ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ವಿಕ್ರಂ'ಗೆ ಇಂದು ಕೊನೇ ದಿನ: ಸಂಪರ್ಕದ ಬಗ್ಗೆ ಇಸ್ರೋ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21: "ವಿಕ್ರಂ ಲ್ಯಾಂಡರ್ ಜೊತೆ ಇನ್ನೆಂದೂ ಸಂಪರ್ಕ ಸಾಧ್ಯವಿಲ್ಲ. ಸಂಪರ್ಕ ಕಡಿತದ ಕುರಿತಂತೆ ತಜ್ಞರ ಸಮಿತಿ ವರದಿ ನೀಡಲಿದೆ" ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹೇಳಿದೆ. ಈ ಮೂಲಕ 'ವಿಕ್ರಂ' ಸಂಪರ್ಕಕ್ಕೆ ಸಿಗುತ್ತಾನೆಂಬ ಭರವಸೆ ಕೊನೆಗೂ ಸುಳ್ಳಾಗಿದೆ.

ಮಹತ್ವದ ಚಂದ್ರಯಾನ ಯೋಜನೆಯ ವಿಕ್ರಂ ಲ್ಯಾಂಡರ್ ಸೆಪ್ಟೆಂಬರ್ 7 ರಂದು ಆರ್ಬಿಟರ್ ಜೊತೆ ಸಂಪರ್ಕ ಕಳೆದುಕೊಂಡಿತ್ತು. ಇಂದಿಗೆ(ಸೆ.21) ಲ್ಯಾಂಡರ್ ನ ಆಯುಷ್ಯ ಮುಗಿಯಲಿದ್ದು, ಇಂದೋ, ನಾಳೆಯೋ ವಿಕ್ರಂ ಸಂಪರ್ಕಕ್ಕೆ ಸಿಗಬಹುದು ಎಂಬ ಎಲ್ಲಾ ಭರವಸೆಯೂ ಹುಸಿಯಾಗಲಿದೆ. ಆದರೆ ಆರ್ಬಿಟರ್ ಮಾತ್ರ ಇನ್ನು ಏಳು ವರ್ಷ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಲಿದೆ.

ISRO Sources Say It Can Not Make Contact With Vikram Lander.

ಸೆಪ್ಟೆಂಬರ್ 7 ರಂದು ಶನಿವಾರ ಬೆಳಗ್ಗಿನ ಜಾವ ಚಂದ್ರನ ಮೇಲೆ ಲ್ಯಾಂಡ್ ಆಗಬೇಕಿದ್ದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈ ತಲುಪಲು ಇನ್ನು ಕೇವಲ 2.1 ಕಿ.ಮೀ. ಅಂತರವಿದೆ ಎನ್ನುವಾಗ ಸಂಪರ್ಕ ಕಳೆದುಕೊಂಡಿತ್ತು. ಆದರೆ ಲ್ಯಾಂಡರ್ ಸುರಕ್ಷಿತವಾಗಿರುವ ಚಿತ್ರನ್ನು ಆರ್ಬಿಟರ್ ಕಳಿಸಿದ ಮೇಲೆ ಅದು ಸಂಪರ್ಕಕ್ಕೆ ಸಿಗಬಹುದು ಎಂಬ ಆಸೆ ಜೀವ ಪಡೆದಿತ್ತು.

ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ತಲುಪಿ ಈಗಾಗಲೇ ಒಂದು ಪಾಕ್ಷಿಕ ಮುಗಿಯುತ್ತಿದ್ದು, ಇನ್ನು ಹದಿನೈದು ದಿನ ಘೋರ ಚಳಿ ಆರಂಭವಾಗಲಿದೆ. ಕನಿಷ್ಠ -200 ಡಿಗ್ರಿ ಸೆಲ್ಷಿಯ್ ವರೆಗೂ ತಾಪಮಾನ ತಲುಪಲಿದ್ದು, ಈ ವಾತಾವರಣದಲ್ಲಿ ಲ್ಯಾಂಡರ್ ನ ಹೆಪ್ಪುಗಟ್ಟಿ ನಾಶವಾಗುತ್ತದೆ.

English summary
ISRO confirms that it can not make contact with Vikram lander.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X