• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಸ್ಕಾನ್ ಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್

By Mahesh
|

ಬೆಂಗಳೂರು, ಆ.7: ನಗರದ ಇಸ್ಕಾನ್‌ನ ಕಾರ್ಯದರ್ಶಿ ಜೈಚೈತನ್ಯ ದಾಸ್ ಸೇರಿದಂತೆ ಇಬ್ಬರು ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಡಿ ಮೊಕದ್ದಮ್ಮೆ ಹೂಡುವಂತೆ ಹೈಕೋರ್ಟ್ ಆದೇಶಿಸಿದೆ. ಮುಂಬೈ ಹಾಗೂ ಬೆಂಗಳೂರು ಇಸ್ಕಾನ್ ವ್ಯಾಜ್ಯ ಇತ್ಯರ್ಥ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ವಿರುದ್ಧ ಜೈಚೈತನ್ಯ ದಾಸ್ ಆಕ್ಷೇಪವೆತ್ತಿದ್ದರು.

ಜೈಚೈತನ್ಯ ದಾಸ್ ಅಲ್ಲದೆ ವಕೀಲ ರಮೇಶ್ ಬಾಬು ಮತ್ತು ಮಾರುತಿ ಪ್ರಸಾದ್ ವಿರುದ್ಧ ಹೈಕೋರ್ಟ್ ಆರೋಪಪಟ್ಟಿ ಸಿದ್ಧಪಡಿಸಿ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದೆ.

ಇಸ್ಕಾನ್‌ಗೆ ಸಂಬಂಧಿಸಿದ ವ್ಯಾಜ್ಯದಲ್ಲಿ ನ್ಯಾಯಮೂರ್ತಿಗಳನ್ನೇ ಇಕ್ಕಟ್ಟಿಗೆ ಸಿಲುಕಿಸಿ ನ್ಯಾಯಾಂಗದ ಗೌರವಕ್ಕೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಹೈಕೋರ್ಟ್ ಇವರ ವಿರುದ್ಧ ಆರೋಪಪಟ್ಟಿ ಸಿದ್ಧಪಡಿಸಿದೆ. ಈ ಬಗ್ಗೆ ವಿಚಾರಣೆ ಆಗಸ್ಟ್ 19ರಿಂದ ನಡೆಯಲಿದೆ ಎಂದು ಜಸ್ಟೀಸ್ ಎನ್ ಕುಮಾರ್ ಹಾಗೂ ರತ್ನಕಲಾ ಅವರಿದ್ದ ನ್ಯಾಯಪೀಠ ಹೇಳಿದೆ.

ಬೆಂಗಳೂರು ಮತ್ತು ಮುಂಬೈ ಇಸ್ಕಾನ್‌ನ ಮಾಲೀಕತ್ವದ ಪ್ರಕರಣ 2009ರಲ್ಲಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದು ವಿಚಾರಣೆ ನ್ಯಾ.ಕೆ.ಎಲ್. ಮಂಜುನಾಥ್ ಮತ್ತು ನ್ಯಾ. ಕುಮಾರಸ್ವಾಮಿ ಅವರ ಪೀಠ ನಡೆಸುತ್ತಿತ್ತು. ಆದರೆ ಅರ್ಜಿ ವಿಚಾರಣೆ ಸಮಯದಲ್ಲಿ ನ್ಯಾ. ಮಂಜುನಾಥ್ ಅವರಿಗೆ ಒಂದು ಲಕೋಟೆ ಬಂದಿತು.

ಲಕೋಟೆಯಲ್ಲಿ ನ್ಯಾ. ಮಂಜುನಾಥ್ ಇಸ್ಕಾನ್‌ಗೆ ಭೇಟಿ ನೀಡಿದ ಭಾವಚಿತ್ರವಿತ್ತು. ಅದನ್ನು ಇಸ್ಕಾನ್‌ನ ಕಾರ್ಯದರ್ಶಿ ಜೈಚೈತನ್ಯ ದಾಸ್ ಕಳುಹಿಸಿದ್ದರೆಂದು ತಿಳಿದುಬಂದಿತು. ಚಿತ್ರದ ಜತೆ ಪತ್ರ ಬರೆದಿದ್ದ ಕಾರ್ಯದರ್ಶಿ, ನ್ಯಾ. ಮಂಜುನಾಥ್ ಅವರಿಗೆ ಇಸ್ಕಾನ್ ಜತೆ ಸಂಬಂಧವಿದ್ದು ಪ್ರಕರಣದಿಂದ ಹಿಂದೆ ಸರಿಯುವಂತೆ ಉಲ್ಲೇಖಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾ. ಮಂಜುನಾಥ್ ಪ್ರಕರಣವನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಾಮೂರ್ತಿಗಳಿಗೆ ರವಾನಿಸಿ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಆದರೆ ಆಗಿನ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಯನ್ನು ಮತ್ತೆ ನ್ಯಾ.ಕೆ.ಎಲ್. ಮಂಜುನಾಥ್ ಅವರಿಗೆ ವರ್ಗಾಯಿಸಿ ವಿಚಾರಣೆ ಮುಂದುವರಿಸುವಂತೆ ಸೂಚಿಸಿದ್ದರು. ಪ್ರಕರಣದಲ್ಲಿ ಅನವಶ್ಯಕವಾಗಿ ಜೈಚೈತನ್ಯದಾಸ್ ಆರೋಪ ಹೊರಿಸಿದ್ದು ನ್ಯಾಯಾಂಗದ ಗೌರವಕ್ಕೆ ಧಕ್ಕೆ ತಂದಿದ್ದಾರೆಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಈ ಸಂಬಂಧ ಕಾರ್ಯದರ್ಶಿ ಜೈಚೈತನ್ಯ ದಾಸ್, ವಕೀಲ ರಮೇಶ್ ಬಾಬು ಮತ್ತು ಮಾರುತಿ ಪ್ರಸಾದ್ ವಿರುದ್ಧ ಹೈಕೋರ್ಟ್ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ವಿರುದ್ಧ ಆರೋಪ ಪಟ್ಟಿ ಸಿದ್ಧಪಡಿಸಿ ನ್ಯಾಯಾಂಗ ನಿಂದನೆ ವಿಚಾರಣೆ ಆ. 13ರಿಂದ ನಡೆಯಲಿದೆ

ಈ ನಡುವೆ ಬುಧವಾರ ತಡ ರಾತ್ರಿ ಮಥುರಾದ ಇಸ್ಕಾನ್ ದೇಗುಲದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಪ್ರಮುಖ ದಾಖಲೆಗಳು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ. ಸುಮಾರು ಮೂರು ಗಂಟೆಗಳ ನಂತರ ಬೆಂಕಿಯನ್ನು ನಂದಿಸಲಾಗಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ದೇಗುಲದ ಕಾರ್ಯದರ್ಶಿ ಮಾಧವ್ ಇಂದು ಹೇಳಿದ್ದಾರೆ.

English summary
The Karnataka High Court on Wednesday framed charges against the secretary of The International Society for Krishna Consciousness (ISKCON) and two advocates, Ramesh Babu and Maruthi Prasad for criminal contempt of court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X