ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ವಿಕ್ರಂ'ನ ಕುತೂಹಲದಲ್ಲಿದ್ದವರಿಗೆ ಇಸ್ರೋದಿಂದ ಹೊಸ ಟ್ವೀಟ್

|
Google Oneindia Kannada News

Recommended Video

ಯಶಸ್ವಿಯಾಗುತ್ತಾ ಚಂದ್ರಯಾನ..? | Chandrayaan 2 | Oneindia Kannada

ಬೆಂಗಳೂರು, ಸೆಪ್ಟೆಂಬರ್ 18: ವಿಕ್ರಂ ಲ್ಯಾಂಡರ್ ಸಂಪರ್ಕಕ್ಕೆ ಸಿಕ್ಕುತ್ತಾ ಎಂದು ಕುತೂಹಲದಿಂದ ಕಾಯುತ್ತಿರುವ ಭಾರತೀಯರಿಗೆ ಇಸ್ರೋ ಹೊಸ ಟ್ವೀಟ್ ಮೂಲಕ ಧನ್ಯವಾದ ಹೇಳಿದೆ.

ನಮ್ಮನ್ನು ಉತ್ತೇಜಿಸಿದ ಜಗತ್ತಿನಾದ್ಯಂತ ಇರುವ ಭಾರತೀಯರಿಗೆ ಧನ್ಯವಾದ ಎಂದು ಇಸ್ರೋ ಹೇಳಿದೆ.

ಚಂದ್ರಯಾನ: ಇಂದು ಭಾರತಕ್ಕೆ ಸಿಹಿ ಸುದ್ದಿಯ ನಿರೀಕ್ಷೆಚಂದ್ರಯಾನ: ಇಂದು ಭಾರತಕ್ಕೆ ಸಿಹಿ ಸುದ್ದಿಯ ನಿರೀಕ್ಷೆ

'ವಿಕ್ರಂ' ಲ್ಯಾಂಡರ್ ನ ಸಂಪರ್ಕ ಪಡೆಯಲು ಇಸ್ರೋ ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಸೆಪ್ಟೆಂಬರ್ 21 ರೊಳಗೆ ಸಂಪರ್ಕ ಸಿಕ್ಕದೆ ಇದ್ದರೆ, ವಿಕ್ರಂ ಲ್ಯಾಂಡರ್ ನ ಆಯುಷ್ಯ ಮುಗಿದುಹೋಗಲಿದೆ. ಅದಕ್ಕೂ ಮುನ್ನ ಸಂಪರ್ಕ ಸಾಧಿಸಲು ಇಸ್ರೋ ಪ್ರಯತ್ನಿಸಿದ್ದು, ಚಂದ್ರಯಾನದ ಯಶಸ್ಸಿಗಾಗಿ ಹಾರೈಸಿರುವ, ಹಾರೈಸುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸಿದೆ.

ಇಸ್ರೋ ಟ್ವೀಟ್

"ನಮ್ಮೊಂದಿಗೆ ನಿಂತ ನಿಮ್ಮೆಲ್ಲರಿಗೂ ಧನ್ಯವಾದಗಳು. ಜಗತ್ತಿನಾದ್ಯಂತ ಇರುವ ಭಾರತೀಯರ ಈ ಭರವಸೆ ಮತ್ತು ಕನಸುಗಳನ್ನು ನಾವು ಉಳಿಸಿಕೊಂಡು, ಮುಂದುವರೆಸಿಕೊಂಡು ಹೋಗುತ್ತೇವೆ" ಎಂದು ಇಸ್ರೋ ಟ್ವೀಟ್ ಮಾಡಿದೆ.

ವಿಕ್ರಂನ ಪತ್ತೆಗೆ ಹೊರಟ ನಾಸಾದ 'ಪೊಲೀಸ್'ವಿಕ್ರಂನ ಪತ್ತೆಗೆ ಹೊರಟ ನಾಸಾದ 'ಪೊಲೀಸ್'

ವಿಕ್ರಂ ಸಂಪರ್ಕ್ಕೆ ನಾಸಾ ಬೆಂಬಲ

ವಿಕ್ರಂ ಸಂಪರ್ಕ್ಕೆ ನಾಸಾ ಬೆಂಬಲ

ಸೆಪ್ಟೆಂಬರ್ 7 ರಂದು ಶನಿವಾರ ಬೆಳಗ್ಗಿನ ಜಾವ ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ತಲುಪಲು ಇನ್ನು ಕೇವಲ 2.1 ಕಿ.ಮೀ. ಅಂತರವಿದೆ ಎನ್ನುವಾಗ ಸಂಪರ್ಕ ಕಳೆದುಕೊಂಡಿತ್ತು. ಆದರೆ ಲ್ಯಾಂಡರ್ ಸುರಕ್ಷಿತವಾಗಿರುವ ಚಿತ್ರನ್ನು ಆರ್ಬಿಟರ್ ಕಳಿಸಿದ ಮೇಲೆ ಅದು ಸಂಪರ್ಕಕ್ಕೆ ಸಿಗಬಹುದು ಎಂಬ ಆಸೆ ಜೀವ ಪಡೆದಿತ್ತು.

ಇಸ್ರೋದ ಈ ಪ್ರಯತ್ನಕ್ಕೆ ನಾಸಾ(ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಸಹ ಕೈಜೋಡಿಸಿದ್ದು, ಮಂಗಳವಾರ ನಾಸಾದ ಆರ್ಬಿಟರ್ ಒಂದು ವಿಕ್ರಂ ಇರುವ ಜಾಗದ ಸುತ್ತ ಹಾರಾಡಿ ಮಾಹಿತಿ ಕಲೆ ಹಾಕಲಿದೆ ಎಂದು ನಾಸಾ ಹೇಳಿತ್ತು. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಎರಡು ದಿನಗಳಲ್ಲಿ ಮಾಹಿತಿ

ಎರಡು ದಿನಗಳಲ್ಲಿ ಮಾಹಿತಿ

ವಿಕ್ರಂ ಲ್ಯಾಂಡರ್ ಗೆ ಸಂಬಂಧಿಸಿದಂತೆ ಇನ್ನೆರಡು ದಿನಗಳಲ್ಲಿ ಇಸ್ರೋದ ಆಂತರಿಕ ಸಮಿತಿ ಮಾಹಿತಿ ನೀಡಲಿದೆ. ಈಗಾಗಲೇ ಸಿಕ್ಕ ಡೆಟಾಗಳನ್ನು ಈ ಸಮಿತಿ ಪರಿಶೀಲನೆ ನಡೆಸುತ್ತಿದ್ದು, ಇನ್ನೆರಡು ದಿನಗಳಲ್ಲಿ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಿದೆ.

'ಹೋಗುವ ದಿನ' ಬಂದರೂ 'ವಿಕ್ರಂ' ಮಾತಿಲ್ಲ! ಇಸ್ರೋ ಜೊತೆ ಕೈಜೋಡಿಸಿದ ನಾಸಾ'ಹೋಗುವ ದಿನ' ಬಂದರೂ 'ವಿಕ್ರಂ' ಮಾತಿಲ್ಲ! ಇಸ್ರೋ ಜೊತೆ ಕೈಜೋಡಿಸಿದ ನಾಸಾ

ನಾಲ್ಕೇ ನಾಲ್ಕು ದಿನ ಬಾಕಿ!

ನಾಲ್ಕೇ ನಾಲ್ಕು ದಿನ ಬಾಕಿ!

ಸೆಪ್ಟೆಂಬರ್ 21 ಕ್ಕೆ ವಿಕ್ರಂ ಲ್ಯಾಂಡರ್ ಆರ್ಬಿಟರ್ ನಿಂದ ಬೇರೆ ಆಗಿ, ಚಂದ್ರನ ಮೇಲೆ ಲ್ಯಾಂಡ್ ಆಗಿ 14 ದಿನ ಕಳೆಯಲಿದೆ. ಅಷ್ಟರೊಳಗೆ ಆರ್ಬಿಟರ್ ಸಂಪರ್ಕಕ್ಕೆ ಸಿಕ್ಕರೆ ಭಾರತದ ಐತಿಹಾಸಿಕ ಚಂದ್ರಯಾನ ಸಂಪೂರ್ಣ ಯಶಸ್ವಿಯಾದಂತೆ.

English summary
ISRO in Its New Tweet Thanked All the people who encouraged them for Chandrayaan 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X