ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕ್ರಂ ಲ್ಯಾಂಡರ್ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ ಇಸ್ರೋ

|
Google Oneindia Kannada News

Recommended Video

Chandrayaan 2 : ಲ್ಯಾಂಡರ್ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ ಇಸ್ರೋ | Oneindia Kannada

ಬೆಂಗಳೂರು, ಸೆಪ್ಟೆಂಬರ್ 10: ಚಂದ್ರಯಾನ-2 ಯೋಜನೆಯ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿಯೇ ಇಳಿದಿದೆ. ಅದು ಮುರಿದುಹೋಗಿಲ್ಲ. ಒಂದು ಭಾಗ ಮಾತ್ರ ಬಾಗಿದಂತಾಗಿದೆ ಎಂಬ ವರದಿಯನ್ನು ಖಚಿಪಡಿಸಲು ಇಸ್ರೋ ನಿರಾಕರಿಸಿದೆ.

ಈ ಮೂಲಕ ವಿಕ್ರಂ ಲ್ಯಾಂಡರ್‌ನ ಸುರಕ್ಷತೆ ಹಾಗೂ ಕಾರ್ಯಾಚರಣೆಗಳ ಬಗ್ಗೆ ಗೊಂದಲ ಹೆಚ್ಚಾಗಿದೆ. ವಿಕ್ರಂ ಲ್ಯಾಂಡರ್ ಹಾನಿಗೊಳಗಾಗದೆ ಚಂದ್ರನ ಮೇಲೆ ಇಳಿದಿದೆ. ಅದರ ಸಂಪರ್ಕ ಮಾತ್ರ ಸಾಧ್ಯವಾಗುತ್ತಿಲ್ಲ ಎಂಬ ವರದಿ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂತಸ ನೀಡಿತ್ತು. ಭಾರತೀಯರು ಈ ಸುದ್ದಿ ಕೇಳಿ ಖುಷಿಪಟ್ಟಿದ್ದರು. ಆದರೆ ಲ್ಯಾಂಡರ್ ಚಂದ್ರನ ಮೇಲ್ಮೈಮೇಲೆ ಯಾವುದೇ ಹಾನಿಯಾಗದೆ ಮಲಗಿಕೊಂಡಿದೆ ಎಂಬ ಹೇಳಿಕೆಯನ್ನು ಇಸ್ರೋ ಖಚಿತಪಡಿಸಿಲ್ಲ.

ಚಂದ್ರಯಾನ 2: ಇಸ್ರೋದಿಂದ ಮತ್ತೊಂದು ಸಂತಸದ ಸುದ್ದಿ!ಚಂದ್ರಯಾನ 2: ಇಸ್ರೋದಿಂದ ಮತ್ತೊಂದು ಸಂತಸದ ಸುದ್ದಿ!

'ಪಿಟಿಐ ಸುದ್ದಿಸಂಸ್ಥೆ ವರದಿಯಲ್ಲಿನ ಮಾಹಿತಿ ಇನ್ನೂ ಖಚಿತವಾಗಿಲ್ಲ. ನಾವು ಕೂಡ ಅದನ್ನು ಖಚಿಪಡಿಸಿಲ್ಲ' ಎಂದು ಇಸ್ರೋ ಅಧ್ಯಕ್ಷರ ಕಚೇರಿ ಸ್ಪಷ್ಟಪಡಿಸಿರುವುದಾಗಿ ಮಂಗಳವಾರ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಲ್ಯಾಂಡರ್ ಸುರಕ್ಷಿತವಾಗಿದೆ

ಲ್ಯಾಂಡರ್ ಸುರಕ್ಷಿತವಾಗಿದೆ

"ಉದ್ದೇಶಿತ ಸ್ಥಳದ ಬಳಿಯಲ್ಲೇ ವಿಕ್ರಂ ಲ್ಯಾಂಡ್ ಆಗಿದ್ದು, ಅದು ಮುರಿದುಹೋಗಿಲ್ಲ. ಮುರಿದು ಹೋಗಿದ್ದರೆ ಚಿತ್ರದಲ್ಲಿ ಹಲವು ಬಿಡಿ ಭಾಗಗಳು ಕಾಣಿಸಬೇಕಿತ್ತು. ಆದರೆ ಅದರಲ್ಲಿ ಲ್ಯಾಂಡರ್ ಮಾತ್ರವೇ ಕಾಣಿಸುತ್ತಿದೆ. ಅದರ ಕಾಲಿನ ಒಂದು ಭಾಗ ಬಾಗಿದಂತೆ ಆಗಿದೆ ಅಷ್ಟೇ" ಎಂದು ಇಸ್ರೋ ಅಧಿಕಾರಿ ಹೇಳಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿತ್ತು.

ಶೇ 95ರಷ್ಟು ಯಶಸ್ವಿಯಾಗಿದೆ

ಶೇ 95ರಷ್ಟು ಯಶಸ್ವಿಯಾಗಿದೆ

'ಆರ್ಬಿಟರ್‌ನ ಹೈ ರೆಸೊಲ್ಯೂಷನ್ ಕ್ಯಾಮೆರಾ ತೆಗೆದಿರುವ ಚಿತ್ರದಲ್ಲಿ ವಿಕ್ರಂ ಲ್ಯಾಂಡರ್ ಪತ್ತೆಯಾಗಿದೆ. ಅದರ ವಿನಾ ಪ್ರಸ್ತುತ ನಮಗೆ ಲ್ಯಾಂಡರ್ ಕುರಿತು ಯಾವುದೇ ಮಾಹಿತಿ ಇಲ್ಲ. ಅದರೊಂದಿಗೆ ಪುನಃ ಸಂಪರ್ಕ ಸಾಧಿಸಲು ನಾವು ಪ್ರಯತ್ನಿಸುತ್ತಲೇ ಇದ್ದೇವೆ. ಲ್ಯಾಂಡರ್ ಚಂದ್ರನ ಮೇಲೆ ಅಪ್ಪಳಿಸಿದ್ದರೂ ನಮ್ಮ ಯೋಜನೆಯ ಶೇ 95ರಷ್ಟು ಯಶಸ್ವಿಯಾಗಿದೆ' ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದರು.

ಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆ

ಸಂಪರ್ಕ ಸಾಧ್ಯತೆ ತೀರಾ ಕಡಿಮೆ

ಸಂಪರ್ಕ ಸಾಧ್ಯತೆ ತೀರಾ ಕಡಿಮೆ

ಲ್ಯಾಂಡರ್ ಜತೆ ಸಂಪರ್ಜ ಸಾಧಿಸಲು ಸಾಧ್ಯ ಎಂಬ ಭರವಸೆಗಳು ಕ್ಷೀಣಿಸಿವೆ. ಅದು ಸಂಪರ್ಕಕ್ಕೆ ಸಿಗುವ ಸಾಧ್ಯತೆ ಕಡಿಮೆ ಮತ್ತು ತೀರಾ ಕಡಿಮೆ. ಹಾಗೆಂದು ನಾವು ಪ್ರಯತ್ನ ನಡೆಸುವುದಿಲ್ಲ ಎಂದರ್ಥವಲ್ಲ. ಪ್ರತಿಬಾರಿ ಆರ್ಬಿಟರ್ ಅದನ್ನು ಹಾದು ಹೋದಾಗಲೂ ಸಂಪರ್ಕ ಸಾಧಿಸಲು ಪ್ರಯತ್ನ ನಡೆಸುತ್ತೇವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದರು.

ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?ಚಂದ್ರಯಾನ ಯೋಜನೆಗಳಲ್ಲಿ ಯಶಸ್ವಿಯಾಗಿರುವುದು ಎಷ್ಟು ಗೊತ್ತೇ?

ನಿಜಕ್ಕೂ ಲ್ಯಾಂಡರ್‌ಗೆ ಹಾನಿ ಆಗಿದೆಯೇ?

ನಿಜಕ್ಕೂ ಲ್ಯಾಂಡರ್‌ಗೆ ಹಾನಿ ಆಗಿದೆಯೇ?

ಇಸ್ರೋದ ವಿಜ್ಞಾನಿಗಳು ಆರ್ಬಿಟರ್ ಕಳುಹಿಸಿರುವ ಚಿತ್ರಗಳಿಂದ ಇನ್ನೂ ಉತ್ತಮ ಡೇಟಾ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಲ್ಯಾಂಡರ್‌ನ ಬಾಗಿದಂತಿರುವ ಕಾಲು ಸೂರ್ಯನ ಕಿರಣಗಳ ನೆರಳಿನಿಂದಲೂ ಹಾಗೆ ಕಾಣಿಸುತ್ತಿರಬಹುದು. ಹೀಗಾಗಿ ಕಿರಣಗಳ ಕೋನವು ಬದಲಾದ ಚಿತ್ರವನ್ನು ಪಡೆದುಕೊಂಡು ಅದಕ್ಕೆ ಹಾನಿಯಾಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಲು ಕಾಯುತ್ತಿದ್ದಾರೆ. ಇದಕ್ಕೆ ಇನ್ನೂ ಒಂದೆರಡು ದಿನಗಳು ಬೇಕಾಗಬಹುದು. ಇದು ಚಂದ್ರನ ಕಕ್ಷೆಯು ಸೂರ್ಯನ ಸುತ್ತ ಚಲಿಸುವ ಚಲನೆಯನ್ನು ಅವಲಂಬಿಸಿರುತ್ತದೆ.

ಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರ

English summary
ISRO chief office said it has not yet confirmation over Lander Vikram intact, lying in tilted position on moon surface.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X