ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಯ್ಯೋ, ಚಳಿ ಚಳಿ ಅಂದ್ರಾ..? ಫೆಬ್ರವರಿವರೆಗೂ ಸಹಿಸಿಕೊಳ್ಳಲೇಬೇಕು!

|
Google Oneindia Kannada News

Recommended Video

ಬೆಂಗಳೂರು ಹವಾಮಾನ : ಫೆಬ್ರವರಿವರೆಗೂ ಇರತ್ತೆ ಮೈ ನಡುಗಿಸುವ ಚಳಿ | Oneindia Kannada

ಬೆಂಗಳೂರು, ಡಿಸೆಂಬರ್ 20: 'ಅಯ್ಯೋ ಚಳಿ ಚಳಿ' ಎಂದು ಎರಡೂ ಕೈಗಳನ್ನು ಉಜ್ಜುತ್ತಾ, ಬೇಗ ಹೋಗ್ಬೇಕಲ್ಲ ಅಂತ ಆಫೀಸಿಗೆ ಶಪಿಸುತ್ತ... ಬೆಳ್ಗೆ ಕಷ್ಟಪಟ್ಟು ಏಳೋ ಪಾಡು ಸದ್ಯಕ್ಕೆ ಬೆಂಗಳೂರಿಗರದ್ದು! ಉದ್ಯಾನ ನಗರಿಯಲ್ಲಿ ನವೆಂಬರ್ ಮುಗಿಯುತ್ತಾ ಬಂದರೂ ಚಳಿ ಇಲ್ಲವಲ್ಲ ಎಂದು ದೂರಿದ್ದವರಿಗೆಲ್ಲ, ಯಾಕಾದರೂ ದೂರಿದೆವೋ ಎಂಬಂತಾಗಿರೋದು ಸುಳ್ಳಲ್ಲ!

ಬೆಂಗಳೂರಿಗರೇ ಚಳಿಗಾಲದ ಸುಖಗಳೆಲ್ಲ ಪ್ರಾಪ್ತಿರಸ್ತು...ಬೆಂಗಳೂರಿಗರೇ ಚಳಿಗಾಲದ ಸುಖಗಳೆಲ್ಲ ಪ್ರಾಪ್ತಿರಸ್ತು...

ಬೆಂಗಳೂರಿಗರಿನಲ್ಲೀಗ ಥಂಡಾ ಥಂಡಾ ಕೂಲ್ ಕೂಲ್ ವಾತಾವರಣ. ಮೈನಡುಗುವ ಚಳಿಗೆ ಮುದುರಿ ಮಲಗಿರುವವರೆಲ್ಲ, ಪ್ರತಿ ದಿನವೂ ಸಂಡೆಯಾಗಬಾರದಿತ್ತಾ ಎಂದು ಹಲುಬುವ ಸಮಯ! ಹವಾಮಾನ ಇಲಾಖೆ ನೀಡಿದ ಮಾಹಿತಿಯ ಪ್ರಕಾರ ಡಿ.19 ರಂದು ಮಂಗಳವಾರ ಬೆಂಗಳೂರು ಹೊರವಲಯದಲ್ಲಿ ತಾಪಮಾನ ಕನಿಷ್ಠ 13 ಡಿಗ್ರಿ ಸೆಲ್ಷಿಯಸ್ ವರೆಗೂ ತಲುಪಿತ್ತು! ಬೆಂಗಳೂರು ನಗರದಲ್ಲಿ ಬೆಳಿಗ್ಗೆ 5.30 ರ ಸುಮಾರಿಗೆ 15 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿತ್ತು. ಬೆಳ್ಳಂಬೆಳಗ್ಗೆ ಬೀಸುವ ತಣ್ಣನೆ ಗಾಳಿಯಂತೂ ಮತ್ತಷ್ಟು ಭಯಂಕರವಾಗಿದ್ದು ಮೈ ನಡಿಗಿಸುತ್ತಿದೆ.

ನವೆಂಬರ್ ಮುಗೀತಾ ಬಂತು, ಬೆಂಗಳೂರಲ್ಲಿ ಚಳಿ ಎಲ್ಲಿ..?!ನವೆಂಬರ್ ಮುಗೀತಾ ಬಂತು, ಬೆಂಗಳೂರಲ್ಲಿ ಚಳಿ ಎಲ್ಲಿ..?!

It is 15 degree celsius in Bengaluru! Chill weather will continue till February: IMD

ರಾಜಧಾನಿಯಲ್ಲಿ ಈ ಚಳಿಯ ವಾತಾವರಣ ಜನವರಿ ಮತ್ತು ಫೆಬ್ರವರಿಯ ಆರಂಭದವರೆಗೂ ಹೀಗೇ ಮುಂದುವರಿಯಲಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.

English summary
According to Indian Meteorological Department (IMD) data, on Dec 19th, Bengaluru saw a minimum temperature of 15 degree Celsius. And IMD officials said, the chill weather will be continued till February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X