ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗಣೇಶೋತ್ಸವಕ್ಕೆ ಪೊಲೀಸ್ ಮಾರ್ಗಸೂಚಿ ಪಾಲನೆ ಕಡ್ಡಾಯ

|
Google Oneindia Kannada News

ಬೆಂಗಳೂರು, ಆಗಸ್ಟ್ 27: ಬೆಂಗಳೂರಿನಲ್ಲಿ ಗಣೇಶೋತ್ಸವ ಅದ್ದೂರಿ ಆಚರಣೆಗೆ ಸನ್ನದ್ದವಾಗುತ್ತಿದೆ. ಇದೇ ವೇಳೆಯಲ್ಲಿ ಬೆಂಗಳೂರು ನಗರದಲ್ಲಿ ಯಾವುದೇ ರೀತಿಯಲ್ಲಿ ಕೋಮಸೌಹಾರ್ದತೆಗೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಗಣೇಶೋತ್ಸವಕ್ಕೆ ಪೊಲೀಸ್ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗೈಡ್ ಲೈನ್ ಬಿಡುಗಡೆಯನ್ನು ಮಾಡಿದ್ದಾರೆ. ಆಗಸ್ಟ್ 30 ರಂದು ಗೌರಿ ಗಣೇಶ ಹಬ್ಬವನ್ನು ನಮ್ಮ ನಾಡಿನ ಸಂಸ್ಕೃತಿ ಭಾವೈಕ್ಯತೆಯ ಪ್ರತೀಕವಾಗಿ ಆಚರಿಸಲಾಗುತ್ತಿದೆ.

ಗಣೇಶ ಚತುರ್ಥಿ: ಮನೆಯಲ್ಲೇ ಗಣೇಶ ಚತುರ್ಥಿ: ಮನೆಯಲ್ಲೇ "ಪರಿಸರ ಸ್ನೇಹಿ" ಗಣಪನನ್ನು ಮಾಡುವುದು ಹೇಗೆ?

ಕೋಮು ಸೌಹಾರ್ದದಿಂದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ವಿನಂತಿಯನ್ನು ಮಾಡಲಾಗಿದೆ. ಗಣೇಶೋತ್ಸವ ಆಚರಣೆಗೆ ಕಟ್ಟುನಿಟ್ಟಿನ ನಿಯಮಾವಳಿಗಳ ಫಾಲೋ ಕಡ್ಡಾಯ.

 It is mandatory to follow police guidelines for Bengaluru Ganeshotsava

ಹಬ್ಬವನ್ನು ಆಚರಿಸಲು ಸಮಿತಿ ಗಮನದಲ್ಲಿಡಬೇಕಾದ ಅಂಶಗಳು:
1) ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಬಿಬಿಎಂಪಿಯ ಏಕಗವಾಕ್ಷಿಯಲ್ಲಿ ಅನುಮತಿ ಪಡೆಯಬೇಕು.

2) ಸದೃಢವಾಗಿ ಶಾಮಿಯಾನ ನಿರ್ಮಿಸಬೇಕು, ಶಾಮಿಯಾನಗೆ ಪ್ಲೆಕ್ಸ್ ಬ್ಯಾನರ್ ಬಂಟಿಂಗ್ಸ್ ಅಳವಡಿಸಬಹುದು‌. ಅದರೆ ಶಾಮಿಯಾನ ಹೊರತುಪಡಿಸಿ ಬೇರೆಡೆ ಪ್ಲೆಕ್ಸ್ ಬ್ಯಾನರ್ ಬಂಟಿಂಗ್ ಅಳವಡಿಕೆಗೆ ಪ್ರತ್ಯೇಕ ಅನುಮತಿ ಪಡೆಯಬೇಕು

3) ಯಾವುದೇ ಕಾರಣಕ್ಕೂ ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಟಾಪನೆ ಮಾಡುವಂತಿಲ್ಲ ಹಾಗೂ ಸ್ಥಳ ಮಾಲೀಕರು ಮತ್ತು ಬಿಬಿಎಂಪಿ ಏಕಗವಾಕ್ಷಿ ಅನುಮತಿ ಪಡೆಯಬೇಕು.

4) ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 24 ಗಂಟೆ ಆಯೋಜಕ ಕಾರ್ಯಕರ್ತರು ಇರಬೇಕು. ಅವರ ವಿವರ ಪೊಲೀಸರಿಗೆ ಕೊಡಬೇಕು

 It is mandatory to follow police guidelines for Bengaluru Ganeshotsava

5) ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಪೊಲೀಸ್ ಹಾಗೂ ಬಿಬಿಎಂಪಿ ನಿಯಮದಂತೆ ಸಿಸಿಟಿವಿಗಳ ಅಳವಡಿಕೆ ಮಾಡಬೇಕು

6) ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಬೆಂಕಿ ನಂದಿಸುವ ಉಪಕರಣಗಳು ಇರಬೇಕು. ಮರಳು ತುಂಬಿದ ಬಕೆಟ್, ನೀರಿನ ವ್ಯವಸ್ಥೆ ಇರಬೇಕು.

7) ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಅಡುಗೆ ಮಾಡುವ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇಡಬಾರದು.

8) ಗಣೇಶ ಪ್ರತಿಷ್ಟಾಪನೆ ಸ್ಥಳದಲ್ಲಿ ಓರ್ವ ಎಲೆಕ್ಟ್ರಿಷಿನ್ ಇರಬೇಕು, ಸಮರ್ಪಕ ಬೆಳಕು, ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಶಾರ್ಟ್ ಸರ್ಕ್ಯೂಟ್, ಇತರ ಅವಘಡ ತಡೆಯಲು ಸನ್ನದ್ಧರಾಗಿರಬೇಕು

9) ಸಾರ್ವಜನಿಕರು ಬರಲು ಹೋಗಲು ಸಮರ್ಪಕ ಆಗಮನ ನಿರ್ಗಮನ ವ್ಯವಸ್ಥೆ ಇರಬೇಕು. ಬ್ಯಾರಿಕೇಡ್ ನಿರ್ಮಿಸಿ, ಸ್ವಯಂ ಸೇವಕರು ಇರಬೇಕು. ಜನ ಹೆಚ್ಚಾದರೆ ಖಾಸಗಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವುದು

10) ಗಣೇಶ ವಿಸರ್ಜನೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಆಯೋಜಕರು ಕ್ರಮ ವಹಿಸುವುದು.

11) ಮನರಂಜನಾ ಕಾರ್ಯಕ್ರಮ, ಮೆರವಣಿಗೆ, ವಿಸರ್ಜನೆ ವೇಳೆ ಹೆಣ್ಣು ಮಕ್ಕಳಿಗೆ ಚುಡಾಯಿಸುವುದು ಕೀಟಲೆ ಮಾಡಿದಾಗ ಕೂಡಲೇ ಪೊಲೀಸರ ಸಂಪರ್ಕಿಸುವುದು.

12) ಸರ್ಕಾರ ಮತ್ತು ಹೈಕೋರ್ಟ್ ಆದೇಶದಂತೆ ಹಿರಿಯ ನಾಗರೀಕರು, ರೋಗಿಗಳಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿಯಮಿತವಾಗಿ ಬಳಸುವುದು

13) ಗಣೇಶ ಪ್ರತಿಷ್ಟಾಪನೆ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ತಮ್ಮ ವಿಳಾಸ ಮತ್ತು ಪೋನ್ ನಂಬರ್ ಸಂಬಂಧಪಟ್ಟ ಠಾಣಾಧಿಕಾರಿಗಳಿಗೆ ನೀಡುವುದು ಹಾಗೂ ಸ್ಥಳದಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುವುದು

14) ಯಾವುದೇ ರೀತಿಯ ಲೇಸರ್‌ ಪ್ರೊಜೆಕ್ಷನ್ ಮಾಡಬಾರದು. ಮೆರವಣಿಗೆ ಸೂಕ್ಷ್ಮ ಸ್ಥಳ, ಅತಿ ಸೂಕ್ಷ್ಮ ಸ್ಥಳದಲ್ಲಿ ಸಾಗುವಾಗ ಸಿಡಿಮದ್ದು ಪಟಾಕಿ ಸಿಡಿಸದಂತೆ ನೋಡಿಕೊಳ್ಳಬೇಕು.

15) ಗಣೇಶ ಪ್ರತಿಷ್ಟಾಪನೆ ಮತ್ತು ಕಾರ್ಯಕ್ರಮಕ್ಕೆ ಬಲವಂತವಾಗಿ ವಂತಿಗೆ ವಸೂಲಿ ಮಾಡಿದರೆ ಕಠಿಣ ಕ್ರಮ.

16) ಆಯೋಜಕರು ಸ್ವಯಂ ಸೇವಕರಿಗೆ ಟೀ ಶರ್ಟ್ ಮತ್ತು ಗುರುತಿನ ಚೀಟಿ, ಕ್ಯಾಪ್ ಕೊಟ್ಟು ಅವರನ್ನ ಗುರುತಿಸಲು ಸಾಧ್ಯವಾಗಬೇಕು

ಈ ಬಾರಿ ಗಣೇಶೋತ್ಸವ ಹೀಗೆ ಹತ್ತು ಹಲವು ನಿಬಂಧನೆಗಳನ್ನ ಸಿದ್ದಪಡಿಸಿದ ಪೊಲೀಸರು ನಗರದಲ್ಲಿ ಗಣೇಶೋತ್ಸವ ಆಚರಣೆಗೆ ಕಟ್ಟುನಿಟ್ಟಿನ ಕ್ರಮಗಳ ಜಾರಿ ಮಾಡಿದೆ ಈ ನಿಯಮಗಳ ನಡುವೆ ಹಬ್ಬವು ನಡೆಯಲಿದೆ.

English summary
Ganeshotsava is gearing up for grand celebration in Bengaluru. At the same time, the police department has taken action to ensure that communal harmony is not disturbed in any way in Bengaluru city. Police department has released guide line for Ganeshotsava, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X