ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಂದ್ರನಲ್ಲಿ ಸೌರ ಜ್ವಾಲೆ ಪತ್ತೆ ಹಚ್ಚಿದ ಚಂದ್ರಯಾನ 2ರ ಆರ್ಬಿಟರ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 11: ಚಂದ್ರನ ಸುತ್ತ ಸುತ್ತುತ್ತಿರುವ ಚಂದ್ರಯಾನ-2ರ ಆರ್ಬಿಟರ್ ನೌಕೆಯು ಸರಣಿ ಸೌರ ಜ್ವಾಲೆಗಳನ್ನು ಪತ್ತೆಹಚ್ಚಿದೆ. ಸೆ. 30ರ ಮಧ್ಯರಾತ್ರಿಯಿಂದ 24 ಗಂಟೆಗಳ ಅವಧಿಯಲ್ಲಿ ಆರ್ಬಿಟರ್ ಇವುಗಳನ್ನು ಗ್ರಹಿಸಿದ್ದು, ಇದು ಚಂದ್ರನ ಮೇಲ್ಮೈ ಯಾವುದರಿಂದ ಸೃಷ್ಟಿಯಾಗಿದೆ ಎಂಬುದನ್ನು ಅಧ್ಯಯನ ನಡೆಸಲು ಮಹತ್ವದ ಸುಳಿವುಗಳನ್ನು ನೀಡಲಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ-2 ಆರ್ಬಿಟರ್‌ನ ಸೋಲಾರ್ ಎಕ್ಸ್‌-ರೇ ಮಾನಿಟರ್ (ಎಕ್ಸ್‌ಎಸ್‌ಎಂ) ಸಹಾಯದಿಂದ ಸೌರ ಜ್ವಾಲೆಗಳನ್ನು (ಸೂರ್ಯನ ಮೇಲ್ಮೈನಲ್ಲಿ ಶಕ್ತಿಯ ಹಠಾತ್ ಸ್ಫೋಟ) ಪತ್ತೆಹಚ್ಚಿದೆ. ಚಂದ್ರನ ಮೇಲೆ ಖನಿಜಗಳ ಅಸ್ತಿತ್ವ ವನ್ನು ಅಂತಿಮವಾಗಿ ಪರೀಕ್ಷಿಸುವ ಗುರಿ ಹೊಂದಿರುವ ನೌಕೆಯ ಸಾಮರ್ಥ್ಯವನ್ನು ಇದು ಸಾಬೀತುಪಡಿಸಿದೆ.

ಚಂದ್ರನಲ್ಲಿ ವಿಶಿಷ್ಟ ಕಣಗಳನ್ನು ಪತ್ತೆಹಚ್ಚಿದ ಚಂದ್ರಯಾನದ ಆರ್ಬಿಟರ್ಚಂದ್ರನಲ್ಲಿ ವಿಶಿಷ್ಟ ಕಣಗಳನ್ನು ಪತ್ತೆಹಚ್ಚಿದ ಚಂದ್ರಯಾನದ ಆರ್ಬಿಟರ್

ಚಂದ್ರ ಮತ್ತು ಸೂರ್ಯನ ಪ್ರಸ್ತುತ ಇರುವ ಭಾಗದಲ್ಲಿ ಆರ್ಬಿಟರ್ ಸಾಗುತ್ತಿರುವ ಕೋನವು ಅನುಕೂಲಕರವಾಗಿಲ್ಲದೆ ಇರುವುದರಿಂದ ಆರ್ಬಿಟರ್‌ನ ಗ್ರಹಿಕೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ಆಗುತ್ತಿಲ್ಲ ಎಂದು ಇಸ್ರೋ ತಿಳಿಸಿದೆ. ಆದರೂ ಚಂದ್ರಯಾನ ಆರ್ಬಿಟರ್‌ನಲ್ಲಿರುವ ಪ್ರಮುಖ ಸಾಧನವೊಂದು ಹೊಸ ಅಂಶ ಪತ್ತೆ ಮಾಡಿರುವುದು ಮಹತ್ವದ ವಿಚಾರವಾಗಿದೆ.

ವಿಕಿರಣಗಳ ಬಿಡುಗಡೆಗೆ ಕಾದಿರುವ ಆರ್ಬಿಟರ್

ವಿಕಿರಣಗಳ ಬಿಡುಗಡೆಗೆ ಕಾದಿರುವ ಆರ್ಬಿಟರ್

ಚಂದ್ರನ ಮೇಲೆ ಇರುವ ವಸ್ತುಗಳನ್ನು ಪರಿಶೀಲಿಸುವುದು ಚಂದ್ರಯಾನದ ಪ್ರಮುಖ ಉದ್ದೇಶಗಳಲ್ಲಿ ಒಂದು. ಇದನ್ನು ಅತ್ಯಂತ ಚಾಣಾಕ್ಷತೆಯಿಂದ ಚಂದ್ರಯಾನ-2 ನಿಭಾಯಿಸಲಿದೆ.

ಚಂದ್ರನ ಮೇಲೆ ಹರಡುವ ವಿಕಿರಣಗಳನ್ನು ಸೂರ್ಯ ಬಿಡುಗಡೆ ಮಾಡುವುದಕ್ಕೆ ಆರ್ಬಿಟರ್ ಕಾಯಲಿದೆ. ಈ ವಿಕಿರಣಗಳು ಚಂದ್ರನಿಗೆ ಅಪ್ಪಳಿಸಿದಾಗ ಅದರ ಮೇಲೆ ಇರುವಂತಹ ಯಾವುದೇ ಅಂಶಗಳ ಅಣುಗಳನ್ನು ಪ್ರಚೋದಿಸುತ್ತದೆ (ಅಣುಗಳು ತನ್ನ ಎಲೆಕ್ಟ್ರಾನ್‌ಗಳು ಹೆಚ್ಚುವರಿ ಶಕ್ತಿ ಪಡೆದುಕೊಂಡಾಗ ಉತ್ತೇಜಿತಗೊಳ್ಳುತ್ತವೆ).

ಸೋಲೊಪ್ಪಿಕೊಳ್ಳುವ ಮಾತೇ ಇಲ್ಲ: ಪ್ರಯತ್ನ ಮುಂದುವರಿಸಿದ ಇಸ್ರೋಸೋಲೊಪ್ಪಿಕೊಳ್ಳುವ ಮಾತೇ ಇಲ್ಲ: ಪ್ರಯತ್ನ ಮುಂದುವರಿಸಿದ ಇಸ್ರೋ

ಎಕ್ಸ್‌ರೇ ವಿಕಿರಣ ಅಧ್ಯಯನ

ಎಕ್ಸ್‌ರೇ ವಿಕಿರಣ ಅಧ್ಯಯನ

ಅಣುಗಳು ತಮ್ಮ 'ನೆಲೆ'ಗೆ ಮರಳುವಾಗ ಅಥವಾ ಪ್ರಚೋದಿತವಲ್ಲದ ಸ್ಥಿತಿಯಲ್ಲಿ ಶಕ್ತಿ ಮತ್ತು ಎಕ್ಸ್‌ ರೇಗಳನ್ನು ಬಿಡುಗಡೆ ಮಾಡುತ್ತವೆ. ವಿಶೇಷವೆಂದರೆ ಇಲ್ಲಿರುವ ಪ್ರತಿ ಅಂಶಗಳಲ್ಲಿನ ಅಣುಗಳು ತಮ್ಮದೇ ವಿಭಿನ್ನ ಗುಣದ ಎಕ್ಸ್‌ರೇಗಳನ್ನು ವಿಸರ್ಜಿಸುತ್ತವೆ.

ಚಂದ್ರಯಾನ-2ನಲ್ಲಿರುವ ಮತ್ತೊಂದು ಸಾಧನವಾದ ದಿ ಚಂದ್ರಯಾನ 2 ಲಾರ್ಜ್ ಏರಿಯಾ ಸಾಫ್ಟ್ ಎಕ್ಸ್‌ ರೇ ಸ್ಪೆಕ್ಟ್ರೋಮೀಟರ್ (ಕ್ಲಾಸ್ ಪೇಲೋಡ್) ಈ ಎಕ್ಸ್‌ ರೇ ವಿಸರ್ಜನೆಗಳನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಚಂದ್ರನ ಮೇಲಿರುವ ವಸ್ತುಗಳನ್ನು ಗುರುತಿಸಬಲ್ಲದು.

ಸೂರ್ಯನ ಎಕ್ಸ್‌ರೇ ಅಧ್ಯಯನ

ಸೂರ್ಯನ ಎಕ್ಸ್‌ರೇ ಅಧ್ಯಯನ

ಅಮೆರಿಕದ ಉಪಗ್ರಹ ವ್ಯವಸ್ಥೆಯೊಂದು ತೆಗೆದಿರುವ ಚಿತ್ರಗಳಿಗೆ ಹೋಲಿಸಿದರೆ ಇಸ್ರೋದ ಎಕ್ಸ್‌ಎಸ್‌ಎಂ ಹೆಚ್ಚು ಪರಿಣಾಮಕಾರಿಯಾಗಿ ಸೂರ್ಯನ ಎಕ್ಸ್‌ರೇ ವಿಸರ್ಜನೆಯಲ್ಲಿನ ಏರಿಳಿತಗಳನ್ನು ಗುರುತಿಸಬಲ್ಲದು. ಮುಂದಿನ ದಿನಗಳಲ್ಲಿ ಸೂರ್ಯ, ಭೂಮಿ ಮತ್ತು ಆರ್ಬಿಟರ್ ಹೆಚ್ಚು ಅನುಕೂಲಕರ ಸ್ಥಿತಿಯಲ್ಲಿ ಇದ್ದಾಗ ಇದೇ ರೀತಿಯ ಪರೀಕ್ಷೆಗಳನ್ನು ನಡೆಸಬಹುದಾಗಿದೆ.

ಅತ್ಯಂತ ಸ್ಪಷ್ಟ ಚಿತ್ರ

ಅತ್ಯಂತ ಸ್ಪಷ್ಟ ಚಿತ್ರ

ಇತ್ತೀಚೆಗೆ ಆರ್ಬಿಟರ್ ತೆಗೆದ ಚಿತ್ರವನ್ನು ಇಸ್ರೋ ಬಿಡುಗಡೆ ಮಾಡಿತ್ತು. ಇದು ಚಂದ್ರಯಾನ-2ದ ಆರ್ಬಿಟರ್ ತೆಗೆದ ಅಧಿಕ ರೆಸೊಲ್ಯೂಷನ್‌ನ ಚಿತ್ರವನ್ನು ವಿಶ್ಲೇಷಿಸಿರುವ ನಾಸಾ ಕೂಡ ಚಂದ್ರನ ವಿಷ್ಯುವಲ್ ಡಾಟಾಸೆಟ್‌ಅನ್ನು ಬಿಡುಗಡೆ ಮಾಡಿದೆ. ಚಂದ್ರಯಾನ-2 ನೌಕೆಯಲ್ಲಿರುವ ಆರ್ಬಿಟರ್ ಹೈ ರೆಸೊಲ್ಯೂಷನ್ ಕ್ಯಾಮೆರಾ (ಓಎಚ್ಆರ್‌ಸಿ) ಚಂದ್ರನ ಅತ್ಯಧಿಕ ಗುಣಮಟ್ಟದ ಚಿತ್ರಗಳನ್ನು ಒದಗಿಸಲಿದೆ. ಓಎಚ್‌ಆರ್‌ಸಿ ತೆಗೆದ ಚಂದ್ರನ ಚಿತ್ರವು ಅತ್ಯಂತ ಸ್ಪಷ್ಟವಾದ ಚಿತ್ರ ಎಂದು ಇಸ್ರೋ ತಿಳಿಸಿದೆ.

ನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರ

English summary
ISRO's Chandrayaan 2 orbiter catches solar flares includes X rays of the sun on the moon surface.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X