ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಧುಮೇಹಕ್ಕೆ ನೀಡುವ ಈ ಮಾತ್ರೆಯಲ್ಲಿ ಪ್ಲಾಸ್ಟಿಕ್: ಇಲಾಖೆ ಹೇಳೋದೇನು?

|
Google Oneindia Kannada News

ಬೆಂಗಳೂರು, ಜನವರಿ 15: ಮಧುಮೇಹವುಳ್ಳವರು ಸೇವಿಸುತ್ತಿರುವ ಮಾತ್ರೆ ಪ್ಲಾಸ್ಟಿಕ್‌ದು ಎನ್ನುವ ವಿವಾದ ಉಂಟಾಗಿದೆ.

ಮಧುಮೇಹಿಗಳು ಸೇವಿಸುವ ಮೆಟ್‌ಫಾರ್ಮಿನ್ ಹೆಸರಿನ ಮಾತ್ರೆಗಳು ಪ್ಲಾಸ್ಟಿಕ್ ಮಾತ್ರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಶುಗರ್ ಮಾತ್ರೆಯಲ್ಲಿ ಪ್ಲಾಸ್ಟಿಕ್ ಪತ್ತೆ: ತರಾಟೆಗೆ ತೆಗೆದುಕೊಂಡ ದಾವಣಗೆರೆ ಜನರುಶುಗರ್ ಮಾತ್ರೆಯಲ್ಲಿ ಪ್ಲಾಸ್ಟಿಕ್ ಪತ್ತೆ: ತರಾಟೆಗೆ ತೆಗೆದುಕೊಂಡ ದಾವಣಗೆರೆ ಜನರು

ಮಧುಮೇಹದಿಂದ ಬಳಲುತ್ತಿರುವ ಬೆಂಗಳೂರಿನ ವ್ಯಕ್ತಿಯೊಬ್ಬರು ಈ ಮಾತ್ರೆ ಸೇವಿಸಿದ್ದು, ಮರುದಿನ ವಾಂತಿ ಮಾಡಿದಾಗ ಮಾತ್ರೆ ಕರಗದೆ ಹಾಗೆ ಇತ್ತು. ಎಂಟು ತಾಸು ನೀರಿನಲ್ಲಿ ಹಾಕಿದರೂ ಮಾತ್ರೆ ಕರಗಿರಲಿಲ್ಲ. ಎಲ್ಲಾ ಔಷಧ ಅಂಗಡಿಗಳಲ್ಲೂ ಈ ಮಾತ್ರೆ ಮಾರಾಟವಾಗುತ್ತಿದೆ.

Is This Pill For Diabetics Made Up Of Plastic

ಇದು ಪ್ಲಾಸ್ಟಿಕ್ ಮಾತ್ರೆಯಾಗಿದ್ದು, ಪ್ರಾಣಕ್ಕೆ ಅಪಾಯವನ್ನು ಉಂಟು ಮಾಡುತ್ತದೆ. ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮೆಟ್ ಫಾರ್ಮಿನ್ ಪ್ಲಾಸ್ಟಿಕ್ ಮಾತ್ರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಔಷಧ ನಿಯಂತ್ರಣ ಇಲಾಖೆ ನಿರ್ದೇಶಕ ಬಿ.ಟಿ. ಖಾನಾಪುರೆ, ಈ ಮಾತ್ರೆ ಪ್ಲಾಸ್ಟಿಕ್ ಎಂಬುದನ್ನು ನಿರಾಕರಿಸಿದ್ದಾರೆ.

ಮಧು ಮೇಹಿಗಳು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಶೇ.90ರಷ್ಟು ಮಧುಮೇಹಿಗಳು ಈ ಮಾತ್ರೆಯನ್ನೇ ಬಳಕೆ ಮಾಡುತ್ತಿದ್ದಾರೆ. ಸದ್ಯ ಆ ಬ್ಯಾಚ್‌ನ ಮಾತ್ರೆಗಳನ್ನು ಬ್ಯಾನ್ ಮಾಡಲಾಗಿದೆ. ಈ ಮಾತ್ರೆ ಸಿಕ್ಕಿಂನಲ್ಲಿ ತಯಾರಾಗುತ್ತದೆ.

ಹೀಗಾಗಿ ಆ ಕಂಪನಿಯನ್ನು ಸಂಪರ್ಕಿಸಿದ್ದು, ಮಾತ್ರೆ ತಯಾರಿಕೆ ವಿಧಾನಗಳ ಬಗ್ಗೆ ಮಾಹಿತಿ ಕೇಳಲಾಗಿದೆ. ಬಳಿಕ ನಮ್ಮ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವಿನಾಕಾರಣ ಆ ವಡಿಯೋವನ್ನು ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

English summary
There is controversy over whether the pill consumed by people with diabetes is plastic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X