ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಷ್ಟಕ್ಕೂ ಮ್ಯಾಗಿ ನಿಜಕ್ಕೂ ಅಷ್ಟೊಂದು ಭಯಂಕರವೇ?

By Mahesh
|
Google Oneindia Kannada News

ಚೈನಿಸ್ ಫುಡ್ ಲವರ್ಸ್ ಗೆ ಈಗ ದುರ್ಭಿಕ್ಷ ಕಾಲ. ಮಳೆಗಾಲ, ಚಳಿಗಾಲ, ಬೇಸಿಗೆ ಹೀಗೆ ಕಾಲ ಯಾವುದೇ ಇರಲಿ ತ್ವರಿತಗತಿಯಲ್ಲಿ ಬ್ಯಾಚುಲರ್ಸ್, ಮಕ್ಕಳು, ಕೆಲವೊಮ್ಮೆ ಹಿರಿಹಿರಿ ಹಿರಿಯರೂ ಇಷ್ಟವಾಗುತ್ತಿದ್ದ ಟೇಸ್ಟಿ ಫುಡ್ '2ಮಿನಿಟ್ ವಂಡರ್ ಫುಡ್' ಮ್ಯಾಗಿ ನೂಡಲ್ಸ್ ಈಗ ಅನೇಕ ಕಡೆ ಬ್ಯಾನ್ ಆಗಿದೆ.

80ರ ದಶಕದಲ್ಲಿ ನೆಸ್ಲೆಯಿಂದ ಭಾರತದ ಮನೆ ಮನೆಗೆ ತಲುಪಿದ ಮ್ಯಾಗಿ ಸುರುಳಿ ಸುತ್ತಿದ್ದಂತೆ ತನ್ನ ಜಾಲವನ್ನು ವಿಸ್ತರಿಸುತ್ತಾ ಮಾರುಕಟ್ಟೆಯಲ್ಲಿ ಕಿಂಗ್ ಆಗಿ ಬಿಟ್ಟಿತು. ಮ್ಯಾಗಿ ಮಸಾಲ, ಸೂಪ್ ಮಿಕ್ಸ್ ಗಳು ಅತ್ಯಂತ ಜನಪ್ರಿಯ ಹಾಗೂ ನಂಬಿಕೆಗೆ ಅರ್ಹವಾದ ಆಹಾರ ಉತ್ಪನ್ನ ಎನಿಸಿಕೊಂಡವು. [ಮ್ಯಾಗಿ ನಿಷೇಧ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನೆಸ್ಲೆ]

ಮ್ಯಾಗಿ ಸುರಕ್ಷತೆಗೆ ಬೇಲಿ ಹರಿದಿದ್ದು...
ಉತ್ತರ ಪ್ರದೇಶದ ಆಹಾರ ಸುರಕ್ಷತಾ ಹಾಗೂ ಔಷಧ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಯೊಬ್ಬರು ಮ್ಯಾಗಿ ಸ್ಯಾಂಪಲ್ಸ್ ಪರೀಕ್ಷೆ ಮಾಡಿ ಫಲಿತಾಂಶ ನೋಡಿ ಹೌಹಾರಿದರು. ಇದರಲ್ಲಿ ಮೋನೋ ಸೋಡಿಯಂ ಗ್ಲುಮೇಟ್(ಎಂಎಸ್ ಜಿ) ಹಾಗೂ ಸೀಸದ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಗಿತ್ತು. ನೆಸ್ಲೆ ನಮೂದಿಸಿದ ಪ್ರಮಾಣ ಮೀರಿ ಆರೋಗ್ಯಕ್ಕೆ ಹಾನಿಕರವಾದ ಅಂಶ ಮ್ಯಾಗಿಯಲ್ಲಿ ಕಂಡು ಬಂದಿತು.

Is the tasty and yummy instant noodle Maggi really unsafe?

ಇಲ್ಲಿಂದ ಮೊದಲುಗೊಂಡು ದೇಶ ಅನೇಕ ಕಡೆಗಳಲ್ಲಿ ಮ್ಯಾಗಿ ಗುಣಮಟ್ಟ ಪರೀಕ್ಷೆ ಶುರುವಾಯಿತು. ತಾತ್ಕಾಲಿಕ ಮಾರಾಟ ನಿರ್ಬಂಧ ನಂತರ ಸೇವನೆ ನಿಷೇಧ ಜಾರಿಗೊಂಡಿತು. ದೇಶದ ಬಹುತೇಕ ಮಳಿಗೆಗಳಲ್ಲಿದ್ದ ಮ್ಯಾಗಿ ಪ್ಯಾಕೇಟ್ ಗಳನ್ನು ನೆಸ್ಲೆ ಹಿಂದಕ್ಕೆ ಪಡೆದುಕೊಂಡಿತು. ಈಗ ಮ್ಯಾಗಿ ನಿಷೇಧ ಪ್ರಶ್ನಿಸಿ ಕಾನೂನು ಸಮರಕ್ಕೂ ನೆಸ್ಲೆ ಮುಂದಾಗಿದೆ.

ಇದಕ್ಕೆಲ್ಲ ನಿಷೇಧವೇ ಪರಿಹಾರವೇ?
ಮ್ಯಾಗಿ ನ್ಯೂಡಲ್ಸ್ ನಿಷೇಧ ಹೇರುವುದರಿಂದ ಇತರೆ ಬ್ರ್ಯಾಂಡ್ ಗಳು ಸೇಫ್ ಎಂದು ಕರೆಯಲು ಹೇಗೆ ಸಾಧ್ಯ? ನೂಡಲ್ಸ್ ನಲ್ಲಿರ ಬೇಕಾದ ಪೌಷ್ಟಿಕಾಂಶದ ಪ್ರಮಾಣದ ಬಗ್ಗೆ ಯಾರಿಗೆ ಅರಿವಿದೆ? ಆಹಾರ ಮತ್ತು ಔಷಧ ಪ್ರಾಧಿಕಾರದ ಅನುಮತಿ ಪಡೆಯದೆ ಆಹಾರ ಸಂಸ್ಕರಿತ ಉತ್ಪನ್ನ ಮಾರುಕಟ್ಟೆಗೆ ಬರಲು ಹೇಗೆ ಸಾಧ್ಯ? ವೈಜ್ಞಾನಿಕ ಸಂಶೋಧನೆಗಳು ಕೂಡಾ ಎಂಎಸ್ ಜಿ ಅತ್ಯಂತ ಹಾನಿಕಾರಕ ಎಂದು ಸಾಬೀತುಪಡಿಸಲು ಸೋತಿದೆ. ಹೀಗಾಗಿ ಎಂ ಎಸ್ ಜಿ ಬಳಕೆ ನಿರ್ಬಂಧಿಸುವುದು ಒಳ್ಳೆಯದಲ್ಲವೇ?

ಮಾಧ್ಯಮಗಳಲ್ಲಿ ಬರುವ ವರದಿಗಳೇ ಅಂತಿಮವೇ? ವೈಜ್ಞಾನಿಕ ಹಾಗೂ ಪರೀಕ್ಷಾ ಫಲಿತಾಂಶ ವರದಿಗಳಿಲ್ಲದೆ ಎಲ್ಲವನ್ನು ನಂಬಿದರೆ ಯಾವ ಆಹಾರವನ್ನು ಸೇವಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಿ ನಂತರ ನಿಮ್ಮ ನಿರ್ಧಾರ ಕೈಗೊಳ್ಳಿ.
"The food you eat can be either the safest and most powerful form of medicine or the slowest form of poison" Ann Wigmore

ಈ ಲೇಖನ ಸ್ಕೂಲ್ ಪೇಜ್ ನಲ್ಲಿ ಪ್ರಕಟಿತವಾಗಿದೆ.ಇದರ ಇಂಗ್ಲೀಷ್ ಲಿಂಕ್ ಇಲ್ಲಿದೆ

English summary
The Chinese food lovers are facing a tough time as the most popular two minutes Maggi noodles faces ban. The tasty noodles was not only famous among food lovers but also among the working population for ease of preparation.Is the tasty and yummy instant noodle Maggi really unsafe?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X