ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಮೋದಿ ಅಪ್ಪು'ಗೆಯ ಬಗ್ಗೆ ಇಸ್ರೋ ಅಧ್ಯಕ್ಷ ಕೆ.ಶಿವನ್ ಮನದಾಳದ ಮಾತು...

|
Google Oneindia Kannada News

ಬೆಂಗಳೂರು, ಜನವರಿ 3: ಭಾರತದ ಹೆಮ್ಮೆಯ ಇಸ್ರೋ ಬಾನಂಗಳದಲ್ಲಿ ಹಲವು ವಿಕ್ರಮಗಳನ್ನು ಮಾಡುತ್ತಾ ಸಾಗುತ್ತಿದೆ. ಆದರೆ, ಕಳೆದ ವರ್ಷ ನಡೆದ ಒಂದೇ ಒಂದು ನಿರಾಶೆ ಇನ್ನು ಶತಕೋಟಿ ಭಾರತೀಯರನ್ನು ಕಾಡುತ್ತಿದೆ.

ಚಂದ್ರಯಾನ ೨ ಯೋಜನೆ ವಿಫಲ ಆಗಿದ್ದಕ್ಕೆ ಭಾರತೀಯರೆಲ್ಲರೂ ಮರುಗಿದ್ದರು. ಅದೇ ದಿನ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಇದ್ದು, ಇಸ್ರೋ ಸಿಬ್ಬಂದಿಯನ್ನು ಸಂತೈಸಿದ್ದು ಅಪಾರ ಜನ ಮೆಚ್ಚುಗೆ ಗಳಿಸಿತ್ತು. ಇಸ್ರೋ ಅಧ್ಯಕ್ಷ ಕೆ ಶಿವನ್ ಅವರನ್ನು ತಬ್ಬಿಕೊಂಡು ಸಂತೈಷಿದ್ದ ನರೇಂದ್ರ ಮೋದಿ ನನ್ನಲ್ಲಿ ಏನು ಬದಲಾವಣೆ ತಂದರು ಎಂಬುದನ್ನು ಕೆ.ಶಿವನ್ ಅವರೇ ಬಹಿರಂಗಪಡಿಸಿದ್ದಾರೆ.

ನಿಜವಾದ ನಾಯಕತ್ವ ತೋರಿಸಿದರು

ನಿಜವಾದ ನಾಯಕತ್ವ ತೋರಿಸಿದರು

'ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿಯುವಲ್ಲಿ ವಿಫಲವಾದ ಸಂದರ್ಭದಲ್ಲಿ ಎಲ್ಲ ಭಾರತೀಯರಂತೆ ನಾನೂ ತುಂಬಾ ನಿರಾಶೆಯಾಗಿದ್ದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಕಣ್ಣಂಚಲ್ಲಿ ನೀರು ತುಂಬಿಕೊಂಡಿತ್ತು. ಆಗ ನನ್ನಲ್ಲಿ ಬಂದ ಪ್ರಧಾನಿ ಮೋದಿ ಅವರು ನನ್ನನ್ನು ಅಪ್ಪಿ ಸಂತೈಸಿದರು. ಆಗ ನನ್ನ ಕಣ್ಣಂಚಿಂದ ನೀರು ಜಿನುಗಿತು. ಅವರ ಅಪ್ಪುಗೆ ನನಗೆ ನಮ್ಮ ಸೋಲನ್ನು ಬದಿಗಿಟ್ಟು ಸಂತೈಸಿ, ಹೊಸ ಹುರುಪು ತುಂಬಿತು. ಅಂದು ಅವರು ನಿಜವಾದ ನಾಯಕತ್ವವನ್ನು ತೋರಿಸಿದರು' ಎಂದು ಎನ್‌ಡಿಟಿವಿ ನಡೆಸಿದ ಸಂದರ್ಶನದಲ್ಲಿ ಶಿವನ್ ಹೇಳಿಕೊಂಡಿದ್ದಾರೆ.

2019 ರಲ್ಲಿ ವೈರಲ್ ಆದ ಟಾಪ್ 10 ವಿಡಿಯೋಗಳು...2019 ರಲ್ಲಿ ವೈರಲ್ ಆದ ಟಾಪ್ 10 ವಿಡಿಯೋಗಳು...

ಹೊಸ ದೈರ್ಯ, ಹುರುಪು ನೀಡಿತು

'ನಮ್ಮ ಪ್ರಧಾನಿಯವರು ಅಪ್ಪಿ ಸಂತೈಸಿದ್ದು, ನಮ್ಮಲ್ಲಿ ಅಂದೇ ಹೊಸ ದೈರ್ಯ ತುಂಬಿತು. ಇದು ಇನ್ನೂ ಹೆಚ್ಚಿನದನ್ನು ಮಾಡಲು ಕಾರಣವಾಗುತ್ತೆ ಎಂದು ನನ್ನ್ ಮನದಲ್ಲಿ ಅನಿಸಿತು. ಮೊದಲಿಗಿಂತಲೂ ಇನ್ನೂ ಹೆಚ್ಚು ಕೆಲಸ ಮಾಡಲು ಮೋದಿಯವರ ಆ ಒಂದು ಅಪ್ಪುಗೆ ಹೊಸ ಹುರುಪು ನೀಡಿತು. ಅಂದು ಅವರು ತಾಯಿ ಪ್ರೀತಿ ತೋರಿದರು' ಎಂದು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಚಂದ್ರಯಾನ 3

ಚಂದ್ರಯಾನ 3

ಚಂದ್ರಯಾನ 2 ವಿಫಲತೆಯ ನಂತರ ಇಸ್ರೋ ನಿರಾಶೆಯಾಗಿಲ್ಲ. ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದಿದ್ದು, ಈ ವರ್ಷವೇ ಚಂದ್ರಯಾನ 3 ನಡೆಸುತ್ತೇವೆ ಎಂದು ಕೆ ಶಿವನ್ ಘೋಷಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ, ನವೆಂಬರ್ 2020 ಕ್ಕೆ ರಾಕೆಟ್ ಹಾರಲಿದೆ. ಕಳೆದ ವರ್ಷ ಚಂದ್ರಯಾನ 2 ಯೋಜನೆಯ ಮುಖ್ಯ ಉದ್ದೇಶವಾಗಿದ್ದ ವಿಕ್ರಮ್‌ ಲ್ಯಾಂಡರ್ ಚಂದ್ರನ ದಕ್ಷಿಣ ತುದಿಗೆ ಇಳಿಯುವುದಕ್ಕೆ ಸಾಧ್ಯವಾಗಿರಲಿಲ್ಲ.

2020ರಲ್ಲಿ ಮತ್ತೆ ಚಂದ್ರನತ್ತ ಇಸ್ರೋ ಪಯಣ2020ರಲ್ಲಿ ಮತ್ತೆ ಚಂದ್ರನತ್ತ ಇಸ್ರೋ ಪಯಣ

ಚಂದ್ರಯಾನದ ಮೋದಿ ಶಿವನ್ ಅಪ್ಪುಗೆ

ಚಂದ್ರಯಾನದ ಮೋದಿ ಶಿವನ್ ಅಪ್ಪುಗೆ

ಭಾರತದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ಚಂದ್ರಯಾನ ೨ ಭಾರತವಷ್ಟೇ ಅಲ್ಲ. ಜಗತ್ತಿನ ಗಮನವನ್ನು ಸೆಳೆದಿತ್ತು. ಚಂದ್ರನ ದಕ್ಷಿಣ ದ್ರುವದ ಅಧ್ಯಯನಕ್ಕೆ ಭಾರತ ಈ ಯೋಜನೆ ಹಮ್ಮಿಕೊಂಡಿತ್ತು. ಯೋಜನೆಗಾಗಿ ಸಾಕಷ್ಟು ಪೂರ್ವ ತಯಾರಿ ನಡೆಸಿ, 2019 ರ ಜುಲೈ 22 ರಂದು ಇಸ್ರೋ ರಾಕೆಟ್ ಉಡಾವಣೆ ಮಾಡಿತ್ತು. ಅಂದುಕೊಂಡಂತೆ ಆರ್ಬಿಟರ್ ವಾಹನ ಆಗಸ್ಟ್ 20, 2019 ರಂದು ಚಂದ್ರನ ಕಕ್ಷೆಯನ್ನು ಸೇರುವಲ್ಲಿ ಯಶಸ್ವಿಯಾಗಿತ್ತು. ಆದರೆ ಯೋಜನೆಯ ಪ್ರಮುಖ ಗುರಿಯಾಗಿದ್ದ ವಿಕ್ರಮ್ ಲ್ಯಾಂಡರ್ ವಾಹನವನ್ನು ಚಂದ್ರನ ದಕ್ಷಿಣ ದ್ರುವದಲ್ಲಿ ಇಳಿಸುವಲ್ಲಿ ಇಸ್ರೋ ವಿಫಲವಾಯಿತು. ಆಗ ಸ್ಥಳದಲ್ಲಿದ್ದು ಲ್ಯಾಂಡರ್ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರಿಗೂ ನಿರಾಶೆಯಾಯಿತು. ಚಂದ್ರಯಾನ ವಿಫಲತೆಯ ತೀವ್ರ ಬೇಸರದಲ್ಲಿದ್ದ ಇಸ್ರೋ ಅಧ್ಯಕ್ಷ ಕೆ ಶಿವನ್ ಅವರನ್ನು ತಬ್ಬಿಕೊಂಡು ಸಮಾಧಾನ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು.

English summary
ISRO President K Sivan Speaks About PM Modi Hug At Chandrayana 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X