ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮಹಾಮಾರಿ ಹಂದಿಜ್ವರಕ್ಕೆ ಭಾನುವಾರ 4 ಬಲಿ

|
Google Oneindia Kannada News

ಮಂಗಳೂರು, ಫೆ. 8: ಮಹಾಮಾರಿ ಎಚ್ 1 ಎನ್ 1ಗೆ ಭಾನುವಾರ ನಗರದಲ್ಲಿ 4 ಜನ ಬಲಿಯಾಗಿದ್ದಾರೆ. ಹಂದಿಜ್ವರ ಸೋಂಕಿನಿಂದ ಇಬ್ಬರು ಪುರುಷ ಮತ್ತು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಯನಗರ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ರಾಮಕೃಷ್ಣ(49) ಸಾವನ್ನಪ್ಪಿದ್ದಾರೆ. ಬಿಪಿ, ಶುಗರ್ ಸಮಸ್ಯೆಯಿಂದ ಆಸ್ಪತ್ರಗೆ ದಾಖಲಾಗಿದ್ದ ರಾಮಕೃಷ್ಣ ಮೃತಪಟ್ಟಿದ್ದಾರೆ. ಕೃಷ್ಣವೇಣಿ ಎಂಬ ಮಹಿಳೆಯೂ ಹಂದಿಜ್ವರಕ್ಕೆ ಬಲಿಯಾಗಿದ್ದಾರೆ.[ಬೆಂಗಳೂರು: ವೈಟ್ ಫೀಲ್ಡ್ ನಲ್ಲಿ ಹಂದಿಜ್ವರಕ್ಕೆ ಮೊದಲ ಬಲಿ]

bengaluru

ಉಳಿದಂದೆ ಹೆಸರಘಟ್ಟ ವ್ಯಾಪ್ತಿಯಲ್ಲಿ ಮುನಿಯಲ್ಲಪ್ಪ ಸಹ ಎಚ್ 1 ಎನ್ 1 ಸೋಂಕಿಗೆ ಬಲಿಯಾಗಿದ್ದಾರೆ. ಜ್ವರದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಜಯಲಕ್ಷ್ಮೀ ಸಹ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ರಕ್ತದೊತ್ತಡ, ಸಕ್ಕರೆ ಕಾಯಿಲೆ, ಆಸ್ತಮಾದಂಥ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳಲ್ಲಿ ನಂತರ ಎಚ್ 1 ಎನ್ 1 ಸೋಂಕು ಕಾಣಿಸಿಕೊಂಡಿತ್ತು. ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ.[ಎಚ್1ಎನ್ 1 ಲಕ್ಷಣಗಳೇನು? ಮುಚ್ಚರಿಕೆ ವಿಧಾನಗಳೆನು?]

ರಾಜ್ಯದಲ್ಲಿ 9 ಸಾವು
ಹಂದಿಜ್ವರ ಸೋಂಕಿನಿಂದ ರಾಜ್ಯದಲ್ಲಿ ಒಟ್ಟು 9 ಜನ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಎಚ್.ಸಿ.ರಮೇಶ್ ತಿಳಿಸಿದ್ದಾರೆ. ಫೆಬ್ರವರಿ 9 ರಂದು ಆರೋಗ್ಯ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು ಅಂಕಿ ಅಂಶಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಚಳಿಯ ವಾತಾವರಣ ಇನ್ನು ಕೆಲ ದಿನ ಮುಂದುವರಿಯಲಿರುವುದರಿಂದ ಜನರು ಎಚ್ಚರವಾಗಿರಬೇಕು ಮತ್ತು ಮೂಗಿಗೆ ಬಟ್ಟೆ ಕಟ್ಟಿಕೊಳ್ಳುವುದು ಒಳ್ಳೆಯದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

English summary
The IT capital on Sunday reported the 4 death due to swine flu. A 35-year old men from Jyanagar succumbing to the H1N1 virus at a private hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X