರು ಸ್ವಾಮಿಗಳ ಕೈಯಲ್ಲಿ ಅಮ್ಮನ ರಾಜಕೀಯ ಭವಿಷ್ಯ!

By Mahesh
|
Google Oneindia Kannada News

ಬೆಂಗಳೂರು, ಮೇ.11: ಸುಮಾರು 19 ವರ್ಷಗಳ ಕಾಲ ಕಾನೂನು ಸಮರದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಅಂತಿಮವಾಗಿ ಜಯ ಲಭಿಸಿದೆ. ಈ ಸುದೀರ್ಘದ ಹೋರಾಟದಲ್ಲಿ ಒಬ್ಬ ಸ್ವಾಮಿ ಜಯಾಗೆ ಜೈಲು ದರ್ಶನ ಮಾಡಿಸಿದರೆ, ಮತ್ತೊಬ್ಬ ಸ್ವಾಮಿಗಳು ಕೇಸಿನಿಂದ 'ನಿರ್ದೋಷಿ' ಎಂದು ಆದೇಶ ಇತ್ತಿದ್ದಾರೆ.

ಮೇ. 11ರ ಬೆಳಗ್ಗೆ ಕರ್ನಾಟಕ ಹೈಕೋರ್ಟಿನ ಜಡ್ಜ್ ಸಿ.ಆರ್ ಕುಮಾರಸ್ವಾಮಿ ಅವರು ಎರಡು ಸಾಲಿನ ಆದೇಶ ಓದಿ, ಜೆ ಜಯಲಲಿತಾ ಸೇರಿದಂತೆ ನಾಲ್ವರು ಅಪರಾಧಿಗಳನ್ನು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಿರ್ದೋಷಿಗಳು ಎಂದು ಘೋಷಿಸಿದರು.

ಜಾಮೀನು ಸಿಕ್ಕಿದ್ದೇಕೆ?: ಜಯಾ ವಿರುದ್ಧ ಸೂಕ್ತ ದಾಖಲೆಗಳಿಲ್ಲ. ಜಯಾ ಸಲ್ಲಿಸಿದ ಆಸ್ತಿ ಗಳಿಕೆ ವಿವರಗಳಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ಅದೇಶದಲ್ಲಿ ಹೇಳಿದಂತೆ ಜಯಾ ಅವರು ಇಲ್ಲಿ ತನಕ ನಡೆದುಕೊಂಡಿದ್ದಾರೆ, ಹೀಗಾಗಿ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳನ್ನು ನಿರ್ದೋಷಿ ಎಂದು ಪರಿಗಣಿಸಬೇಕಾಗಿದೆ ಎಂದು ಕುಮಾರಸ್ವಾಮಿ ಆದೇಶಿಸಿದ್ದಾರೆ.

Jayalalithaa Political future decided by Swamy and Swamy

ಜನತಾ ಪಾರ್ಟಿ ನಾಯಕರಾಗಿದ್ದ(ಈಗ ಬಿಜೆಪಿ ಸೇರಿರುವ) ಡಾ. ಸುಬ್ರಮಣ್ಯಂ ಸ್ವಾಮಿ ಅವರು ಜಯಲಲಿತಾ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಪ್ರಮಾನದಲ್ಲಿ 66.65 ಕೋಟಿ ರು ಆಸ್ತಿಯನ್ನು ಅಕ್ರಮವಾಗಿ ಗಳಿಕೆ(1991 ರಿಂದ 1996ರ ಅವಧಿ) ಮಾಡಿರುವ ಆರೋಪ ಹೊರೆಸಿ ಕೇಸ್ ದಾಖಲಿಸಿದರು. ಅಲ್ಲಿಂದ ಇಂದಿನ ತನಕ ಜಯಲಲಿತಾ ಅವರಿಗೆ 'ಸ್ವಾಮಿ' ಭೀತಿ ಎದುರಾಗಿತ್ತು. [ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಸೆ.27,2014ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್‌ ಮೈಕಲ್‌ ಕುನ್ಹಾ ಅವರು ಜಯಲಲಿತಾ, ಶಶಿಕಲಾ, ಇಳವರಸಿ, ದಿನಕರನ್ ಅವರ ವಿರುದ್ದ ಮಾಡಲಾಗಿರುವ ಆರೋಪ ಭ್ರಷ್ಟಾಚಾರ ತಡೆ ಖಾಯ್ದೆ ಸೆಕ್ಷನ್‌ 13(1)ಇ ಅಡಿ ಸಾಬೀತಾಗಿದೆ ಎಂದು ತೀರ್ಪು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Subramanian Swamy

ಇದಾದ ಬಳಿಕ ಸುಪ್ರೀಂಕೋರ್ಟಿನಲ್ಲಿ ಜಾಮೀನು ಪಡೆದು ಪರಪ್ಪನ ಅಗ್ರಹಾರದಿಂದ ಚೆನ್ನೈನ ಪೊಯಿಸ್ ಗಾರ್ಡನ್ ನಿವಾಸಕ್ಕೆ ತೆರಳಿ ಸೈಲಂಟ್ ಆಗಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ 21 ದಿನಗಳನ್ನು ಕಳೆದ ಜಯಲಲಿತಾ ಅವರು ಅನಾರೋಗ್ಯಕ್ಕೆ ಟ್ರೀಟ್ ಮೆಂಟ್ ತೆಗೆದುಕೊಳ್ಳತೊಡಗಿದ್ದರು. [ಮತ್ತೆ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಮ್ಮ?]

ಸುಪ್ರೀಂಕೋರ್ಟ್ ಆದೇಶದ ಅನ್ವಯ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸಿ.ಆರ್.ಕುಮಾರಸ್ವಾಮಿ ಅವರ ಏಕಸದಸ್ಯ ಪೀಠ ಜ.5ರಂದು ವಿಚಾರಣೆ ಆರಂಭಿಸಿತು. ಈ ನಡುವೆ ಎಸ್ ಪಿಪಿ ನೇಮಕ ಗೊಂದಲ ಮತ್ತೊಮ್ಮೆ ವಿಚಾರಣೆ ವಿಳಂಬಗೊಳಿಸಿತು. ಕೊನೆಗೂ ಈಗ ಅಂತಿಮ ಘಟ್ಟ ತಲುಪಿ ಫಲಿತಾಂಶ ಮೇ.11ರ ಬೆಳಗ್ಗೆ ಜಯಾ ಪರವಾಗಿ ಹೊರಬಿದ್ದಿದೆ.

English summary
The 19-year assets case launched by the DMK government in 1996, following a complaint by BJP leader Subramanian Swamy, reached its climax. The Special Bench of Justice C.R. Kumaraswamy acquitted Jayalalithaa and four other from all charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X