• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಸ್ರೋದಿಂದ ಮಾರ್ಚ್ 5ರಂದು ಜಿಐಸ್ಯಾಟ್-1 ಉಪಗ್ರಹ ಉಡಾವಣೆ

|

ಬೆಂಗಳೂರು, ಫೆಬ್ರವರಿ 27: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾರ್ಚ್ 5ರಂದು ಭೌಗೋಳಿಯ ಚಿತ್ರ ಉಪಗ್ರಹ 'ಜಿಐಸ್ಯಾಟ್-1' ಅನ್ನು ಉಡಾವಣೆ ಮಾಡಲಿದೆ. ಭೂಸ್ಥಾಯಿ ಉಪಗ್ರಹ ಉಡಾವಣಾ ವಾಹನ ಜಿಎಸ್‌ಎಲ್‌ವಿ ಎಫ್ 10 ಮೂಲಕ ಈ ಉಡಾವಣೆ ನಡೆಯಲಿದೆ.

ಶ್ರೀಹರಿಕೋಟಾದ ಸತೀಶ್ ದವನ್ ಬಾಹ್ಯಾಕಾಶ ಕೇಂದ್ರದಿಂದ ಮಾರ್ಚ್ 5ರ ಸಂಜೆ 5.43ಕ್ಕೆ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಉಡಾವಣೆ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.

ಬಾಹ್ಯಾಕಾಶಕ್ಕೆ ತೆರಳಲಿದ್ದಾಳೆ 'ವ್ಯೋಮಮಿತ್ರ': ಯಾರು ಈ 'ಮಹಿಳೆ'?

2,275 ಕೆ.ಜಿ. ತೂಕದ ಜಿಐಸ್ಯಾಟ್-1 ಕ್ಷಿಪ್ರ ಭೂ ವೀಕ್ಷಣಾ ಗುಣವನ್ನು ಹೊಂದಿದ್ದು, ಜಿಎಸ್‌ಎಲ್‌ವಿ-10 ಉಡಾವಣಾ ವಾಹನದ ಮೂಲಕ ಭೂಸ್ಥಾಯಿ ವರ್ಗಾವಣೆ ಕಕ್ಷೆಗೆ ಸೇರ್ಪಡೆಗೊಳ್ಳಲಿದೆ.

ಭೂಸ್ಥಾಯಿ ಕಕ್ಷೆಯಿಂದ ಕಾರ್ಯಾಚರಣೆ ನಡೆಸಲಿರುವ ಜಿಐಸ್ಯಾಟ್-1 ಭಾರತ ಉಪಖಂಡದಲ್ಲಿ ಮೋಡರಹಿತ ವಾತಾವರಣದಲ್ಲಿ ಆಗಾಗ್ಗೆ ವಿರಾಮಗಳ ನಡುವೆ ರಿಯಲ್ ಟೈಮ್ ಗ್ರಹಿಕೆಯನ್ನು ಮಾಡಲಿದೆ.

ಫ್ರೆಂಚ್ ಗಯಾನಾದಿಂದ ನಭಕ್ಕೆ ಚಿಮ್ಮಿದ ಇಸ್ರೋದ ಉಪಗ್ರಹ

4 ಮೀಟರ್ ವ್ಯಾಸದ ಚಾವಣಿಯಾಕಾರದ ಪೇಲೋಡ್ ಮೊದಲ ಬಾರಿಗೆ ಜಿಎಸ್ಎಲ್‌ವಿ ಮೂಲಕ ಉಡಾವಣೆಗೊಳ್ಳುತ್ತಿದೆ. ಇದು ಒಟ್ಟಾರೆಯಾಗಿ ಜಿಎಸ್‌ಎಲ್‌ವಿ ವಾಹನದ 14ನೇ ಹಾರಾಟವಾಗಿದೆ. ಜಿಐಸ್ಯಾಟ್ ಉಪಗ್ರಹವು ಏಳ ವರ್ಷಗಳ ಜೀವಿತಾವಧಿ ಹೊಂದಿದೆ. ಇದು ಬಹುವರ್ಣಪಟಲದ ಐದು ಬಗೆಯ ಕ್ಯಾಮೆರಾಗಳನ್ನು ಹೊಂದಿದ್ದು, ದೇಶದ ಬಹುತೇಕ ಭಾಗಗಳ ರಿಯಲ್ ಟೈಮ್ ಚಿತ್ರಗಳನ್ನು ರವಾನಿಸುತ್ತದೆ.

ಗಗನಯಾತ್ರಿಗಳಿಗೆ 11 ತಿಂಗಳು ರಷ್ಯಾದಲ್ಲಿ ತರಬೇತಿ

ಪ್ರತಿ ಐದು ನಿಮಿಷಕ್ಕೆ ಫೀಲ್ಡ್ ಇಮೇಜ್‌ಗಳನ್ನು ಕ್ಲಿಕ್ಕಿಸುವ ಕ್ಯಾಮೆರಾಗಳು, ಪ್ರತಿ 30 ನಿಮಿಷಕ್ಕೆ 50 ಮೀಟರ್ ರೆಸೊಲ್ಯೂಷನ್‌ನಲ್ಲಿ ಭಾರತದ ಪ್ರತಿ ಭೂ ಪ್ರದೇಶದ ಚಿತ್ರವನ್ನು ತೆಗೆಯುತ್ತದೆ. ಈ ಉಪಗ್ರಹವು ಪ್ರಾಕೃತಿಕ ವಿಕೋಪ, ಯುದ್ಧ ಮುಂತಾದ ಸಂದರ್ಭಗಳಲ್ಲಿ ಮಹತ್ವದ ಚಿತ್ರಗಳನ್ನು ರವಾನಿಸಲಿದೆ.

English summary
ISRO will launch geo imaging satellite GISAT-1 with its geosynchronous Satellite Launch Vehicle on March 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X