ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಮ್ಮೆಯ ಚಂದ್ರಯಾನ 2: ಮೊದಲ ಚಿತ್ರ ಬಿಡುಗಡೆ ಮಾಡಿದ ಇಸ್ರೋ

|
Google Oneindia Kannada News

ಬೆಂಗಳೂರು, ಜೂನ್ 12: ಭಾರತದ ಹೆಮ್ಮೆಯ ಚಂದ್ರಯಾನ-2 ರ ಮೊದಲ ಚಿತ್ರಗಳನ್ನು ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಬಿಡುಗಡೆ ಮಾಡಿದೆ.

ಜುಲೈ 9 ರಿಂದ ಜುಲೈ 16 ರವರೆಗೆ ನಡೆಯಲಿರುವ ಚಂದ್ರಯಾನವು ಇದುವರೆಗೂ ಯಾವ ದೇಶವೂ ಹೋಗಿರದ ಚಂದ್ರನ ಮೇಲ್ಮೈ ಗೆ ತೆರಳಿ ಅಧ್ಯಯನ ನಡೆಸಲಿದೆ. ಸೆಪ್ಟೆಂಬರ್ 6, 2019 ಕ್ಕೆ ಚಂದ್ರಯಾನ-2 ಮಿಶನ್ ಚಂದ್ರನ ಮೇಲೆ ಇಳಿಯಲಿದೆ.

ಚಂದ್ರಯಾನ-2ಕ್ಕೆ ಮುಹೂರ್ತ ನಿಗದಿಪಡಿಸಿದ ಇಸ್ರೋ ಚಂದ್ರಯಾನ-2ಕ್ಕೆ ಮುಹೂರ್ತ ನಿಗದಿಪಡಿಸಿದ ಇಸ್ರೋ

ಚಂದ್ರಯಾನ 2 ಆರ್ಬಿಟರ್, ಲ್ಯಾಂಡರ್(ವಿಕ್ರಮ) ಮತ್ತು ರೋವರ್(ಪ್ರಗ್ಯಾನ್) ಎಂಬ ಮೂರು ಘಟಕಗಳನ್ನು ಹೊಂದಿದೆ.

ಮೂರು ಘಟಕಗಳ ಮೂಲಕ ಅಧ್ಯಯನ

ಮೂರು ಘಟಕಗಳ ಮೂಲಕ ಅಧ್ಯಯನ

* ಆರ್ಬಿಟರ್ 200 ಕಿಮೀ ಎತ್ತರದಲ್ಲಿ ಚಂದ್ರನ ಸುತ್ತ ಪರಿಭ್ರಮಿಸುತ್ತದೆ.
* ಲ್ಯಾಂಡರ್ ಚಂದ್ರನ ಮೇಲೆ ಇಳಿದು, ಚಂದ್ರಯಾನ 1 ಕ್ಕಿಂತ ಭಿನ್ನವಾಗಿ ಚಂದ್ರನ ಅಧ್ಯಯನಕ್ಕೆ ನೆರವಾಗುವಂತೆಮಾಡುತ್ತದೆ.
* ಇನ್ನು ರೋವರ್, ತನಗೆ ಅಳವಡಿಸಲಾದ ಗಾಲಿಗಳ ಮೂಲಕ ಚಂದ್ರನ ಮೇಲೆ ಉರುಳುತ್ತ ಅಲ್ಲಿನ ಮಣ್ಣು, ಶಿಲೆ, ರಾಸಾಯನಿಕ ಗಳ ಮಾದರಿಯನ್ನು ಪರೀಕ್ಷಿಸಲಿದೆ. ಒಟ್ಟಿನಲ್ಲಿ ಈ ಮೂರು ಘಟಕಗಳ ಮೂಲಕ ಚಂದ್ರನ ಸಂಪೂರ್ಣ ವಾತಾವರಣವನ್ನು ಪರೀಕ್ಷಿಸಿ, ಅಧ್ಯಯನಕ್ಕೊಳಪಡಿಸಲಾಗುತ್ತದೆ. (ಚಂದ್ರಯಾನ 2 ರ ಮೊದಲ ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ:)

ಚಂದ್ರಯಾನ-2ರಲ್ಲಿ ಭಾರತದ 14 ಅಧ್ಯಯನ ಸಾಧನಗಳ ರವಾನೆ ಚಂದ್ರಯಾನ-2ರಲ್ಲಿ ಭಾರತದ 14 ಅಧ್ಯಯನ ಸಾಧನಗಳ ರವಾನೆ

ಮಾಧ್ಯಮಗಳಿಗೆ ಸಾಧನಗಳ ಪ್ರದರ್ಶನ

ಮಾಧ್ಯಮಗಳಿಗೆ ಸಾಧನಗಳ ಪ್ರದರ್ಶನ

ಜುಲೈ 9 ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಚಂದ್ರಯಾನ 2 ರ ಸಾಧನಗಳನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನ ಮಾರತಹಳ್ಳಿಯಲ್ಲಿರುವ ಇಸ್ರೋ ಕೇಂದ್ರದಲ್ಲಿ ಮಾಧ್ಯಮಗಳಿಗೆ ಬುಧವಾರ ಪ್ರದರ್ಶಿಸಲಾಗಿದೆ.

ಉಡಾವಣೆ ಎಂದು?

ಉಡಾವಣೆ ಎಂದು?

GSLV MK-III ಮೂಲಕ ಚಂದ್ರಯಾನ-2 ರ ಮೂನ್ ಮಿಶನ್ ಉಡಾವಣೆ ಜುಲೈ 9 ರಂದು ನಡೆಯಲಿದ್ದು, ಸೆಪ್ಟೆಂಬರ್ 6 ಕ್ಕೆ ನೌಕೆಯು ಚಂದ್ರನ ಮೇಲೆ ಇಳಿಯಲಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ. ಆರ್ಬಿಟರ್ ನಿಂದ ಲ್ಯಾಂಡರ್ ಘಟಕ ಪ್ರತ್ಯೇಕವಾಗಿ ಚಂದ್ರನ ದಕ್ಷಿಣ ಧ್ರುವದ ತೆಳು ಮೇಲ್ಮೈ ಮೇಲೆ ಇಳಿಯಲಿದೆ.

ಇಸ್ರೋದಿಂದ ರಿಸ್ಯಾಟ್-2ಬಿ ರೆಡಾರ್ ಉಪಗ್ರಹ ಉಡಾವಣೆ ಯಶಸ್ವಿಇಸ್ರೋದಿಂದ ರಿಸ್ಯಾಟ್-2ಬಿ ರೆಡಾರ್ ಉಪಗ್ರಹ ಉಡಾವಣೆ ಯಶಸ್ವಿ

ಒಟ್ಟು 3.8 ಟನ್ ಸಾಮರ್ಥ್ಯದ ನೌಕೆ

ಒಟ್ಟು 3.8 ಟನ್ ಸಾಮರ್ಥ್ಯದ ನೌಕೆ

ಒಟ್ಟು 3.8 ಟನ್ ಸಾಮರ್ಥ್ಯದ GSLV MKIII, ಗಗನನೌಕೆ 11 ಪೇ ಲೋಡ್ ಗಳನ್ನು ಹೊತ್ತೊಯ್ಯಲಿದ್ದು, ಇವುಗಳಲ್ಲಿ ಭಾರತದ 6, ಯುರೋಪಿನ 3, ಅಮೆರಿಕದ 2 ಪೇ ಲೋಡ್ ಗಳು ಇರಲಿವೆ.

ಚಂದ್ರಯಾನ 1 ಸಹ ಯಶಸ್ವಿ

ಚಂದ್ರಯಾನ 1 ಸಹ ಯಶಸ್ವಿ

2009 ರಲ್ಲಿ ನಡೆದಿದ್ದ ಚಂದ್ರಯಾನ 1 ರ ಯಶಸ್ಸೇ ಚಂದ್ರಯಾನ 2 ಕ್ಕೆ ಸ್ಫೂರ್ತಿಯಾಗಿದ್ದು, ಆಗಲೂ ಚಂದ್ರನ ಮೇಲಿರುವ ವಾಸಯೋಗ್ಯ ವಾತಾವರಣ, ನೀರು ಮತ್ತಿತರ ಖನಿಜಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಚಂದ್ರಯಾನ 1 ರಲ್ಲಿ ಆರ್ಬಿಟರ್ ಘಟಕವನ್ನು ಬಳಸಲಾಗಿತ್ತಾದರೂ, ರೋವರ್ ಘಟಕವನ್ನು ಬಳಸಲಾಗಿರಲಿಲ್ಲ. ಆ ಕಾರಣದಿಂದ ಚಂದ್ರಯಾನ 2 ಮತ್ತಷ್ಟು ಕುತೂಹಲ ಸೃಷ್ಟಿಸಿದೆ.

English summary
ISRO(Indian Space Research Organisation) releases first pictures of Chanrayaan-2, which will be started from July 9 to July 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X