ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬೆಂಗಳೂರಿನ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ

|
Google Oneindia Kannada News

ಬೆಂಗಳೂರು, ಜೂ.23: ಬೆಂಗೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ರೇವಾ ಮತ್ತು ದಿವ್ಯಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ಗಳ ಮೇಲೆ ದಾಳಿ ನಡೆದಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಆದಾಯ ತೆರಿಗೆ ಪಾವತಿಸದೇ ಮರೆಮಾಚಿದ ಆರೋಪ ಮೇಲೆ ಈ ದಾಳಿ ನಡೆದಿದೆ.

ಶುಲ್ಕ ವಸೂಲಿ ಸುಳ್ಳು ಲೆಕ್ಕ ತೋರಿಸಿ ತೆರಿಗೆ ವಂಚನೆ ಮಾಡಿದ ಆರೋಪವು ಕೂಡ ರೇವಾ ಹಾಗೂ ದಿವ್ಯಾ ಗ್ರೂಪ್‌ ಮೇಲೆ ಇದೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ಸುಮಾರು 70 ವಾಹನಗಳಲ್ಲಿ ಅಧಿಕಾರಿಗಳು ಆಗಮಿಸಿ ದಾಳಿ ಮಾಡಿದ್ದಾರೆ.

IT Raid on Bengaluru Educational Institutions

ಕರ್ನಾಟಕ ಹಾಗೂ ಗೋವಾ ವಲಯದ ಐಟಿ ಅಧಿಕಾರಿಗಳಿಂದ ಈ ದಾಳಿ ನಡೆದಿದೆ.

ಖಾಸಗಿ ವಿಶ್ವವಿದ್ಯಾಲಗಳ ಮೇಲೆ ಐಟಿ ದಾಳಿ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪ್ರಮುಖವಾಗಿ ಮೂರು ವಿಚಾರಗಳಿಗೆ ಸಂಬಂಧಿಸಿದಂತೆ ಈ ನಡೆದಿದೆ.

ರೇವಾ ಮತ್ತು ದಿವ್ಯಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ಗಳ ಮೇಲೆ ನಡೆದ ದಾಳಿಯು ಪ್ರಮುಖವಾಗಿ ವಿದೇಶಗಳಿಂದ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ‌ ಶುಲ್ಕ ಸಂಗ್ರಹ ಆರೋಪ ಮೇಲೆ ದಾಳಿ ನಡೆದಿದೆ.

IT Raid on Bengaluru Educational Institutions

ಅಲ್ಲದೇ ಐಟಿ ದಾಳಿಗೆ ಒಳಗಾಗಿರುವ ರೇವಾ ಹಾಗೂ ದಿವ್ಯಾ ಗ್ರೂಪ್‌ ಶಿಕ್ಷಣ ಸಂಸ್ಥೆಗಳು ಸರ್ಕಾರದ ನಿಯಮಾವಳಿಗಳನ್ನ ಮೀರಿ ಪೇಮೆಂಟ್ ಕೋಟಾ ಸೀಟುಗಳನ್ನು ಮ್ಯಾನೇಜ್‌ಮೆಂಟ್‌ಗಳು ಬ್ಲಾಂಕಿಂಗ್ ದಂಧೆ ಮಾಡಿ ಹೆಚ್ಚಿಸಿರುವ ಆರೋಪದ ಮೇಲೆಯೂ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಅಕ್ರಮವಾಗಿ ಸಂಗ್ರಹಿಸಲಾದ ಹಣದ ಮಾಹಿತಿಯನ್ನು ಐಟಿಗೆ ಒದಗಿಸದೇ ತೆರಿಗೆ ವಂಚನೆಯನ್ನು ಶಿಕ್ಷಣ ಸಂಸ್ಥೆಗಳು ಎಸಗಿವೆ ಎಂದು ಸಹ ಆರೋಪ ಮಾಡಲಾಗಿದೆ. ಈ ಮೇಲ್ಕಂಡ ಅಂಶಗಳ ಆಧಾರದ ಮೇಲೆ ಕರ್ನಾಟಕ ಹಾಗೂ ಗೋವಾ ವಲಯದ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

Recommended Video

Narendra Modiಗೆ ಎರಡು ದಶಕಗಳ ನಂತರ ಕ್ಲೀನ್ ಚಿಟ್ | India | Oneindia Kannada

English summary
Income Tax Department officials conducted raid the prestigious educational institutions in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X