ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ರೆಂಚ್ ಗಯಾನಾದಿಂದ ನಭಕ್ಕೆ ಚಿಮ್ಮಿದ ಇಸ್ರೋದ ಉಪಗ್ರಹ

|
Google Oneindia Kannada News

ಬೆಂಗಳೂರು, ಜನವರಿ 17: ಭಾರತದ ಅಧಿಕ ಶಕ್ತಿಯ ಸಂವಹನ ಉಪಗ್ರಹ 'ಜಿಸ್ಯಾಟ್-30'ಅನ್ನು ಫ್ರೆಂಚ್ ಗಯಾನಾದಿಂದ ಶುಕ್ರವಾರ ಭಾರತೀಯ ಕಾಲಮಾನದ ನಸುಕಿನ ವೇಳೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ದಕ್ಷಿಣ ಅಮೆರಿಕದ ಈಶಾನ್ಯ ಕರಾವಳಿ ಭಾಗದಲ್ಲಿರುವ ಫ್ರೆಂಚ್ ಸೀಮೆ ಕೌರೊಯುದಲ್ಲಿನ ಏರಿಯಾನ್ ಉಡಾವಣಾ ಕೇಂದ್ರದಿಂದ ನಸುಕಿನ 2.35ರ ವೇಳೆಗೆ ನಭಕ್ಕೆ ಚಿಮ್ಮಿಸಲಾಯಿತು. ಏರಿಯಾನ್ 5 ರಾಕೆಟ್ ಈ ಉಪಗ್ರಹವನ್ನು ಕೊಂಡೊಯ್ದಿತು. ಅಧಿಕ ಗುಣಮಟ್ಟದ ಟೆಲಿವಿಷನ್, ದೂರಸಂಪರ್ಕ ಸಂವಹನಗಳು ಹಾಗೂ ಬ್ರಾಡ್‌ಕಾಸ್ಟಿಂಗ್ ಸೇವೆಗಳನ್ನು ಒದಗಿಸುವ ಗುರಿಯನ್ನು ಈ ಉಪಗ್ರಹ ಹೊಂದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.

2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!

ಈ ಉಪಗ್ರಹ ಉಡಾವಣೆಯು ಇಸ್ರೋದ 2020ರ ವರ್ಷದ ಅದ್ಭುತ ಶುಭಾರಂಭ ಎಂದು ಬಣ್ಣಿಸಿರುವ ಯು.ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಪಿ. ಉನ್ನಿಕೃಷ್ಣನ್, ಇಸ್ರೋ ಸಮುದಾಯವನ್ನು ಅಭಿನಂದಿಸಿದ್ದಾರೆ. ಅವರು ಫ್ರೆಂಚ್ ಗಯಾನಾದ ಉಡ್ಡಯನ ಕೇಂದ್ರದಲ್ಲಿ ಈ ವೇಳೆ ಹಾಜರಿದ್ದರು.

ಎರಡು ಉಪಗ್ರಹಗಳ ಉಡಾವಣೆ

ಎರಡು ಉಪಗ್ರಹಗಳ ಉಡಾವಣೆ

ಯುರೋಪಿಯನ್ ಬಾಹ್ಯಾಕಾಶ ಒಕ್ಕೂಟ ಏರಿಯಾನ್ ಸ್ಪೇಸ್‌ನ ಏರಿಯಾನ್ 5 ವಾಹನವು ಜಿಸ್ಯಾಟ್-30 ಉಪಗ್ರಹವನ್ನು ಸುಮಾರು 38 ನಿಮಿಷಗಳಲ್ಲಿ ಕಕ್ಷೆಗೆ ಸೇರ್ಪಡೆಗೊಳಿಸಿತು. ಜಿಸ್ಯಾಟ್-30 ಜತೆಗೆ ಯೂಟೆಲ್‌ಸ್ಯಾಟ್ ಕನೆಕ್ಟ್ ಎಂಬ ಮತ್ತೊಂದು ಉಪಗ್ರಹ ಕೂಡ ಕಕ್ಷೆಗೆ ಸೇರ್ಪಡೆಯಾಯಿತು.

12ಸಿ ಮತ್ತು 12 ಕೆಯು ಬ್ಯಾಂಡ್

12ಸಿ ಮತ್ತು 12 ಕೆಯು ಬ್ಯಾಂಡ್

3,357 ಕೆ.ಜಿ. ತೂಕವಿರುವ ಉಪಗ್ರಹವನ್ನು ಏರಿಯಾನ್-5 ಉಡ್ಡಯನ ವಾಹನದಿಂದ (ವಿಎ 251) ಭೂಸ್ಥಾಯಿ ವರ್ಗಾವಣೆ ಕಕ್ಷೆಗೆ (ಜಿಟಿಓ) ಕೆಳ ಪ್ರಯಾಣಿಕ ಸ್ಥಿತಿಯಿಂದ ಸೇರ್ಪಡೆಗೊಳಿಸಲಾಯಿತು. ಈ ಉಪಗ್ರಹವು ಇಸ್ರೋದ ಹಿಂದಿನ ಇನ್‌ಸ್ಯಾಟ್/ಜಿಸ್ಯಾಟ್ ಉಪಗ್ರಹ ಸೇವೆಗಳ ಸ್ವರೂಪವನ್ನು ಹೊಂದಿದ್ದು, 12ಸಿ ಮತ್ತು 12 ಕೆಯು ಬ್ಯಾಂಡ್ ಟ್ರಾನ್ಸ್‌ಪಾಂಡರ್‌ಗಳನ್ನು ಒಳಗೊಂಡಿದೆ.

ಗಗನಯಾತ್ರಿಗಳಿಗೆ 11 ತಿಂಗಳು ರಷ್ಯಾದಲ್ಲಿ ತರಬೇತಿಗಗನಯಾತ್ರಿಗಳಿಗೆ 11 ತಿಂಗಳು ರಷ್ಯಾದಲ್ಲಿ ತರಬೇತಿ

ಅನೇಕ ಕಾರ್ಯಗಳಿಗೆ ನೆರವು

ಅನೇಕ ಕಾರ್ಯಗಳಿಗೆ ನೆರವು

ಜಿಸ್ಯಾಟ್-30 ಉಪಗ್ರಹವು 15 ವರ್ಷಗಳ ಜೀವಿತಾವಧಿ ಹೊಂದಿದ್ದು, ಇದು ಡಿಟಿಎಚ್, ಟೆಲಿವಿಷನ್ ಅಪ್‌ಲಿಂಕ್ ಮತ್ತು ವಿಸ್ಯಾಟ್ ಸರ್ವಿಸ್‌ಗಳ ಕಾರ್ಯಾಚರಣೆಯ ಸಂವಹನಕ್ಕೆ ನೆರವಾಗಲಿದೆ. ಇದರೊಂದಿಗೆ ಕಕ್ಷೆಗೆ ಸೇರಿದ ಯುಟೆಲ್‌ಸ್ಯಾಟ್ ಕನೆಕ್ಟ್ ದೂರಸಂಪರ್ಕ ಸಂವಹನ ಉಪಗ್ರಹವು ಯೂಟೆಲ್‌ಸ್ಯಾಟ್‌ಗಾಗಿ ಥೇಲ್ಸ್ ಅಲೆನಿಯಾ ಬಾಹ್ಯಾಕಾಶ ಕೇಂದ್ರ ವಿನ್ಯಾಸಗೊಳಿಸಿದೆ.

ಇನ್ನಷ್ಟು ವಿಸ್ತೃತ ಪ್ರಸಾರಕ್ಕೆ ನೆರವು

ಇನ್ನಷ್ಟು ವಿಸ್ತೃತ ಪ್ರಸಾರಕ್ಕೆ ನೆರವು

ಈ ಉಪಗ್ರಹವು ಹಳೆಯದಾದ ಇನ್‌ಸ್ಯಾಟ್-4ಎ ಬಾಹ್ಯಾಕಾಶ ಸೇವೆಗೆ ಪರ್ಯಾಯವಾಗಿ ಬಳಕೆಯಾಗಲಿದೆ. ಭಾರತದ ಮುಖ್ಯಭೂಮಿ ಮತ್ತು ದ್ವೀಪ ಪ್ರದೇಶಗಳಿಗೆ ಕೆಯು-ಬ್ಯಾಂಡ್ ಹಾಗೂ ಗಲ್ಫ್ ದೇಶಗಳಲ್ಲಿ, ಅಧಿಕ ಸಂಖ್ಯೆಯ ಏಷ್ಯಾ ದೇಶಗಳು ಹಾಗೂ ಆಸ್ಟ್ರೇಲಿಯಾದಲ್ಲಿ ಸಿ-ಬ್ಯಾಂಡ್ ಮೂಲಕ ವಿಸ್ತೃತ ಸಂವಹನಕ್ಕೆ ನೆರವಾಗಲಿದೆ.

English summary
ISRO's GSAT-30 was successfully launched onboard Ariane 5 rocket from French Guiana on Jaunary 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X