ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್ ಮೆಟ್ರೋ ಮಾರ್ಗದಲ್ಲಿ ಬರಲಿವೆ 17 ನಿಲ್ದಾಣಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆಯಾದ ಕೆಆರ್ ಪುರದಿಂದ ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿರ್ಮಾಣವಾಗಲಿರುವ ಮೆಟ್ರೋ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳು ನಿರ್ಮಾಣವಾಗುವ ಸಾಧ್ಯತೆ ಇದೆ.

ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ

ಈ ಯೋಜನೆಯಲ್ಲಿ ಸಿಲ್ಕ್ ಬೋರ್ಡ್-ಕೆ ಆರ್ ಪುರ ಹಾಗೂ ಕೆಆರ್ ಪುರ-ಏರ್‌ಪೋರ್ಟ್ ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಇವರೆಡೂ ಮಾರ್ಗಗಳು ಜೊತೆಯಾಗಿ ನಿರ್ಮಾಣವಾಗಲಿದೆ.

ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್ ಬಾಗ್‌ಗೆ 30 ರೂ. ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್ ಬಾಗ್‌ಗೆ 30 ರೂ.

ಇದರಲ್ಲಿ ಕೆಆರ್ ಪುರ ಹಾಗೂ ನಾಗವಾರ ಇಂಟರ್‌ಚೇಂಜ್ ನಿಲ್ದಾಣಗಳಾಗಿ ನಿರ್ಮಾಣಗೊಳ್ಳಲಿವೆ. ಕೆಆರ್ ಪುರದಿಂದ ಕೆಐಎಎಲ್‌ ನಡುವೆ 17 ನಿಲ್ದಾಣಗಳನ್ನು ನಿರ್ಮಿಸುವಂತೆ ವಿನ್ಯಾಸ ರೂಪಿಸಲಾಗಿದೆ. ಹೆಬ್ಬಾಳ ಹಾದಿಯಾಗಿ ಹೋಗುವ ಏರ್‌ಪೋರ್ಟ್ ಮೆಟ್ರೋ ಮಾರ್ಗವನ್ನು ಹೊರ ವರ್ತುಲ ರಸ್ತೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

It’s a 17 station metro route to Bengaluru airport

ಹೆಬ್ಬಾಳದಿಂದ ಕೋಗಿಲು ಕ್ರಾಸ್‌ವರೆಗೆ ಪ್ರತಿ 1.4 ಕಿ.ಮೀಗೆ ಒಂದರಂತೆ ಹಾಗೂ ಕೋಗಿಲು ಕ್ರಾಸ್‌ನಿಂದ ಏರ್‌ಪೋರ್ಟ್‌ವರೆಗೆ ಪ್ರತಿ 4 ಕಿ.ಮೀಗೆ ಒಂದರಂತೆ ನಿಲ್ದಾಣ ನಿರ್ಮಿಸುವಂತೆ ವಿನ್ಯಾಸ ಸಿದ್ಧಪಡಿಸಲಾಗುತ್ತಿದೆ. ಈ ಮಾರ್ಗದ ನಡುವೆ ಯಲಹಂಕ ವಾಯುನೆಲೆ ಇದೆ. ಇಲ್ಲಿ ಭೂಮಟ್ಟದಲ್ಲಿ ಮೆಟ್ರೋ ಮಾರ್ಗ ಸಾಗಬೇಕಾಗುತ್ತದೆ. ಹೀಗಾಗಿ ಇಲ್ಲಿ ನಿಲ್ದಾಣ ನಿರ್ಮಿಸುವುದು ಕಷ್ಟಸಾಧ್ಯ.

English summary
If deadlines are met and all goes well, in four years the Namma Metro line to Kempegowda International Airport (KIA) will snake through the centre of the city and cover a distance of 55 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X