ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ದಾಳಿ ಪ್ರಕರಣ: ಖೋಡೆಸ್ ಕಂಪನಿಗಳ 878.8 ಕೋಟಿ ಅಕ್ರಮ ಆಸ್ತಿ ಪತ್ತೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 02: ಖೋಡೆಸ್ ಗ್ರೂಪ್ ಆಪ್ ಕಂಪನಿಗಳ ಅಕ್ರಮ ಸಂಪತ್ತನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಯಲಿಗೆ ಎಳೆದಿದ್ದಾರೆ. ಫೆ. 9 ರಂದು ಬೆಂಗಳೂರು ಸೇರಿದಂತೆ 26 ಕಡೆ ನಡೆದಿದ್ದ ದಾಳಿಯಲ್ಲಿ ಖೋಡೆಸ್ ಗೆ ಸೇರಿದ 878.82 ಕೋಟಿ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಪರಿಯ ಅಕ್ರಮ ಆಸ್ತಿ ಗಳಿಸಿರುವ ಖೋಡೆಸ್ ನ ಹಣದ ವಹಿವಾಟಿನ ಬಗ್ಗೆ ಜಾರಿ ನಿರ್ದೇಶನಾಲಯ ಎಂಟ್ರಿ ಕೊಡಲು ತಯಾರಿ ನಡೆದಿದೆ.

ಆದಾಯ ತೆರಿಗೆ ಇಲಾಖೆ ಈ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಬೆಂಗಳೂರು ಮೂಲದ ಡೆವಲಪರ್ ಕಂಪನಿ ಜತೆ ಸೇರಿ ಜಂಟಿ ಒಡಂಬಡಿಕೆ ಮಾಡಿಕೊಂಡು ವಸತಿಗೆ ಬಳಸಬೇಕಿದ್ದ ಜಾಗವನ್ನು ವಾಣಿಜ್ಯ ಬಳಕೆಗೆ ಬದಲಾವಣೆ ಮಾಡಲಾಗಿದೆ. ಇದೊಂದರಿಂದಲೇ ಬರೋಬ್ಬರಿ 692.82 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳದಲ್ಲಿ ಖೋಡೆಸ್ ಗೆ ಸೇರಿದ ಲಿಕ್ಕರ್ ಕಂಪನಿಯಲ್ಲಿ ಲೆಕ್ಕ ವಿಲ್ಲದ 74 ಕೋಟಿ ರೂಪಾಯಿ ಹಣ ಸಿಕ್ಕಿದ್ದು, ಅದನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಉಳಿದಂತೆ 17 ಕೋಟಿ ರೂಪಾಯಿ ಹಣವನ್ನು ದೈನಂದಿನ ಖರ್ಚಿನ ವೆಚ್ಚದಲ್ಲಿ ಸುಳ್ಳು ಲೆಕ್ಕ ತೋರಿಸಲಾಗಿದೆ. ಉಳಿದಂತೆ 9 ಕೋಟಿ ರೂಪಾಯಿ ಹಣವನ್ನು ವಿವರಿಸಲಾಗದ ವೆಚ್ಚಕ್ಕೆ ನಿರ್ದೇಶಕರು ತೋರಿಸಿ ಐಟಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.

 Bengaluru: It raid on Khoday; Group unearth undisclosed income of Rs 878. Cr

ಇನ್ನು ಖೋಡೆಸ್ ಕಂಪನಿ ಮಾಲೀಕರು ಸುಮರು 35 ಬೇನಾಮಿ ಆಸ್ತಿ ಹೊಂದಿದ್ದಾರೆ. ಕಂಪನಿ ನೌಕರರು ಮತ್ತು ಆಪ್ತರ ಹೆಸರಿನಲ್ಲಿ ಹಲವಾರು ವರ್ಷದಿಂದ ಬೇನಾಮಿ ಆಸ್ತಿ ಮಾಡಿದ್ದು, ಈ ಕುರಿತ ಮಹತ್ವದ ದಾಖಲೆಗಳನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸುಮಾರು 150 ಕೋಟಿ ಮೌಲ್ಯದ ಆಸ್ತಿಗಳು ಬೇನಾಮಿ ಹೆಸರಿನಲ್ಲಿ ಪತ್ತೆಯಾಗಿವೆ. ಕಂಪನಿ ನಿರ್ದೇಶಕರ ಹೆಸರಿನಲ್ಲಿ ವಿದೇಶಗಳಲ್ಲಿ ಅಪಾರ ಪ್ರಮಾಣದ ಆಸ್ತಿಯನ್ನು ಮಾಡಿದ್ದು, ಎಲ್ಲಾ ದಾಖಲೆಗಳು ಐಟಿ ಕೈ ಸೇರಿವೆ.

ವಿದೇಶಕ್ಕೆ ಹಣ ಸಾಗಣೆ, ಅಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಬಗ್ಗೆ ದಾಖಲೆಗಳು ಪತ್ತೆಯಾಗುತ್ತಿದ್ದಂತೆ ಎಲ್ಲಾ ಮಾಹಿತಿಯನ್ನು ಜಾರಿ ನಿರ್ದೇಶನಾಲಯಕ್ಕೆ ರವಾನಿಸಿದ್ದಾರೆ. ಖೋಡೆಸ್ ಕಂಪನಿ ಬೇನಾಮಿ ವಹಿವಾಟಿನ ಬಗ್ಗೆ ಇಸಿಆರ್ ದಾಖಲಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಬೇನಾಮಿ ವಹಿವಾಟು ನಿಯಂತ್ರಣ ಹಾಗೂ ಪೆಮಾ ಅಡಿ ಕೇಸು ದಾಖಲಾಗಲಿದೆ ಎಂದು ಹೇಳಲಾಗುತ್ತಿದೆ. ಇಡಿ ಎಂಟ್ರಿ ಕೊಟ್ಟಲ್ಲಿ ಖೋಡೆಸ್ ಬೇನಾಮಿ ಆಸ್ತಿ ಜಪ್ತಿಯಾದರೂ ಅಚ್ಚರಿ ಪಡಬೇಕಿಲ್ಲ.

 Bengaluru: It raid on Khoday; Group unearth undisclosed income of Rs 878. Cr

Recommended Video

ಅಮಿತ್ ಶಾ vs ಮಮತಾ !! ಗೆಲ್ಲೋದು ಯಾರು ? | Oneindia Kannada

ಫೆ. 9 ರಂದು ಬೆಂಗಳೂರಿನಲ್ಲಿ ಖೋಡೆಸ್ ಕಂಪನಿ ಕಚೇರಿ, ರಿಯಲ್ ಎಸ್ಟೇಟ್ ಕಚೇರಿ, ಮಾಲೀಕ ಹರಿಖೋಡೆ ನಿವಾಸ ಸೇರಿದಂತೆ ನಾನಾ ಕಡೆ ದಾಳಿ ನಡೆದಿತ್ತು. ಖೋಡೆಸ್ ಗ್ರೂಪ್ ಆಫ್ ಕಂಪನಿಗಳಿಗೆ ಸೇರಿದ 26 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಸಂಗ್ರಹಿಸಿದ್ದರು. ಆದರೆ ಈ ಪ್ರಮಾಣದ ಅಕ್ರಮ ಆಸ್ತಿ ಸಿಗುವ ಬಗ್ಗೆ ಐಟಿ ಅಧಿಕಾರಿಗಳು ಊಹಿಸಿರಲಿಲ್ಲ. ಬರೋಬ್ಬರಿ 900 ಕೋಟಿ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಪತ್ತೆಯಾಗಿದ್ದು, ಇದೀಗ ಖೋಡೆಸ್ ಕಂಪನಿಯ ಆಸ್ತಿ ಗಳಿಕೆ, ಬೇನಾಮಿ ವಹಿವಾಟಿನ ಬಗ್ಗೆ ಜಾಲಾಡಲು ಜಾರಿ ನಿರ್ದೇಶನಾಲಯ ಎಂಟ್ರಿ ಕೊಡಲಿದೆ.

English summary
Income tax department raid on khodays group unearth undisclosed income of Rs 878 cr
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X