ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಹೋದರ ರೇವಣ್ಣ ಮನೆ ಮೇಲೆ ಐಟಿ ದಾಳಿ: ಕುಮಾರಸ್ವಾಮಿ ಏನಂದ್ರು?

|
Google Oneindia Kannada News

Recommended Video

ಎಚ್ ಡಿ ರೇವಣ್ಣ ಮನೆ ಮೇಲೆ ಐಟಿ ದಾಳಿ ನಡೆದ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಹೇಳಿದ್ದೇನು? | Oneindia Kannada

ಬೆಂಗಳೂರು, ಮಾರ್ಚ್ 28: ಕರ್ನಾಟಕದಲ್ಲಿ ಹಲವು ಪ್ರಭಾವಿಗಳ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

"ಪ್ರಧಾನಿ ನರೇಂದ್ರ ಮೋದಿ ಅವರ ನಿಜವಾದ ಸರ್ಜಿಕಲ್ ಸ್ಟ್ರೈಕ್ ಅಂದ್ರೆ ಇದೇ. ಐಟಿ ಅಧಿಕಾರಿ ಬಾಲಕೃಷ್ಣ ಅವರು ತಮ್ಮ ಪ್ರತೀಕಾರಿ ತೀರಿಸಿಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಸಹಾಯ ಮಾಡಿದ್ದಾರೆ. ಚುನಾವಣೆಯ ಸಮಯದಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಉಪಯೋಗಿಸಿಕೊಂಡು ಹೀಗೆ ದಾಳಿ ನಡೆಸುವುದು ಶೋಚನೀಯ" ಎಂದು ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಐಟಿ ದಾಳಿ LIVE: ಶಾಕೂ ಇಲ್ಲ ಏನೂ ಇಲ್ಲ, ಇದಕ್ಕೆಲ್ಲ ನಾವು ಹೆದರುವುದಿಲ್ಲ: ರೇವಣ್ಣ ಐಟಿ ದಾಳಿ LIVE: ಶಾಕೂ ಇಲ್ಲ ಏನೂ ಇಲ್ಲ, ಇದಕ್ಕೆಲ್ಲ ನಾವು ಹೆದರುವುದಿಲ್ಲ: ರೇವಣ್ಣ

ಕರ್ನಾಟಕ ಸರ್ಕಾರದ ಹಲವು ಅಧಿಕಾರಿಗಳು, ಸಚಿವರು ಮತ್ತು ಅವರ ಆತ್ಮೀಯರ ಮನೆಗಳ ಮೇಳೆ ಗುರುವಾರ ಐಟಿ ದಾಳಿ ನಡೆಯಬಹುದು ಎಂದು ಕಳೆದ ರಾತ್ರಿಯೇ ಎಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿ ಸೂಚನೆ ನೀದಿದ್ದರು.

ಮೋದಿಗೆ ಬಾಲಕೃಷ್ಣ ಸಹಾಯ

ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು ಐಟಿ ಅಧಿಕಾರಿ ಬಾಲಕೃಷ್ಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಹಾಯ ಮಾಡಿದ್ದಾರೆ. ಚುನಾವಣೆಯ ಸಮಯದಲ್ಲಿ ಹೀಗೆ ಸಾಂವಿಧಾನಿಕ ಸಂಸ್ಥೆಗಳನ್ನು, ಭ್ರಷ್ಟ ಅಧಿಕಾರಿಗಳನ್ನು ಉಪಯೋಗಿಸಿಕೊಂಡು ದಾಳಿ ನಡೆಸುವುದು ಅತ್ಯಂತ ಶೋಚನೀಯ- ಎಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ

ದಾಳಿಯ ಸೂಚನೆ ನೀಡಿದ್ದ ಎಚ್ ಡಿಕೆ

ಕರ್ನಾಟಕದ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯ ಮುಖಂಡರನ್ನು ಬೆದರಿಸಲು ನರೇಂದ್ರ ಮೋದಿ ಅವರು ಆದಾಯ ತೆರಿಗೆ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರು ನಮ್ಮ ಪ್ರಭಾವಿ ಮುಖಂಡರ ಮೇಲೆ ಐಟಿ ರೇಡ್ ಮಾಡಲು ಯೋಜನೆ ರೂಪಿಸಿದ್ದಾರೆ.ಇದನ್ನು ಸೇಡಿನ ರಾಜಕೀಯ ಎನ್ನುತ್ತಾರೆ. ಇಂಥದ್ದಕ್ಕೆಲ್ಲ ನಾವು ಹೆದರಿ, ಬಗ್ಗುವುದಿಲ್ಲ- ಎಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ

ಮುಂದುವರೆದ ಐಟಿ ಇಲಾಖೆ ದಾಳಿ : ಸಿಎಂ ಆಪ್ತ ಪುಟ್ಟರಾಜುಗೆ ಬಿಸಿ ಮುಂದುವರೆದ ಐಟಿ ಇಲಾಖೆ ದಾಳಿ : ಸಿಎಂ ಆಪ್ತ ಪುಟ್ಟರಾಜುಗೆ ಬಿಸಿ

ಯಾರ್ಯಾರ ಮನೆ ಮೇಲೆ ಐಟಿ ದಾಳಿ?

ಯಾರ್ಯಾರ ಮನೆ ಮೇಲೆ ಐಟಿ ದಾಳಿ?

ಚುನಾವಣೆಯ ವೇಳೆ ಕೋಟ್ಯಂತರ ಹಣವನ್ನು ಸಾಗಾಟ ಮಾಡಲಾಗಿದೆ ಎಂಬ ಶಂಕೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಲೋಕೋಪಯೋಗ ಸಚಿವ ಎಚ್ ಡಿ ರೇವಣ್ಣ, ಜೆಡಿಎಸ್ ಮುಖಂಡರಾದ ಸಿ ಎಸ್ ಪುಟ್ಟರಾಜು, ಎಂಎಲ್ ಸಿ ಬಿ ಎಂ ಫಾರೂಕ್ ಮತ್ತು ಈ ಎಲ್ಲ ನಾಯಕರ ಆಪ್ತರ ಮನೆ, ಕಚೇರಿ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಮನೆ ಮೇಲೆ ಐಟಿ ದಾಳಿಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಮನೆ ಮೇಲೆ ಐಟಿ ದಾಳಿ

ಸುಮಲತಾ ಮೇಲೆ ಆರೋಪ

ಸುಮಲತಾ ಮೇಲೆ ಆರೋಪ

ಐಟಿ ದಾಳಿ ನಡೆಸೋಕೆ ಮಂಡ್ಯದ ಬಿಜೆಪಿ ಬೆಂಬಲಿತ ಅಭ್ಯರ್ಥಿಯೇ ಕಾರಣ ಎಂದು ಸಚಿವ ಪುಟ್ಟರಾಜು ಹೇಳಿಕೆ ನೀಡಿದ್ದಾರೆ. ಪರೋಕ್ಷವಾಗಿ ಸುಮಲತಾ ಅವರೇ ಇದಕ್ಕೆ ಕಾರಣ ಎಂದಿರುವ ಪುಟ್ಟರಾಜು ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, 'ಐಟಿ ದಾಳಿ ನಡೆಯಬೇಕೆಂದರೆ ಎಷ್ಟು ಅದಿನಗಳಿಂದ ತಯಾರಿ ನಡೆಬೇಕು. ಐಟಿ ಅಧಿಕಾರಿಗಳ ಬಳಿ ದಾಳಿ ಮಾಡಿಸೋಕೆ ನಾನು ಯಾರು? ನನಗೇನು ಅಧಿಕಾರವಿದೆ? ಐಟಿ ಅಧಿಕಾರಿಗಳೇನು ನಮ್ಮ ಮನೆ ಆಳುಗಳಾ' ಎಂದು ಸುಮಲತಾ ಉತ್ತರಿಸಿದ್ದರು.

English summary
Karnataka CM HD Kumarswamy tweeted, PM Narendra Modi's real surgical strike is out in the open through IT dept raids. The constitutional post offer for IT officer Balakrishna helped the PM in his revenge game. Highly deplorable to use govt machinery, corrupt officials to harrass opponents during election time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X