• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಾಹ್ಯಾಕಾಶಕ್ಕೆ ತೆರಳಲಿದ್ದಾಳೆ 'ವ್ಯೋಮಮಿತ್ರ': ಯಾರು ಈ 'ಮಹಿಳೆ'?

|

ಬೆಂಗಳೂರು, ಜನವರಿ 23: ಇಸ್ರೋದ ಮಹತ್ವಾಕಾಂಕ್ಷೆಯ ಮಾನವಸಹಿತ 'ಗಗನಯಾನ' ಯೋಜನೆಗೂ ಮುನ್ನ 'ಮಹಿಳೆ'ಯೊಬ್ಬರು ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. ಆ ಮಹಿಳೆಯ ಹೆಸರು 'ವ್ಯೋಮಮಿತ್ರ'. ಹೆಸರು ವಿಚಿತ್ರವಾಗಿದೆಯಲ್ಲವೇ?

ಅಂದಹಾಗೆ, 'ವ್ಯೋಮಮಿತ್ರ' ಸಂಪೂರ್ಣ ಮನುಷ್ಯಳಲ್ಲ. ಅರ್ಧ ಮಾನವಳಾಗಿರುವ ವ್ಯೋಮಮಿತ್ರಳನ್ನು ಭಾರತದ ಪ್ರಪ್ರಥಮ ಮಾನವಸಹಿತ ಗಗನಯಾನ ಯೋಜನೆಗೂ ಮುನ್ನ ಪರೀಕ್ಷಾರ್ಥ ಸಂಚಾರಗಳಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೋ ಉದ್ದೇಶಿಸಿದೆ.

ಗಗನಯಾತ್ರಿಗಳಿಗೆ 11 ತಿಂಗಳು ರಷ್ಯಾದಲ್ಲಿ ತರಬೇತಿ

ವ್ಯೋಮಮಿತ್ರ ಪದವು ವ್ಯೋಮ (ಬಾಹ್ಯಾಕಾಶ) ಮತ್ತು ಮಿತ್ರ (ಸ್ನೇಹಿತ) ಪದಗಳಿಂದ ಹುಟ್ಟಿಕೊಂಡಿದೆ. ಮಹಿಳಾ ರೋಬೋಟ್ 'ವ್ಯೋಮಮಿತ್ರ', ಬುಧವಾರ ನಡೆದ 'ಮಾನವ ಗಗನಯಾನ ಮತ್ತು ಪರಿಶೋಧನೆ- ಪ್ರಸ್ತುತ ಸವಾಲುಗಳು ಹಾಗೂ ಮುಂದಿನ ಒಲವು' ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಅನುಕರಣೆ ಮಾಡಬಲ್ಲ ವ್ಯೋಮಮಿತ್ರ

ಅನುಕರಣೆ ಮಾಡಬಲ್ಲ ವ್ಯೋಮಮಿತ್ರ

ಈ ರೋಬೋಟ್ ಮಹಿಳೆ ಮಾತನಾಡಬಲ್ಲಳು. ಇತರೆ ಮನುಷ್ಯರನ್ನು ಗುರುತಿಸಬಲ್ಲಳು. ಬಾಹ್ಯಾಕಾಶದಲ್ಲಿ ಗಗನಯಾನಿಗಳು ಮಾಡುವುದನ್ನು ಅನುಕರಣೆ ಮಾಡಬಲ್ಲಳು. ಅಷ್ಟೇ ಅಲ್ಲ, ಸಂಭಾಷಣೆ ನಡೆಸಬಲ್ಲಳು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಲ್ಲಳು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಗಗನಯಾನಿ ಮಾನವ ರೋಬೋಟ್ ಅನ್ನು ಅಭಿವೃದ್ಧಿಪಡಿಸಿದೆ.

ಹಾಯ್ ನಾನು ವ್ಯೋಮಮಿತ್ರ

ಹಾಯ್ ನಾನು ವ್ಯೋಮಮಿತ್ರ

'ಹಾಯ್ ನಾನು ವ್ಯೋಮಮಿತ್ರ, ಮೊದಲ ಅರ್ಧಮಾನವ ಮಾದರಿ. ಮೊದಲ ಮಾನವರಹಿತ ಗಗನಯಾನ ಯೋಜನೆಗಾಗಿ ನನ್ನನ್ನು ಸಿದ್ಧಪಡಿಸಲಾಗಿದೆ. ಮುನ್ನೆಚ್ಚರಿಕೆ ನೀಡುವ ಮತ್ತು ಜೀವರಕ್ಷಣೆಯ ಕಾರ್ಯಗಳಲ್ಲಿ ಸಹಕರಿಸುತ್ತೇನೆ. ಸ್ವಿಚ್ ಪ್ಯಾನಲ್ ಸೇರಿದಂತೆ ಅನೇಕ ಚಟುವಟಿಕೆಗಳನ್ನು ನಡೆಸಬಲ್ಲದೆ' ಎಂದು ವ್ಯೋಮಮಿತ್ರ ಹೇಳುತ್ತದೆ.

ಗಗನಯಾನಿಗಳಿಗೆ ಮೈಸೂರಲ್ಲಿ ಅಡುಗೆ ತಯಾರಿ: ಏನೇನಿರಲಿದೆ ಮೆನು?

ಗಗನಯಾನಿಗಳಿಗೆ ಉತ್ತರ ನೀಡಬಲ್ಲದು

ಈ ಮಹಿಳಾ ರೋಬೋಟ್ ಗಗನಯಾನಿ ಸಿಬ್ಬಂದಿಯ ಚಟುವಟಿಕೆಗಳನ್ನು ಅನುಕರಿಸಬಲ್ಲದು ಮತ್ತು ಅವರನ್ನು ಗುರುತಿಸಿ ಅವರ ಪ್ರಶ್ನೆಗಳಿಗೆ ಉತ್ತರವನ್ನು ಸಹ ನೀಡಬಲ್ಲದು. ವ್ಯೋಮಮಿತ್ರ ಅರ್ಧ ಮಾನವಸ್ವರೂಪಿ. ಏಕೆಂದರೆ ಆಕೆಗೆ ಕಾಲುಗಳಿಲ್ಲ. ಅದು ಮುಂದೆ ಮತ್ತು ಅಕ್ಕಪಕ್ಕ ಮಾತ್ರ ಬಾಗಬಲ್ಲದು. ಅದು ಕೆಲವು ಪ್ರಯೋಗಗಳನ್ನು ನಡೆಸಬಲ್ಲದು ಮತ್ತು ಇಸ್ರೋ ಕಮಾಂಡ್ ಸೆಂಟರ್ ಜತೆ ನಿರಂತರ ಸಂಪರ್ಕದಲ್ಲಿ ಇರಬಲ್ಲದು ಎಂದು ಇಸ್ರೋ ವಿಜ್ಞಾನಿ ಸ್ಯಾಮ್ ದಯಾಳ್ ತಿಳಿಸಿದರು.

ಎರಡು ಮಾನವರಹಿತ ಗಗನಯಾನ

ಎರಡು ಮಾನವರಹಿತ ಗಗನಯಾನ

2022ರಲ್ಲಿ ಮಾನವಸಹಿತ ಗಗನಯಾನ ಯೋಜನೆಯನ್ನು ನಡೆಸಲು ಇಸ್ರೋ ಗುರಿ ನಿಗದಿಮಾಡಿದೆ. ಅದಕ್ಕೂ ಮುನ್ನ ಈ ವರ್ಷದ ಡಿಸೆಂಬರ್ ಮತ್ತು 2021ರ ಜೂನ್‌ನಲ್ಲಿ ಎರಡು ಮಾನವರಹಿತ ಗಗನಯಾನ ಯೋಜನೆಗಳನ್ನು ನಡೆಸಲಿದೆ. ಇದು ಬಾಹ್ಯಾಕಾಶಕ್ಕೆ ಇಸ್ರೋ ಮನುಷ್ಯರನ್ನು ಕಳುಹಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ನೆರವಾಗಲಿದೆ ಮತ್ತು ಅಂತಿಮ ಮಾನವಸಹಿತ ಬಾಹ್ಯಾಕಾಶ ಯೋಜನೆಯ ವಿವಿಧ ವ್ಯವಸ್ಥೆಗಳ ಪರೀಕ್ಷೆಗೂ ಸಹಕಾರಿಯಾಗಲಿದೆ.

ಪರೀಕ್ಷಾರ್ಥ ಬಾಹ್ಯಾಕಾಶ ಹಾರಾಟದಲ್ಲಿ ವ್ಯೋಮಮಿತ್ರ ಭಾಗವಹಿಸಲಿದ್ದಾಳೆ. ಆದರೆ 2022ರಲ್ಲಿ ನಡೆಯಲಿರುವ ಐತಿಹಾಸಿಕ ಮಾನವಸಹಿತ ಗಗನಯಾನ ಯೋಜನೆಯಲ್ಲಿ ಗಗನಯಾತ್ರಿಗಳ ಜತೆಗೂ ವ್ಯೋಮಮಿತ್ರ ತೆರಳಲಿದ್ದಾಳೆಯೇ ಎನ್ನುವುದು ಖಚಿತವಾಗಿಲ್ಲ.

2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!

English summary
ISRO has developed half humanoid woman robot 'Vyommitra'. She will be a part of testing unamanned space missions before manned spaceflight mission 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X