ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರರಿಂದ ಬಚಾವಾದ ಶಿಕ್ಷಕ ವಿಜಯ್ ಹೇಳಿದ ಕಿಡ್ನಾಪ್ ಕಥೆ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 06: ಲಿಬಿಯಾದಲ್ಲಿ ಇರಾಕಿ ಉಗ್ರ ಪಡೆ ಐಎಸ್ಐಎಸ್ ನಿಂದ ಅಪಹರಣಕ್ಕೊಳಗಾಗಿದ್ದ ನಾಲ್ವರು ಭಾರತೀಯರು ಈಗ ಸುರಕ್ಷಿತವಾಗಿದ್ದಾರೆ.

ಕರ್ನಾಟಕದ ಮೂಲದ ಲಕ್ಷ್ಮಿಕಾಂತ್ ಹಾಗೂ ವಿಜಯ್ ಕುಮಾರ್ ಅವರು ತಮ್ಮಮ್ಮ ಮನೆ ಸೇರಿದ್ದಾರೆ. ಪ್ರೊ ವಿಜಯ್ ಕುಮಾರ್ ಅವರು ಮಾತನಾಡಿ, 'ಅಲ್ಲಿಗಿಂತ ಇಲ್ಲೇ ನನಗೆ ಬಂಧನದ ವಾತಾವರಣ ಕಂಡು ಬಂದಿದೆ' ಎಂದು ನಗೆ ಚಟಾಕಿ ಹಾರಿಸಿದ್ದಾರೆ.[ಐಎಸ್‌ಐಎಸ್ ವಶದಿಂದ ಇಬ್ಬರು ಕನ್ನಡಿಗರ ರಕ್ಷಣೆ]

ಈ ನಡುವೆ ಬೆಂಗಳೂರಿನ ಕೋರಮಂಗಲ ನಿವಾಸಿ ಲಿಬಿಯಾ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ ವಿಜಯ್ ಕುಮಾರ್ ಅವರು ಖಾಸಗಿ ವಾಹಿನಿಯೊಂದಿಗೆ ತಮಗಾದ ಅನುಭವ, ಕಿಡ್ನಾಪ್, ಇರಾಕಿ ಉಗ್ರರು, ವಿದ್ಯಾರ್ಥಿಗಳ ಬಗ್ಗೆ ಹೇಳಿಕೊಂಡಿದ್ದಾರೆ.[ಐಎಸ್ಐಎಸ್ ಸರ್ವನಾಶಕ್ಕೆ ಸಿದ್ಧರಾಗಿ: ಒಬಾಮಾ ಕರೆ]

ನನ್ನನ್ನು ಸುರಕ್ಷಿತವಾಗಿ ಬರಲು ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ನನ್ನ ವಂದನೆಗಳು..

ನಾವಾಗೇ ಅವರ ಕೈಗೆ ಸಿಕ್ಕಿ ಹಾಕಿಕೊಳ್ಳಲಿಲ್ಲ. ನಾವು ಭಾರತಕ್ಕೆ ವಾಪಸ್ ಬರುವ ವೇಳೆಗೆ ಈ ಘಟನೆ ನಡೆಯಿತು. ಟ್ರಿಪೋಲಿಗೆ ಹೋಗಿ ಅಲ್ಲಿಂದ ಟ್ಯೂನೇಷಿಯಾ ಮಾರ್ಗ ಎಮಿರೇಟ್ಸ್ ವಿಮಾನ ಏರಿ ಭಾರತಕ್ಕ್ ಬರಲು ಸಿದ್ದರಾಗಿ ಹೊರಟಿದ್ದೆವು.. ಅದರೆ,. ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆಯಿತು. [ಐಎಸ್ಐಎಸ್ ಸೇರಿದವರಿಗೆ ದೇಶಕ್ಕೆ ಮರಳೋ ಆಸೆ]

ಆಗಸ್ಟ್ 15ರ ತನಕ ಲಿಬಿಯಾದಿಂದ ಯಾವುದೇ ವಿಮಾನ ಇರಲಿಲ್ಲ. ಹೀಗಾಗಿ ಜುಲೈ 30ರಂದು ಟ್ಯೂನಿಷಿಯಾದಲ್ಲಿ ಟಿಕೆಟ್ ಲಭ್ಯವಿದ್ದನ್ನು ನೋಡಿ, ಬೇಗ ಹೊರಟೆವು.

ಶಿರ್ತೆ ದಾಟಿದ ಮೇಲೆ 50 ಕಿ.ಮೀ ಗೆ ಒಂದು ಚೆಕ್ ಪೋಸ್ಟ್ ಇದೆ ಇದನ್ನು ದಾಟಿದರೆ ಅಪಾಯವಿಲ್ಲ ಎಂದು ನಮ್ಮ ಡ್ರೈವರ್ ಹೇಳಿದ. ನಾನು ಲಕ್ಷ್ಮಿಕಾಂತ್ ಒಂದೇ ಕಾರಿನಲ್ಲಿದ್ದೆವು. ಆಂಧ್ರಪ್ರದೇಶ ಮೂಲದ ಗೋಪಿಕೃಷ್ಣ, ಬಲರಾಮ್ ಅವರು ಮತ್ತೊಂದು ಕಾರಿನಲ್ಲಿದ್ದರು.

ಉಗ್ರರ ಗ್ಯಾಂಗಿನಲ್ಲಿ ನನ್ನ ವಿದ್ಯಾರ್ಥಿ ಕಾಣಿಸಿಕೊಂಡ

ಉಗ್ರರ ಗ್ಯಾಂಗಿನಲ್ಲಿ ನನ್ನ ವಿದ್ಯಾರ್ಥಿ ಕಾಣಿಸಿಕೊಂಡ

ಚೆಕ್ ಪೋಸ್ಟ್ ಮುಸುಕುಧಾರಿ ಗನ್ ಮ್ಯಾನ್ ಗಳು ಇದ್ದರು. ಇಸ್ಲೇವಿ ಅಂಥ ನಮ್ಮ ಹುಡುಗನನ್ನು ನೋಡಿ ಗುರುತಿಸಿದೆ ನನ್ನ ವಿದ್ಯಾರ್ಥಿ ಎಂದು ಲಕ್ಷ್ಮಿಕಾಂತ್ ಬಳಿ ಹೇಳಿದೆ.. ಆದರೆ, ಅರ್ಧ ಗಂಟೆ ನಂತರ ನಮ್ಮ ಹಿಂದೆ ಬರುತ್ತಿದ್ದ ಆಂಧ್ರದ ಉಪನ್ಯಾಸಕ ಕಾರು ಕಾಣಿಸಲಿಲ್ಲ. ಫೋನ್ ಮಾಡಿ ಕೇಳಿದಾಗ ಉಗ್ರರು ಹಿಡಿದಿಟ್ಟುಕೊಂಡಿದ್ದಾರೆ ಎಂದು ಗೋಪಿಕೃಷ್ಣ ಹೇಳಿದರು. ಅಲ್ಲಿಂದ ಆತಂಕ ಶುರುವಾಯಿತು.

ಚಿತ್ರದಲ್ಲಿ ಆಂಧ್ರದ ಗೋಪಿಕೃಷ್ಣ, ಬಲರಾಮ್

ಚಿತ್ರದಲ್ಲಿ ಆಂಧ್ರದ ಗೋಪಿಕೃಷ್ಣ, ಬಲರಾಮ್

ಅವರನ್ನು ಸೇವ್ ಮಾಡುವ ಉದ್ದೇಶದಿಂದ ವಾಪಸ್ ಹೋಗಿ ಬರೋಣ.. ನನ್ನ ವಿದ್ಯಾರ್ಥಿ ಇದ್ದಾನೆ ಅಲ್ಲಿ ಎಂದು ಹೇಳಿದೆ. ನಮ್ಮ ಡ್ರೈವರ್ ಬೇಡ ಏಕೆ ರಿಸ್ಕ್ ಎಂದ, ಅದರೆ, ನಾನು ಲಕ್ಷ್ಮಿಕಾಂತ್ ಅವರು ವಾಪಸ್ ಹೋಗಲು ನಿರ್ಧರಿಸಿದಾಗ ವಿಧಿ ಇಲ್ಲದೆ ಗಾಡಿ ರಿಸರ್ವ್ ತೆಗೆದು ಚೆಕ್ ಪೋಸ್ಟ್ ಕಡೆಗೆ ತಿರುಗಿತು. ನೀವು ಮುಸ್ಲಿಮಾ ಬೇರೆ ಮತದವರಾ? ಎಂದು ಕೇಳಿದರು. 19 ರಿಂದ 20 ವರ್ಷ ಹುಡುಗರು, ಅವರಿಗೆ ಕೊಟ್ಟ ನಿರ್ದೇಶನವನ್ನು ಪಾಲಿಸುತ್ತಿದ್ದರು.

15ದಿನ ಹಿಂದೆ ಸಿಕ್ಕಿದ್ದ ವಿದ್ಯಾರ್ಥಿ ಈಗ ಉಗ್ರನ ಗೆಟ್ ಅಪ್

15ದಿನ ಹಿಂದೆ ಸಿಕ್ಕಿದ್ದ ವಿದ್ಯಾರ್ಥಿ ಈಗ ಉಗ್ರನ ಗೆಟ್ ಅಪ್

ಚೆಕ್ ಪಾಯಿಂಟ್ ನಲ್ಲಿ ಫ್ಲಾಗ್ ನೋಡಿ ಗೊತ್ತಾಯಿತು. ಅರೇಬಿಕ್ ವರ್ಡ್, ಉಗ್ರರು ಎಂದು ತಕ್ಷಣವೇ ಗೊತ್ತಾಯಿತು, ನನ್ನ ವಿದ್ಯಾರ್ಥಿಯೇ ಅಲ್ಲಿದ್ದ. ಗ್ರೇನೇಡ್, ಎಕೆ 47 ಹಿಡಿದು ಕೊಂಡಿದ್ದರು.

15 ದಿನಗಳ ಹಿಂದೆ ನನ್ನ ವಿದ್ಯಾರ್ಥಿ ಅದೇ ವಿದ್ಯಾರ್ಥಿ ಶಿರ್ತೆ ಸಿಕ್ಕಿದ್ದ, ಯಾಕೋ ಅಲ್ಲಿ ಸೇರಿದ್ದೀಯಾ ಎಂದರೆ ಲಿಬಿಯಾದಲ್ಲಿ ಜೀವನ ಸಾಗಿಸಬೇಕಾದರೆ ಇವರ ಮಾತು ಕೇಳಬೇಕು ಎಂದು ಬಿಟ್ಟ.

ಸಂಜೆ ಐದು ಗಂಟೆ ಸಮಯ ವಿಚಾರಣೆ ಶುರು

ಸಂಜೆ ಐದು ಗಂಟೆ ಸಮಯ ವಿಚಾರಣೆ ಶುರು

ಎಲ್ಲಿ ಕೆಲಸ ಎಂದು ಮೊದಲಿಗೆ ಪ್ರಶ್ನಿಸಿದರು. ಟೀಚರ್, ಡಾಕ್ಟರ್ ಎಂದ್ವಿ. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಎಂದೆ, ಮೆಕ್ಯಾನಿಕಲ್, ಕಂಪ್ಯೂಟರ್ ಪಾಠ ಮಾಡುತ್ತೇವೆ ಎಂದೆವು.

ನಾನು ಅಸಿಸ್ಟೆಂಟ್ ಪ್ರೊಫೆಸರ್ ಎಂದೇ ಅವರಿಗೆ ಇಂಗ್ಲೀಷ್ ಬರಲ್ಲ. ನನ್ನ ವಿದ್ಯಾರ್ಥಿ ಭಾಷಾಂತರ ಮಾಡಿದ. ಮೊಬೈಲ್ ಕಸಿದು ಕೊಂಡರು ನಂತರ ಸಿಟಿಗೆ ಕರೆದು ಕೊಂಡು ಹೋಗಿ ಗೋಡೌನ್ ಗೆ ಕರೆದೊಯ್ದರು.
ಶಿಕ್ಷಕರು ಖಾತ್ರಿಯಾದ ಮೇಲೆ ಗೌರವಿಸಿದರು.

ಶಿಕ್ಷಕರು ಖಾತ್ರಿಯಾದ ಮೇಲೆ ಗೌರವಿಸಿದರು.

ಇವರು ನಮ್ಮ ಯೂನಿವರ್ಸಟಿಯಲ್ಲಿ ಉಪನ್ಯಾಸಕರು ಎಂದು ತಿಳಿದ ಮೇಲೆ ಗೌರವ ನೀಡಿದರು. ನಮ್ಮ ಕೈಲಿ ಯಾವ ಕೆಲಸವನ್ನು ಮಾಡಿಸಿಕೊಳ್ಳಲಿಲ್ಲ. ನಾವೇ ಮಾಡೋಣ ಎಂದು ಅಲ್ಲಿದ್ದ ಯುವಕರು ಹೇಳಿದರು. ಅವರು ಟೀಚರ್ಸ್ ಗೆ ಗೌರವ ಕೊಟ್ಟಿದ್ದು ನೋಡಿ ನನಗೆ ಖುಷಿಯಾಯಿತು. ರಾತ್ರಿ ಮಲಗಿದೆವು ಮರುದಿನ 2 ಗಂಟೆಗೆ ಊಟ. ಮತ್ತೆ ನೀವು ಮುಸ್ಲಿಮ ಎಂದು ಕೇಳಿದ. ಮುಸ್ಲಿಂ ಬಗ್ಗೆ ನಮಗಿದ್ದ ಅಲ್ಪ ಸ್ವಲ್ಪ ಅರಿವು ನೆರವಿಗೆ ಬಂತು. ಇನ್ಶಾ ಅಲ್ಲಾಹ್ ಎಂದು ಹೇಳಿದ.

ಲಗೇಜ್ ಬಂತು ಭಯ ಕಡಿಮೆ ಆಗ್ತಾ ಬಂತು

ಲಗೇಜ್ ಬಂತು ಭಯ ಕಡಿಮೆ ಆಗ್ತಾ ಬಂತು

ನಾನು ಲಕ್ಷ್ಮಿಕಾಂತ್ ಗೂ ಹೇಳಿದೆ ಧೈರ್ಯವಾಗಿರಿ, ಒಳ್ಳೆಯದು ಸಂಭವಿಸಲಿದೆ ಎಂದು. ಬೇರೆ ಜಾಗಕ್ಕೆ ಬಿಟ್ಟು ಸಂಜೆ 6 ಗಂಟೆಗೆ ನಮ್ಮ ಲಗೇಜ್ ಬಂತು ಭಯ ಕಡಿಮೆ ಆಗ್ತಾ ಬಂತು ನಮ್ಮನ್ನು ಟಚ್ ಮಾಡಲಿಲ್ಲ, ಸರ್ಚ್ ಮಾಡಲಿಲ್ಲ.

8.30 ಬ್ರೆಡ್ ತಂದು ಕೊಟ್ಟರು. ಆಗಾಗ ಕ್ರಾಸ್ ಚೆಕ್ ಮಾಡುತ್ತಿದ್ದರು. ಯಾರ ಯಾರ ಹತ್ತಿರ ಎಷ್ಟು ದುಡ್ಡಿದೆ ಎಂದು ಕೇಳಿದರು. ನಿಮ್ಮ ಲಗೇಜ್ ಐಡೆಂಟಿಫೈ ಮಾಡಿ ಎಂದು ಕೇಳಿದರು. ಎಲ್ಲಾ ಮಿಕ್ಸ್ ಆಗಿ ಬಿಟ್ಟಿತ್ತು.

ಬೇರೆ ರೂಮಿಗೆ ಶಿಫ್ಟ್ ಮಾಡಿದರು

ಬೇರೆ ರೂಮಿಗೆ ಶಿಫ್ಟ್ ಮಾಡಿದರು

ನನ್ನ ಬಳಿ 2400 ದಿನಾರ್ ಇತ್ತು. ಲಕ್ಷ್ಮಿಕಾಂತ್ ಬಳಿ ಇದ್ದ ಸಾವಿರಾರು ಡಾಲರ್ ಹಾಗೆ ಇತ್ತು. ಬೇರೆ ರೂಮಿಗೆ ಶಿಫ್ಟ್ ಮಾಡಿದರು. ಬೆಡ್ ಎಲ್ಲವೂ ಚೆನ್ನಾಗಿತ್ತು. ಬಾಗಿಲು ಕೂಡಾ ಲಾಕ್ ಮಾಡಲಿಲ್ಲ. ಬಾಗಿಲು ಹಾಕುವುದಿಲ್ಲ. ಬೇರೆ ಮೂರು ರೂಮ್ ಲಾಕ್ ಆಗಿತ್ತು. ಅದನ್ನು ಓಪನ್ ಮಾಡಬೇಡಿ ಎಂದು ಹೇಳಿದರು. ಹಾಗೆ ಮಾಡಿದೆವು.12 ಗಂಟೆಗೆ ನನ್ನ ಲಕ್ಷ್ಮಿಕಾಂತ್ ನ ಕರೆದುಕೊಂಡು ಹೋಗಿ ನಮ್ಮ ಬಳಿ ಇದ್ದ ಲಗ್ಗೇಜ್ ಬಗ್ಗೆ ವಿಚಾರಿಸಿದರು

ಮನೆಗೆ ಕಾಲ್ ಮಾಡ್ಬಹುದಾ ಎಂದು ಕೇಳಿದೆ

ಮನೆಗೆ ಕಾಲ್ ಮಾಡ್ಬಹುದಾ ಎಂದು ಕೇಳಿದೆ

ನಾವು ಹೇಳಿದ್ದು ಎಲ್ಲವೂ ಸರಿ ಇದೆ ಎನಿಸಿದ ಮೇಲೆ,ಲ್ಯಾಪ್ ಟಾಪ್ ಮೊಬೈಲ್ ಕೊಟ್ಟರು, ಮನೆಗೆ ಕಾಲ್ ಮಾಡ್ಬಹುದು ಎಂದು ಕೇಳಿದೆ. ಅನುಮತಿ ನೀಡಿದರು ಆಮೇಲೆ ಬಿಡುಗಡೆಯಾಯಿತು. ಯೂನಿವರ್ಸಿಟಿ ಗೆ ಬಂದೆವು. ಈಗ ಮನೆಯಲ್ಲೇ ಕಟ್ಟಿ ಹಾಕಿದ್ದಾರೆ. ಇಲ್ಲೇ ಇದ್ದು ಸರ್ಕಾರಿ ಶಾಲೆ ವಿದ್ಯಾರ್ಥಿಗಳೇ ಪಾಠ ಮಾಡಿದರೆ ಸಾಕು ಎಂದು ಬಿಟ್ಟಿದ್ದಾರೆ ಎಂದು ವಿಜಯ್ ಕುಮಾರ್ ಹೇಳಿದ್ದಾರೆ.

ಒಳ್ಳೆ ಟೀಚರ್ ಆಗಿರುವುದು ಜೀವ ಉಳಿಸಿತು

ಒಳ್ಳೆ ಟೀಚರ್ ಆಗಿರುವುದು ಜೀವ ಉಳಿಸಿತು

ಒಳ್ಳೆ ಟೀಚರ್ ಆಗಿರುವುದು ಜೀವ ಉಳಿಸಿತು. ಶೇ 99 ರಷ್ಟು ಹುಡುಗಿಯರು ಇದ್ದಾರೆ. ಉಗ್ರರ ಬಗ್ಗೆ ಹುಡುಗಿಯರು ಬೆದರಿಕೆ ಹಾಕುತ್ತಿದ್ದರು, ನನ್ನ ತಮ್ಮ ಅಲ್ ಷರಿಯಾಗೆ ತಿಳಿಸುತ್ತೇನೆ ಮಾರ್ಕ್ಸ್ ಕೊಡಿ ಎನ್ನುತ್ತಿದ್ದರು. ಅದರೆ, ಅದೆಲ್ಲವೂ ಹುಸಿ ಬೆದರಿಕೆಯಾಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಶಿಕ್ಷಕರಿಗೆ ಅವರು ಗೌರಾ ಕೋಡುವ ರೀತಿ ಅನನ್ಯ.

English summary
Vijay Kumar, one of the teachers who was kidnapped in Libya by Islamic State shares his Kidnap experience with the terror group Islamic State (ISIS). All the four Indians have returned to India, safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X