ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ!

|
Google Oneindia Kannada News

ಬೆಂಗಳೂರು, ಮೇ 01: ನಗರದ ಆಟೋ ಡ್ರೈವರ್ ಒಬ್ಬರ ಮನೆಯ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಿಚಿತ್ರವೆನಿಸಿದರೂ ಇದು ನಿಜ, ಸಾಮಾನ್ಯ ಆಟೋ ಚಲಾಯಿಸುವ ಆಟೋ ಡ್ರೈವರ್ ಒಬ್ಬರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಶ್ಚರ್ಯವೆಂಬತೆ ಅಲ್ಲಿ ಅಪಾರ ಪ್ರಮಾಣದ ಹಣ, ಆಸ್ತಿಯನ್ನೂ ಪತ್ತೆ ಮಾಡಿದ್ದಾರೆ.

ತಪ್ಪು ಮಾಡಿದ್ದರೆ ನನ್ನ ಮನೆಯೂ ಐಟಿ ದಾಳಿ ನಡೆಸಲಿ: ಮೋದಿತಪ್ಪು ಮಾಡಿದ್ದರೆ ನನ್ನ ಮನೆಯೂ ಐಟಿ ದಾಳಿ ನಡೆಸಲಿ: ಮೋದಿ

ಬೆಂಗಳೂರಿನ ವೈಟ್‌ಫಿಲ್ಡ್‌ ವಿಲ್ಲಾದಲ್ಲಿ ವಾಸವಿರುವ ಸುಬ್ರಮಣಿ ಎಂಬ ಆಟೋ ಡ್ರೈವರ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ಕೆಲ ದಿನಗಳ ಹಿಂದೆ ದಾಳಿ ನಡೆಸಿದ್ದರು. ಈ ಸಮಯ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

IT officers raid on Bengalurus auto drivers house

ನಗರದಲ್ಲಿ ಆಟೋ ಓಡಿಸುತ್ತಿರುವ ಸುಬ್ರಹ್ಮಣ್ಯ ಅವರಿಗೆ ಹಲವು ಪ್ರಮುಖ ರಾಜಕಾರಣಿಗಳು, ಉದ್ಯಮಿಗಳ ಒಡನಾಟ ಇದೆ ಎಂಬ ಕಾರಣಕ್ಕೆ ಐಟಿ ಅಧಿಕಾರಿಗಳು ಸುಬ್ರಹ್ಮಣ್ಯ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

2.3 ಕೋಟಿ ಅಕ್ರಮ ಹಣ ಪತ್ತೆ: ಮಾಜಿ ಶಾಸಕ ಅಪ್ಪಾಜಿಗೌಡರಿಗೆ ನೊಟೀಸ್2.3 ಕೋಟಿ ಅಕ್ರಮ ಹಣ ಪತ್ತೆ: ಮಾಜಿ ಶಾಸಕ ಅಪ್ಪಾಜಿಗೌಡರಿಗೆ ನೊಟೀಸ್

ದಾಳಿಯ ವೇಳೆ ಸುಬ್ರಹ್ಮಣ್ಯ ಅವರ ಹೆಸರಿನಲ್ಲಿ ಐಶಾರಾಮಿ ವಿಲ್ಲಾಗಳು, ಕಾರುಗಳು, ಆಸ್ತಿ ಇರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತನ ಮನೆ ಮೇಲೆ ಐಟಿ ದಾಳಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತನ ಮನೆ ಮೇಲೆ ಐಟಿ ದಾಳಿ

ಸುಬ್ರಹ್ಮಣ್ಯ ಬಿಜೆಪಿ ಮುಖಂಡನಾಗಿದ್ದು, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆಪ್ತ ಎಂದು ಹೇಳಲಾಗಿದೆ. ಆದರೆ ಸುಬ್ರಹ್ಮಣ್ಯ ಮೇಲೆ ಐಟಿ ದಾಳಿ ಪ್ರತಿಕ್ರಿಯೆ ನೀಡಿರುವ ಅವರು ಸುಬ್ರಹ್ಮಣ್ಯ ಯಾರೆಂಬುದು ತಿಳಿದಿಲ್ಲ, ಅವರ ಮನೆಯಲ್ಲಿ ಅಕ್ರಮ ಆಸ್ತಿ, ಹಣ ಪತ್ತೆಯಾಗಿದ್ದರೆ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.

English summary
Income tax officers raid on Bengaluru's auto driver Subrahmanya. alleged that he is close to BJP MLA Aravid Limbavali but denies connection with him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X